Asianet Suvarna News Asianet Suvarna News

ಗ್ಯಾರಂಟಿ ಜಾರಿ ತರಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ; ಬಿಎಸ್‌ವೈ ವಾಗ್ದಾಳಿ

ಫಸಲ್‌ ವಿಮಾ ಯೋಜನೆಯ ಹಣವನ್ನು ಇನ್ನೂ ರೈತರಿಗೆ ಪಾವತಿಸದ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಸರ್ಕಾರದ ಇಂತಹ ದೊಂಬರಾಟ ನೋಡಿಕೊಂಡು ಬಿಜೆಪಿ ಕಾರ್ಯಕರ್ತರು ಇನ್ನು ಕೈಕಟ್ಟಿಕೂರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರಾಜ್ಯ ಸರ್ಕಾರಕ್ಕೆ ಮಾತಿನ ಚಾಟಿ ಬೀಸಿದರು.

If the guarantee cannot be enforced, resign; BSY attack against Congress government at davanagere rav
Author
First Published Jun 23, 2023, 6:24 AM IST

ದಾವಣಗೆರೆ (ಜೂ.23) ಫಸಲ್‌ ವಿಮಾ ಯೋಜನೆಯ ಹಣವನ್ನು ಇನ್ನೂ ರೈತರಿಗೆ ಪಾವತಿಸದ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಸರ್ಕಾರದ ಇಂತಹ ದೊಂಬರಾಟ ನೋಡಿಕೊಂಡು ಬಿಜೆಪಿ ಕಾರ್ಯಕರ್ತರು ಇನ್ನು ಕೈಕಟ್ಟಿಕೂರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yadiyurappa) ರಾಜ್ಯ ಸರ್ಕಾರಕ್ಕೆ ಮಾತಿನ ಚಾಟಿ ಬೀಸಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆ ಉದ್ಘಾಟಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಫಸಲ್‌ ವಿಮಾ ಯೋಜನೆಯಡಿ ರೈತರಿಗೆ ನೀಡಬೇಕಾದ ವಿಮೆ ಹಣವನ್ನು ನೀಡುವುದಕ್ಕೂ ಆಗದಷ್ಟುಅಸಡ್ಡೆಯಲ್ಲಿ ರಾಜ್ಯ ಸರ್ಕಾರವಿದೆ ಎಂದರು.

ಅಷ್ಟುಸುಲಭವಾಗಿ ನಾವು ಬಿಡಲ್ಲ:

ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲವೆಂದು ಬಾಯಿ ಬಡಿದುಕೊಳ್ಳುತ್ತಿರುವ ಕಾಂಗ್ರೆಸ್‌ ನಾಯಕರಿಗೆ ಕೇಳಲು ಇಚ್ಛಿಸುತ್ತೇನೆ. ನಾವು ಯಾವಾಗ ಅಕ್ಕಿ ಕೊಡುತ್ತೇವೆಂದಿದ್ದೆವು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀವೇ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರದಿದ್ದರೆ, ನಿಮ್ಮನ್ನು ಅಷ್ಟುಸುಲಭವಾಗಿ ನಾವು ಬಿಡುವುದೂ ಇಲ್ಲ. ರಾಜ್ಯದ ಜನತೆಗೆ ನೀಡಿದ ಭರವಸೆ ಈಡೇರಿಸುವ ಕೆಲಸ ಕಾಂಗ್ರೆಸ್‌ ಮಾಡಬೇಕು. ನಿಮ್ಮಿಂದ ಅದನ್ನು ಮಾಡಲಾಗದಿದ್ದರೆ ಅಧಿಕಾರ ಬಿಟ್ಟು, ಹೋಗುತ್ತಿರಬೇಕು ಎಂದು ಯಡಿಯೂರಪ್ಪ ಎಚ್ಚರಿಸಿದರು.

ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ ರಾಜ್ಯದ ಸುಮಾರು 53 ಕ್ಷೇತ್ರಗಳಲ್ಲಿ ಅಲ್ಪ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲನುಭವಿಸಿದರು. ಅಷ್ಟುಕ್ಷೇತ್ರ ಗೆದ್ದಿದ್ದರೆ, ನಿಚ್ಚಳವಾಗಿ ಬಿಜೆಪಿ ಅಧಿಕಾರಕ್ಕೆ ಮತ್ತೆ ಬರುತ್ತಿತ್ತು. ಮುಂಬರುವ ತಾಪಂ, ಜಿಪಂ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವೇ ನಮ್ಮ, ನಿಮ್ಮೆಲ್ಲರ ಗುರಿಯಾಗಬೇಕು. ಹಿಂದೆ ಡಾ.ಮನಮೋಹನ ಸಿಂಗ್‌ ಯಾವುದಾದರೂ ದೇಶಕ್ಕೆ ಹೋದರೆ, ಸಾಲ ಕೇಳಲು ಬಂದರೆನ್ನುತ್ತಿದ್ದರು. ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಬಹುತೇಕ ಎಲ್ಲಾ ದೇಶಗಳು ರೆಡ್‌ ಕಾರ್ಪೆಟ್‌ ಸ್ವಾಗತ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅಮೇರಿಕಾ ಅಲ್ಲ, ಭಾರತ ವಿಶ್ವದ ಹಿರಿಯಣ್ಣ ಆಗುವ ದಿನಗಳು ಸಮೀಪಿಸುತ್ತಿವೆ ಎಂದು ತಿಳಿಸಿದರು.

ಸೋಲು- ಗೆಲುವು ಬಿಜೆಪಿಗೆ ಹೊಸದಲ್ಲ, ಫಲಿತಾಂಶ ಒಪ್ಪಿಕೊಳ್ಳುತ್ತೇವೆ : ಯಡಿಯೂರಪ್ಪ

 

ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ಬಿ.ಸಿ.ನಾಗೇಶ, ಶಾಸಕ ಬಿ.ಪಿ.ಹರೀಶ, ಎಂಎಲ್‌ಸಿಗಳಾದ ರವಿಕುಮಾರ, ಕೆ.ಎಸ್‌.ನವೀನ, ಮಾಜಿ ಶಾಸಕರಾದ ಎಸ್‌.ವಿ.ರಾಮಚಂದ್ರ, ಪ್ರೊ.ಎನ್‌.ಲಿಂಗಣ್ಣ, ಬಿ.ಎಸ್‌.ಜಗದೀಶ, ಯಶವಂತರಾವ್‌ ಜಾಧವ್‌, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಮಾಜಿ ಮೇಯರ್‌ ಸುಧಾ ಜಯರುದ್ರೇಶ, ಎಚ್‌.ಎನ್‌.ಶಿವಕುಮಾರ, ಶ್ರೀನಿವಾಸ ಟಿ.ದಾಸಕರಿಯಪ್ಪ, ಶಿವಲಿಂಗಪ್ಪ, ಶಿವನಗೌಡ ಟಿ.ಪಾಟೀಲ್‌, ರಾಜನಹಳ್ಳಿ ಶಿವಕುಮಾರ, ಎಲ್‌.ಎನ್‌.ಕಲ್ಲೇಶ, ಶಾಂತರಾಜ ಪಾಟೀಲ, ಮಹೇಶ ಪಲ್ಲಾಗಟ್ಟೆ, ಸುರೇಶ ಹೊನ್ನಾಳಿ, ಮಂಜುಳಮ್ಮ, ಯಶೋಧ ಯೋಗೇಶ, ದೇವೇಂದ್ರಪ್ಪ, ಆರ್‌.ಎಲ್‌.ಶಿವಪ್ರಕಾಶ ಇತರರಿದ್ದರು.

9 ವರ್ಷಗಳ ಹಿಂದೆ 10ನೇ ಸ್ಥಾನದಲ್ಲಿದ್ದ ಭಾರತ ಇಂದು ಮೋದಿ ನೇತೃತ್ವದಲ್ಲಿ ಮುನ್ನಡೆದು ವಿಶ್ವದ 5ನೇ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿದೆ. ಆದರೆ, ರಾಜ್ಯ ಕಾಂಗ್ರೆಸ್‌ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ಅಲ್ಲದೇ, ಯಾವುದೇ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೇ, ಕೇಂದ್ರದ ಕಡೆಗೆ ಬೆರಳು ತೋರಿಸುವ ಕೆಲಸ ಮಾಡುತ್ತಿದ್ದಾರೆ. ಅಮೆರಿಕ, ಚೀನಾದಂತಹ ದೇಶಕ್ಕಿಂತ ಭಾರತದ ಜಿಡಿಪಿ ಸುಧಾರಣೆ ಕಂಡಿದೆ. ಸ್ಟಾರ್ಟಪ್‌ನಲ್ಲಿ 3ನೇ ಸ್ಥಾನದಲ್ಲಿದ್ದೇವೆ.

ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Follow Us:
Download App:
  • android
  • ios