ಮದ್ಯದ ಬೆಲೆ ಹೆಚ್ಚಳದಿಂದ ಬಡವರಿಗೆ ಸಮಸ್ಯೆ: ಶಾಸಕ ಕೃಷ್ಣಪ್ಪ
ಮದ್ಯದ ದರ ಏರಿಕೆಯಿಂದ ಜನರಿಗಾಗುತ್ತಿರುವ ಸಮಸ್ಯೆ ಕುರಿತಂತೆ ವಿಧಾನಸಭೆಯಲ್ಲಿ ಮಂಗಳವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಅಬಕಾರಿ ಸುಂಕ ಹೆಚ್ಚಳ ಮಾಡಿದೆ.
ವಿಧಾನಸಭೆ (ಜು.19): ಮದ್ಯದ ದರ ಏರಿಕೆಯಿಂದ ಜನರಿಗಾಗುತ್ತಿರುವ ಸಮಸ್ಯೆ ಕುರಿತಂತೆ ವಿಧಾನಸಭೆಯಲ್ಲಿ ಮಂಗಳವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಅಬಕಾರಿ ಸುಂಕ ಹೆಚ್ಚಳ ಮಾಡಿದೆ. ಕೂಲಿ ಕಾರ್ಮಿಕರು, ರೈತರು ದಿನವಿಡೀ ಕಷ್ಟಪಟ್ಟು ದುಡಿದು ಸಂಜೆ ವೇಳೆ ಮದ್ಯ ಸೇವಿಸಬೇಕೆಂದರೆ ಹೆಚ್ಚಿನ ದರ ಕೊಡಬೇಕಿದೆ. ಬಡವರ, ರೈತರ ಹೊಟ್ಟೆಮೇಲೆ ಹೊಡೆದು 5 ಗ್ಯಾರಂಟಿಗಳನ್ನು ಜಾರಿ ಮಾಡುವ ಅವಶ್ಯಕತೆ ಏನಿತ್ತು.
ರಾಜ್ಯದಲ್ಲಿ ಶೇ. 46ರಷ್ಟು ಜನರು ಕೂಲಿ ಕಾರ್ಮಿಕರು, ರೈತರಾಗಿದ್ದಾರೆ. ಅವರಿಗೆಲ್ಲ ಮದ್ಯದ ದರ ಏರಿಕೆಯಿಂದ ಸಮಸ್ಯೆ ಎದುರಾಗಲಿದೆ ಎಂದರು. ಆಗ ಮಧ್ಯಪ್ರವೇಶಿಸಿದ ಸಚಿವ ಡಾ. ಶರಣಪ್ರ ಕಾಶ್ ಪಾಟೀಲ್, ಮದ್ಯ ಸೇವನೆ ಕಡ್ಡಾಯವಾಗಿಸಿ ರಾಜ್ಯ ಸರ್ಕಾರ ಆದೇಶಿಸಿಲ್ಲ. ಹೀಗಾಗಿ ಜನರು ತಮಗೆ ಬೇಕಾದರೆ ಮದ್ಯ ಸೇವಿಸಬಹುದು. ದರ ಹೆಚ್ಚಾಯಿತು ಭರಿಸಲಾಗುವುದಿಲ್ಲ ಎಂದರೆ ಬಿಡಬಹುದು ಎಂದರು. ಕಾಂಗ್ರೆಸ್‌ನ ಕೆ. ಷಡಕ್ಷರಿ ಮಾತನಾಡಿ, ಎಂ.ಟಿ. ಕೃಷ್ಣಪ್ಪ ಅವರು ಜನರನ್ನು ಕುಡಿಯುವುದಕ್ಕೆ ಪ್ರೇರೇಪಿಸುತ್ತಿದ್ದೀರಾ.
ಕನ್ನಡಕ್ಕೆ ಕತ್ತರಿ: ಶಾಲೆ ವಿರುದ್ಧ ಕ್ರಮಕ್ಕೆ ಸಚಿವ ತಂಗಡಗಿ ಪತ್ರ
ಆಮೂಲಕ ಜನರನ್ನು ಹಾಳು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ, ಕುಡಿಯುವುದಕ್ಕೂ ಸರ್ಕಾರದಿಂದ ಸಬ್ಸಿಡಿ ಕೊಡಿಸೋಣ ಬಿಡು ಎಂದು ವ್ಯಂಗ್ಯವಾಡಿದರು. ಎಂ.ಟಿ. ಕೃಷ್ಣಪ್ಪ ಮಾತು ಮುಂದುವರಿಸಿ, ಸರ್ಕಾರ ವಿದ್ಯುತ್, ಮೂಲಸೌಕರ್ಯ ಕ್ಷೇತ್ರಗಳಿಗೆ ಸರಿಯಾದ ಒತ್ತು ನೀಡಿಲ್ಲ. ನೀರಾವರಿ ಯೋಜನೆಗಳತ್ತ ಗಮನವನ್ನೇ ಹರಿಸಿಲ್ಲ. ನೀರಾವರಿ ಯೋಜನೆಗಳಿಂದಲೇ ರೈತರ ಜೀವನ ಬದಲಾಗಲಿದೆ. ಆ ಬಗ್ಗೆ ಸರ್ಕಾರ ಗಮನಹರಿಸದೆ, ಅಬಕಾರಿ ಸುಂಕ ಹೆಚ್ಚಿಸಿದೆ ಎಂದು ಹರಿಹಾಯ್ದರು.
