ಅಕ್ಕಿ ಖರೀದಿ ಆಗದಿದ್ದರೆ ಗಂಡನ ಅಕೌಂಟ್‌ಗೆ ಹಣ ಹಾಕಿ: ಸಂಸದ ಪ್ರತಾಪ್ ಸಿಂಹ
ಓಪನ್ ಮಾರ್ಕೆಟ್‌ನಲ್ಲಿ ಅಕ್ಕಿ ಖರೀದಿ ಮಾಡಿ. ಅಕ್ಕಿ ಖರೀದಿ ಆಗದಿದ್ದರೆ ಗಂಡನ ಅಕೌಂಟ್‌ಗೆ ಅಕ್ಕಿಯ ಹಣ ಹಾಕಿ ಎಂದು ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು.
ಮೈಸೂರು (ಜೂ.20): ಓಪನ್ ಮಾರ್ಕೆಟ್‌ನಲ್ಲಿ ಅಕ್ಕಿ ಖರೀದಿ ಮಾಡಿ. ಅಕ್ಕಿ ಖರೀದಿ ಆಗದಿದ್ದರೆ ಗಂಡನ ಅಕೌಂಟ್‌ಗೆ ಅಕ್ಕಿಯ ಹಣ ಹಾಕಿ ಎಂದು ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು. ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಬಿಜೆಪಿ ಒತ್ತಡ ತರಲಿ ಎಂಬ ಸಿಎಂ ಹೇಳಿಕೆಗೆ ಮೈಸೂರಿನಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, 5 ಕೆ.ಜಿ ಅಕ್ಕಿ ಕೊಡುವುದು ಕೇಂದ್ರ ಸರ್ಕಾರ ಅಂತಾ ಪ್ರಥಮ ಬಾರಿಗೆ ಸತ್ಯ ಹೇಳಿದ್ದಕ್ಕೆ ಧನ್ಯವಾದ. ಮೋದಿ ಅವರ 5 ಕೆ.ಜಿ.ಗೆ ನೀವು 10 ಕೆ.ಜಿ ಸೇರಿಸಿ ಕೊಡಬೇಕು. ಯಾರಾದೋ ದುಡ್ಡ ಕಾಂಗ್ರೆಸ್ ಜಾತ್ರೆನಾ ಇದು? ಮೋದಿ ಸರ್ಕಾರದ ಅಕ್ಕಿ ಸಿದ್ರಾಮಣ್ಣನ ಜಾತ್ರೆನಾ?
ಮೋದಿ ಅವರು ಅಕ್ಕಿ ಕೊಡಬೇಕು. ನೀವು ಚುನಾವಣೆ ಗೆದ್ದು ಬರಬೇಕಾ ಎಂದು ಕಿಡಿಕಾರಿದರು. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಎಲ್ಲಾ ಕಡೆ ಚುನಾವಣೆ ಇದೆ. ಅಲ್ಲೂ ನೀವು ಫ್ರೀ ಅಕ್ಕಿ ಘೋಷಣೆ ಮಾಡಿದರೆ ಅಕ್ಕಿ ಕೋಡೋಕೆ ಆಗುತ್ತಾ? ಮೋದಿ ಅವರ ಕೈಯಲ್ಲಿ ಅಷ್ಟುಪ್ರಮಾಣದ ಅಕ್ಕಿ ಕೊಡೋಕೆ ಆಗಿದ್ದರೆ ನಾವೇ ಕೊಡ್ತಿದ್ದಿವಿ. ಅಕ್ಕಿಯನ್ನು ತಯಾರಿಸಲ್ಲ. ಮುಂಗಾರು ಕೈ ಕೊಟ್ಟಿದೆ. ಬರ ಬಂದರೆ, ಜಲಾಪ್ರಳಯವಾದರೆ ಅಂತ ಕಡೆ ಅಕ್ಕಿ ಕೊಡಬೇಕಾದರೆ ಕೇಂದ್ರ ಏನ್ ಮಾಡಬೇಕು ಎಂದು ಅವರು ಪ್ರಶ್ನಿಸಿದರು.
