ರಾಜಕೀಯ ಮಾಡುವುದಕ್ಕಾಗಿ ವಿಪಕ್ಷದವರು ವಿರೋಧ ಮಾಡುತ್ತಾರೆ. ವಿಪಕ್ಷದವರ ಟೀಕೆಗೆ ಮಹತ್ವ ಕೊಡಬೇಕಿಲ್ಲ. ಈ ಬಜೆಟ್‌ ಸರ್ಕಾರಕ್ಕೆ, ಪಕ್ಷಕ್ಕೆ ಅನುಕೂಲ ಆಗಲಿದೆ. ಕಷ್ಟಕಾಲದಲ್ಲಿಯೂ ಸುಮಾರು 30 ಸಾವಿರ ಕೋಟಿ ಗೃಹಲಕ್ಷ್ಮೀಗೆ, 10 ಸಾವಿರ ಕೋಟಿ ವಿದ್ಯುತ್‌ಗೆ, 10 ಸಾವಿರ ಕೋಟಿ ಅಕ್ಕಿ ಯೋಜನೆಗೆ, 4 ಸಾವಿರ ಕೋಟಿ ಸಾರಿಗೆಗೆ ಕೊಟ್ಟು ಯಾವುದೇ ಯೋಜನೆ ಕಡಿತಗೊಳಿಸದೆ ಒಂದಿಷ್ಟುಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದ ಸತೀಶ್‌ ಜಾರಕಿಹೊಳಿ 

ಬೆಳಗಾವಿ(ಜು.09): ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗೆ ಅನುದಾನ ಕೊಟ್ಟು, ಹೊಸ ಯೋಜನೆ ಘೋಷಣೆ ಮಾಡಿದ್ದಾರೆ. ಬಜೆಟ್‌ ಬಗ್ಗೆ ವಿಕ್ಷಪದವರಿಂದ ಟೀಕೆ ಸ್ವಾಭಾವಿಕ. ಆದರೆ, ಬಜೆಟ್‌ ಬಗ್ಗೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಮಾಡುವುದಕ್ಕಾಗಿ ವಿಪಕ್ಷದವರು ವಿರೋಧ ಮಾಡುತ್ತಾರೆ. ವಿಪಕ್ಷದವರ ಟೀಕೆಗೆ ಮಹತ್ವ ಕೊಡಬೇಕಿಲ್ಲ. ಈ ಬಜೆಟ್‌ ಸರ್ಕಾರಕ್ಕೆ, ಪಕ್ಷಕ್ಕೆ ಅನುಕೂಲ ಆಗಲಿದೆ. ಕಷ್ಟಕಾಲದಲ್ಲಿಯೂ ಸುಮಾರು .30 ಸಾವಿರ ಕೋಟಿ ಗೃಹಲಕ್ಷ್ಮೀಗೆ, .10 ಸಾವಿರ ಕೋಟಿ ವಿದ್ಯುತ್‌ಗೆ, .10 ಸಾವಿರ ಕೋಟಿ ಅಕ್ಕಿ ಯೋಜನೆಗೆ, .4 ಸಾವಿರ ಕೋಟಿ ಸಾರಿಗೆಗೆ ಕೊಟ್ಟು ಯಾವುದೇ ಯೋಜನೆ ಕಡಿತಗೊಳಿಸದೆ ಒಂದಿಷ್ಟುಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಬಜೆಟ್‌ ಬಗ್ಗೆ ಬಿಜೆಪಿಗೆ ಮಾತನಾಡುವ ನೈತಿಕ ಹಕ್ಕಿಲ್ಲ: ಶಾಸಕ ಲಕ್ಷ್ಮಣ ಸವದಿ

ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ 5 ಯೋಜನೆಗಳು ಜಾರಿಗೆಯಾಗುವುದಿಲ್ಲವೆಂದು ಬಿಜೆಪಿಯವರು ಬೀದಿ ಬೀದಿಗಿಳಿದು ಹೋರಾಟ ಮಾಡಬೆಕೇಂದು ಸದನದ ಒಳಗೆ ಹಾಗೂ ಹೊರಗೆ ತಯಾರಿ ನಡೆಸಬೇಕೆಂದು ಭ್ರಮೆಯಲ್ಲಿದೆ. ಆದರೆ, ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದು ಎಲ್ಲ ಯೋಜನೆಗಳನ್ನು ಜಾರಿ ಮಾಡಿ ರಾಜ್ಯದ ಜನರ ಮನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.

ಅಬಕಾರಿ ಸುಂಕ ಹೆಚ್ಚಳ ಕುಡುಕರ ಆಕ್ರೋಶ ವಿಚಾರಕ್ಕೆ ಉತ್ತರಿಸಿದ ಅವರು, ಅದು ಒಂದೇ ಇಲಾಖೆಯಲ್ಲಿ ಪ್ರತಿಭಟನೆ ಮಾಡುವುದಿಲ್ಲ. ಅದು ವಿಚಿತ್ರ ಇಲಾಖೆ, ಈ ಬಾರಿ ಇಪ್ಪತ್ತು ಪರ್ಸಂಟ್‌ ಮಾಡಿದ್ದಾರೆ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಕಡಿಮೆ ಇದೆ. 100 ರಷ್ಟುಹೆಚ್ಚಳ ಮಾಡಿದರೂ ಏನು ಆಗಲ್ಲ ಎಂದರು.

Karnataka Budget 2023: ಆಶಾದಾಯಕ, ಜನಪರ, ಜನಸ್ನೇಹಿ ಬಜೆಟ್‌: ಸತೀಶ್‌ ಜಾರಕಿಹೊಳಿ

ಲೋಕೋಪಯೋಗಿ ಇಲಾಖೆಗೆ .10.143 ಕೋಟಿ ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ .10.143 ಕೋಟಿ ನೀಡಲಾಗಿದೆ. ಅಲ್ಲದೇ ಬೆಳಗಾವಿಯಲ್ಲಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ದೇಶದಲ್ಲೇ ಮೊದಲ ಅಂಗಾಗ ಜೋಡಣೆ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ, ರೈತರಿಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ 3 ಲಕ್ಷ ರುಪಾಯಿದಿಂದ 5 ಲಕ್ಷ ರುಪಾಯಿಗೆ ಏರಿಕೆ ಹಾಗೂ ದೀರ್ಘಾವಧಿ ಸಾಲ 10 ಲಕ್ಷ ರುಪಾಯಿಂದ 15 ಲಕ್ಷ ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ .10 ಕೋಟಿ ರುಪಾಯಿ ಅನುದಾನ, ಇಂದಿರಾ ಕ್ಯಾಂಟಿನ್‌ಗೆ .100 ಕೋಟಿ ರುಪಾಯಿ ಅನುದಾನ ಸೇರಿದಂತೆ ನೀರಾವರಿ ಯೋಜನೆಗಳಿಗೆ ಮಹತ್ವ ನೀಡಲಾಗಿದೆ ಎಂದು ವಿವರಿಸಿದರು.

ಈ ವೇಳೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್‌ ಮುಖಂಡ ಮಹಾವೀರ ಮೋಹಿತೆ, ವಿವೇಕ ಜತ್ತಿ, ರಾಜೇಂದ್ರ ಪಾಟೀಲ ಇದ್ದರು.