ಆಕ್ಸಿಜನ್ ಸಿಲೆಂಡರ್ ಹೊತ್ತು ತಿರುಗುವ ದಿನ ದೂರವಿಲ್ಲ: ಪರಿಸರ ನಾಶ ಮಾಡುವ ಹುನ್ನಾರ ಇದೇ ಪ್ರವೃತ್ತಿಯಲ್ಲಿ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಆಕ್ಸಿಜನ್ ಸಿಲೆಂಡರ್‌ಗಳನ್ನು ಹೊತ್ತು ತಿರುಗುವ ದಿನಗಳು ದೂರವಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಗುಡ್ಡೇನಹಳ್ಳಿಯ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆಯ ಚಿಕ್ಕನಾಯಕನಹಳ್ಳಿ ಪ್ರಾದೇಶಿಕ ವಲಯ, ತುರುವೇಕೆರೆಯ ಸಾಮಾಜಿಕ ವಲಯ ಹಾಗೂ ಸರ್ಕಾರಿ ಪದವಿ ಕಾಲೇಜಿನ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ವರ್ಷ ಸರ್ಕಾರದಿಂದ ಕೋಟಿ ಕೋಟಿ ಲೆಕ್ಕದಲ್ಲಿ ಸಸಿಗಳನ್ನು ನಡೆಸುವ ಕಾರ್ಯ ನಡೆಯುತ್ತಲೇ ಇದೆ. ಸಸಿಗಳನ್ನು ನೆಟ್ಟಕೆಲವೇ ದಿನಗಳಲ್ಲಿ ಅವುಗಳು ಹಾಳಾಗುತ್ತಿವೆ. ಜನರು ಇದೊಂದು ಸರ್ಕಾರಿ ಕಾರ್ಯಕ್ರಮ ಎಂತಲೇ ಭಾವಿಸಿದ್ದಾರೆ. ನೆಟ್ಟಸಸಿಗೆ ನೀರೆರುವ ಪ್ರಯತ್ನವನ್ನೂ ಮಾಡದಿರುವುದು ದುಃಖದ ಸಂಗತಿ. ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು, ಪೋಷಿಸಿ ಬೆಳೆಸಿದರೆ ಅದರ ಫಲವನ್ನು ಮುಂದೊಂದು ದಿನ ನಾವೇ ಉಣ್ಣುತ್ತೇವೆ ಎಂದು ಹೇಳಿದರು.
ಸಿದ್ದು ಸಿಎಂ ಆಗಿದ್ದಕ್ಕೆ ಸೌದಿಯಿಂದ ಬಂದು ಹರಕೆ ತೀರಿಸಿದ ಅಭಿಮಾನಿ
ಹಸಿರಿಲ್ಲದೇ ಉಸಿರಿಲ್ಲ ಎಂಬ ಧ್ಯೇಯ ವಾಕ್ಯ ನಮ್ಮೆಲ್ಲರ ಉಸಿರಾಗಬೇಕು. ಗಿಡ ಮರಗಳು ಇದ್ದರಷ್ಟೇ ನಾವು ಉಸಿರಾಡಲು ಸಾಧ್ಯ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ದಿನೇ ದಿನೇ ನಾಡು ಕಾಂಕ್ರೀಟ್ ನಾಡಾಗುತ್ತಿದೆ. ಮನೆಗಳು ಬೆಳೆದಷ್ಟು ಮರಗಳು ಬೆಳೆಯಬೇಕು. ನಾಡು ಮರಗಳಿಲ್ಲದೇ ಬರಡಾದರೆ, ಮುಂಬರುವ ದಿನಗಳೂ ನಮ್ಮ ಪಾಲಿಗೆ ಬರಡಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಶಾಸಕ ಕೃಷ್ಣಪ್ಪ ಎಚ್ಚರಿಕೆ ನೀಡಿದರು.