ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸದಿದ್ದರೆ ಸಂವಿಧಾನಕ್ಕೆ ಗಂಡಾಂತರ: ಸಚಿವ ಮಹದೇವಪ್ಪ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದೇವೆ ಅಷ್ಟೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸದೇ ಹೋದಲ್ಲಿ ಸಂವಿಧಾನಕ್ಕೆ ಗಂಡಾಂತರ ಬರುವುದು ತಪ್ಪಿದ್ದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಂಜನಗೂಡು (ಜೂ.25): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದೇವೆ ಅಷ್ಟೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸದೇ ಹೋದಲ್ಲಿ ಸಂವಿಧಾನಕ್ಕೆ ಗಂಡಾಂತರ ಬರುವುದು ತಪ್ಪಿದ್ದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು. ಪಟ್ಟಣದ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಶಾಸಕರು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡಲು ಆಗಿಲ್ಲ ಎಂದು ತೀಕ್ಷ್ಣವಾಗಿ ವಿರೋಧ ಹೇಳಿಕೆಯನ್ನು ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಕೊಟ್ಟಿರುವ 5 ಗ್ಯಾರಂಟಿಗಳನ್ನು ಈಡೇರಿಸುವುದು ಖಚಿತ. ಸುಖ ಸುಮ್ಮನೆ ಆರೋಪ ಮಾಡುವ ಬಿಜೆಪಿ ಶಾಸಕರು ತಾಳ್ಮೆ ವಹಿಸಬೇಕು. ಜೊತೆಗೆ ವಿರೋಧಿ ಹೇಳಿಕೆ ನೀಡುವ ಬದಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ನಿಮ್ಮ ಗೋಡೌನ್‌ನಲ್ಲಿರುವ ಅಕ್ಕಿಯನ್ನು ಕೊಟ್ಟರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಮನವೊಲಿಸಲು ಮುಂದಾಗಬೇಕು ಎಂದು ಹೇಳಿದರು.
ಮುಂಗಾರು ವಿಳಂಬ: 'ಅಲ್ಲಾ ಮಳೆ ಕರುಣಿಸು' ಎಂದು ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ
ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಪುಟ್ಟರಂಗಶೆಟ್ಟಿ, ಅನಿಲ ಚಿಕ್ಕಮಾದು, ಡಿ. ರವಿಶಂಕರ್, ಗಣೇಶ್‌ಪ್ರಸಾದ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಶ್ರೀಕಂಠ ನಾಯಕ, ಸಿಎಂ ಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್ ಇದ್ದರು.
ಸ್ಥೈರ್ಯ ತುಂಬಿದ ಜನತೆ: ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನನ್ನ ತಂದೆ ಧ್ರುವನಾರಾಯಣ ಅವರು ಎರಡು ಬಾರಿ ಸಂಸದರಾಗಿ ಈ ಭಾಗದಲ್ಲಿ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಲೋಕಸಭೆ ಚುನಾವಣೆಯ ಸೋಲಿನ ನಂತರ ನಂಜನಗೂಡು ಕ್ಷೇತ್ರದಲ್ಲಿ ಅತಿ ಹೆಚ್ಚಾಗಿ ಕೆಲಸ ಮಾಡುವ ಮೂಲಕ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ ಬಡವರಿಗೆ ರೈತರಿಗೆ ನೆರವಾಗಬೇಕೆಂದು ಕನಸು ಕಂಡಿದ್ದರು.
ಸೋಮಣ್ಣ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಬಯಕೆ ಹೊರಹಾಕಿದ ಸಂಸದ ರಮೇಶ್ ಜಿಗಜಿಣಗಿ
ಆದರೆ ಅವರು ವಿಧಿಯಾಟದಿಂದ ನಮ್ಮೆಲ್ಲರನ್ನು ಬಿಟ್ಟು ಅಗಲಿದರು. ಅಂತಹ ಸನ್ನಿವೇಶದಲ್ಲಿ ಇಡೀ ಕಾಂಗ್ರೆಸ್ ಸಮೂಹ ಮತ್ತು ಪಕ್ಷದ ಹಿರಿಯ ನಾಯಕರು ನನಗೆ ಧೈರ್ಯ ಸಾಂತ್ವನ ಹೇಳಿ ಶಕ್ತಿ ತುಂಬಿದರು. ಎಲ್ಲ ಪಕ್ಷದ ನಾಯಕರು ಪಕ್ಷಾತೀತವಾಗಿ ನನ್ನ ಬೆಂಬಲಕ್ಕೆ ನಿಂತು ಸಾಂತ್ವನ ಹೇಳಿದರು. ಹೆಚ್ಚಾಗಿ ಕ್ಷೇತ್ರದ ಜನತೆ ನನಗೆ ಮಾನಸಿಕ ಸ್ಥೈರ್ಯ ತುಂಬಿ ಶಕ್ತಿ ತುಂಬಿದರು ಎಂದು ತಿಳಿಸಿದರು.