ಕೇಂದ್ರಕ್ಕೆ ಬಿಜೆಪಿ ನಾಯಕರು ರಾಜ್ಯದ ಪಾಲು ಕೇಳಲಿ: ಸಚಿವ ಮಧು ಬಂಗಾರಪ್ಪ
ಸಿದ್ದರಾಮಯ್ಯಗೆ ತಾವೇ ಪೂರ್ಣಾವಧಿ ಸಿಎಂ ಅಂತಾ ನೇರವಾಗಿ ಹೇಳುವ ಧೈರ್ಯವಿಲ್ಲ: ಸಿದ್ದರಾಮಯ್ಯಗೆ ತಾವೇ ಪೂರ್ಣಾವಧಿ ಸಿಎಂ ಅಂತಾ ನೇರವಾಗಿ ಹೇಳುವ ಧೈರ್ಯವಿಲ್ಲ, ಅವರಿಗೆ ಪುಕ್ಕಲತನ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು. ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಎಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್ ಇಬ್ಬರು ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಎಂದು ಹೇಳಿದ್ದಾರೆ. ಸಿದ್ದರಾಮಯ್ಯರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಹೀಗಾಗಿ, ಸಿದ್ದರಾಮಯ್ಯ ತಮ್ಮ ಛೇಲಾ ಪಡೆ ಮೂಲಕ ತಾವೂ ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರೆ ಎಂದರು. ಚುನಾವಣೆ ಗೆಲ್ಲಲು ಡಿ.ಕೆ. ಶಿವಕುಮಾರ್ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಧಾರಾಳಾ ಮನಸ್ಸಿನಿಂದ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಮಾಡಿದೆ. ಸಿದ್ದರಾಮಯ್ಯಗೆ ಆ ಧಾರಳ ಉದಾರತನದ ಮನಸ್ಸು ಇಲ್ಲ ಎಂದು ಅವರು ಟೀಕಿಸಿದರು.
ಬಿಎಸ್‌ವೈ ನಂತರ ಬಂದವರು ಮಾಡಿದ್ದೇನು: ಯಡಿಯೂರಪ್ಪ ಪ್ರಯತ್ನದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಅವರ ನಂತರ ಬಂದವರು ಮಾಡಿದ್ದೇನು ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪ್ರವಾಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಒಬ್ಬರೇ ಪರಿಸ್ಥಿತಿ ನಿಭಾಯಿಸಿದರು. ಕೋವಿಡ್ ವೇಳೆ ಜನರ ಪ್ರಾಣ ಉಳಿಸಲು ಇಡೀ ಸರ್ಕಾರ ಪ್ರಯತ್ನಿಸಿತು. ಕಷ್ಟದ ಸಂದರ್ಭಗಳಲ್ಲಿ ಯಡಿಯೂರಪ್ಪ ರಾಜ್ಯ ಕಾಪಾಡಿದ್ದಾರೆ.
ಪೂರಕ ಪರಿಸರವಿಲ್ಲದೇ ಕಲಿಕೆ ಸರಿ ದಿಕ್ಕಿನಲ್ಲಿ ಸಾಗಲ್ಲ: ಬೊಮ್ಮಾಯಿ
ಆದರೆ ಅವರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಎಂದು ಬೊಮ್ಮಾಯಿ ಹೆಸರೆತ್ತದೆ ಪ್ರಶ್ನಿಸಿದರು. ಯಡಿಯೂರಪ್ಪ ನಂತರ ಬಂದವರು ಕಾರ್ಯಕರ್ತರ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಹಿಂದೂ ಮುಖಂಡರಾದ ಪ್ರವೀಣ್ ನೆಟ್ಟಾರು, ಹರ್ಷ ಕೊಲೆಯಾದಾಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಉತ್ಸಾಹ ಕಾಣಿಸಲಿಲ್ಲ ಎಂದ ಪ್ರತಾಪ್ ಸಿಂಹ ನಾನು ಜನರ ಆಕ್ರೋಶ, ಕಾರ್ಯಕರ್ತರ ನೋವಿಗೆ ಧ್ವನಿಯಾಗಿದ್ದೇನೆಯೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು.