Asianet Suvarna News Asianet Suvarna News

ಮಸೀದಿಗೆ ಬಾಣ : ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮೇಲೆ ಕ್ರಿಮಿನಲ್‌ ಕೇಸ್‌

ಹೈದರಾಬಾದ್‌ ಲೋಕಸಭಾ ಕೇತ್ರದ ಬಿಜೆಪಿ ಅಭ್ಯರ್ಥಿ, ಒವೈಸಿ ವಿರುದ್ಧ ಕಣಕ್ಕಿಳಿದಿರುವ ಮಾಧವಿ ಲತಾ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ರಾಮನವಮಿ ವೇಳೆ ಮಸೀದಿಯತ್ತ ಗುರಿಯಿಟ್ಟು ಕಾಲ್ಪನಿಕ ಬಾಣವನ್ನು ಹೊಡೆಯುವ ಅವರ ವಿಡಿಯೋ ವೈರಲ್‌ ಆದ ಬೆನ್ನಲ್ಲೇ  ಮಾಧವಿ ಲತಾ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಲಾಗಿದೆ.

Imaginary Arrow to mosque Criminal case against Hyderabad BJP candidate Madhavi Lata akb
Author
First Published Apr 22, 2024, 9:57 AM IST

ಹೈದರಾಬಾದ್‌: ಹೈದರಾಬಾದ್‌ ಲೋಕಸಭಾ ಕೇತ್ರದ ಬಿಜೆಪಿ ಅಭ್ಯರ್ಥಿ, ಒವೈಸಿ ವಿರುದ್ಧ ಕಣಕ್ಕಿಳಿದಿರುವ ಮಾಧವಿ ಲತಾ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ರಾಮನವಮಿ ವೇಳೆ ಮಸೀದಿಯತ್ತ ಗುರಿಯಿಟ್ಟು ಕಾಲ್ಪನಿಕ ಬಾಣವನ್ನು ಹೊಡೆಯುವ ಅವರ ವಿಡಿಯೋ ವೈರಲ್‌ ಆದ ಬೆನ್ನಲ್ಲೇ  ಮಾಧವಿ ಲತಾ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಲಾಗಿದೆ. ಬಿಜೆಪಿ ಪಕ್ಷದಿಂದ ಸಂಸದೀಯ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದಲೂ ಅವರು ಮುಸ್ಲಿಂ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ದೂರಿನ ಮೇಲೆ ಕೇಸು ದಾಖಲಿಸಲಾಗಿದೆ. ಏಪ್ರಿಲ್ 17 ರಂದು, ಶ್ರೀ ರಾಮ ನವಮಿ ಶೋಭಾಯಾತ್ರೆಯ ಮೆರವಣಿಗೆಯ ಸಮಯದಲ್ಲಿ, ಸಿದ್ದಿ ಅಂಬರ್ ಬಜಾರ್ ವೃತ್ತದಲ್ಲಿರುವ ಮಸೀದಿಯತ್ತ ಕಾಲ್ಪನಿಕ ಬಾಣವನ್ನು ಮಾಧವಿ ಲತಾ ಬಿಟ್ಟಿದ್ದರು. ಇದು ವಿವಾದಕ್ಕೀಡಾಗಿತ್ತು.

ಎನ್‌ಡಿಎಗೆ ನಟ ಚಿರಂಜೀವಿ ಬೆಂಬಲ ಘೋಷಣೆ

ಹೈದರಾಬಾದ್‌: ತೆಲುಗಿನ ಸೂಪರ್‌ಸ್ಟಾರ್‌ ಹಾಗೂ ರಾಜಕಾರಣಿ ಚಿರಂಜೀವಿ ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ತಮ್ಮ ಬೆಂಬಲ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಪ್ರಬಲವಾಗಿರುವ ಕಾಪು ಸಮುದಾಯಕ್ಕೆ ಚಿರಂಜೀವಿ ಸೇರಿದವರಾಗಿದ್ದು, ಅವರ ಈ ಬೆಂಬಲ ಮೈತ್ರಿಕೂಟಕ್ಕೆ ದೊಡ್ಡ ಬಲ ನೀಡಲಿದೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್‌ ನಾಯಕರು, ಚಿರಂಜೀವಿ ಇನ್ನೂ ತಮ್ಮ ಪಕ್ಷದಲ್ಲೇ ಇದ್ದಾರೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಚಿರಂಜೀವಿ ಭಾನುವಾರ ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್‌ ಗೆದ್ದರೆ ಮೊದಲ ಅಧಿವೇಶನದಲ್ಲೇ ಸಿಎಎ ರದ್ದು: ಚಿದಂಬರಂ

ರಾಜಕೀಯದಿಂದ ಹಲವು ವರ್ಷ ದೂರ ಇದ್ದ ಬಳಿಕ ಮತ್ತೆ ರಾಜ್ಯದಲ್ಲಿ ಜನಸೇನಾ, ಟಿಡಿಪಿ ಮತ್ತು ಬಿಜೆಪಿ ಮೈತ್ರಿ ಬಳಿಕ ಮತ್ತೆ ನಾನು ರಾಜಕೀಯದ ಚರ್ಚೆ ಮಾಡುತ್ತಿದ್ದೇನೆ. ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ಎನ್‌ಡಿಎ ಅಭ್ಯರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ತನ್ನ ಆಪ್ತರಾದ ಸಿ.ಎಂ. ರಮೇಶ್‌ (ಬಿಜೆಪಿ ಅಭ್ಯರ್ಥಿ) ಮತ್ತು ಪಿ. ರಮೇಶ್‌ ಬಾಬು (ಜನಸೇನಾ) ಅವರಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.

ಆಂಧ್ರ ಪ್ರದೇಶದ ರಾಜ್ಯದಲ್ಲಿ ಮೆ 13ರಂದು ಒಂದೇ ಹಂತದಲ್ಲಿ 25 ಲೋಕಸಭಾ ಸ್ಥಾನಗಳಿಗೆ ಹಾಗೂ ವಿಧಾನಸಭೆಯ 175 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ನಕಲಿ ಸಹಿ, ಸೂರತ್‌ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ: ಹೈಕೋರ್ಟ್‌ ಮೊರೆ ಹೋಗಲು ಕಾಂಗ್ರೆಸ್ ನಿರ್ಧಾರ

Follow Us:
Download App:
  • android
  • ios