ಮುಂಗಾರು ವಿಳಂಬ: 'ಅಲ್ಲಾಹ್ ಮಳೆ ಕರುಣಿಸು' ಎಂದು ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ

ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಜಮಖಂಡಿಯಲ್ಲಿ ಮಳೆಗಾಗಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಜಮಖಂಡಿಯ ಬೈತುರ ಮಾಮೂರ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. 

muslim community pray for rain in bagalkote gvd

ಬಾಗಲಕೋಟೆ (ಜೂ.25): ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಜಮಖಂಡಿಯಲ್ಲಿ ಮಳೆಗಾಗಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಜಮಖಂಡಿಯ ಬೈತುರ ಮಾಮೂರ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದು, ಜಮಿಯತ್ ಉಲಮಾ ಇ ಹಿಂದ್‌ ನೇತೃತ್ವದಲ್ಲಿ 'ಅಲ್ಲಾ ಮಳೆ ಕರುಣಿಸು' ಎಂದು ಪ್ರಾರ್ಥನೆ ಮಾಡಿದ್ದಾರೆ.

ಇನ್ನು ನಿನ್ನೆಯಷ್ಟೇ (ಶನಿವಾರ) ಬೆಳಗಾವಿಯಲ್ಲಿ ಸಾವಿರಾರು ಮುಸ್ಲಿಮರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಕಣ್ಣೀರು ಹಾಕಿ ಪ್ರಾರ್ಥನೆ ಮಾಡಿದ್ದರು. ರಾಜ್ಯದಲ್ಲಿ ಮುಂಗಾರು ಮಳೆ ಇನ್ನೂ ಆರಂಭವಾಗದಿದ್ದರಿಂದ, ಹಲವು ಕಡೆ ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ. ಇನ್ನೂ ಘಟಪ್ರಭಾ ನದಿಯಲ್ಲಿ ನೀರು ಖಾಲಿಯಾಗಿರುವ ಹಿನ್ನೆಲೆ ಲಕ್ಷಾಂತರ ಮೀನುಗಳು ಸಾವಿಗೀಡಾಗಿವೆ. ಅಲ್ಲದೇ ನದಿಯಿಂದ ದುರ್ವಾಸನೆ ಬರುತ್ತಿದೆ.

ಸೋಮಣ್ಣ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಬಯಕೆ ಹೊರಹಾಕಿದ ಸಂಸದ ರಮೇಶ್ ಜಿಗಜಿಣಗಿ

ಮಳೆಗಾಗಿ ಬನಶಂಕರಿ ದೇವಿಗೆ ಪೂಜೆ: ವರುಣನ ಕೃಪೆಗಾಗಿ ನೇಕಾರನಗರದ ಬನಶಂಕರಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಮಾನಿ ಬಳಗದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಪಾಲಿಕೆ ಮಾಜಿ ಸದಸ್ಯ ಮಂಜುನಾಥ ಚಿಂತಗಿಂಜಲ್‌, ಪಕ್ಷದ ಮುಖಂಡರಾದ ಚಂದ್ರಶೇಖರ ಗೋಕಾಕ, ಶಾಂತಾ ಹಿರೇಮಠ, ಸುಭಾಸ ಅಥಣಿ, ಡಾ. ರವೀಂದ್ರ ಎಲಕಾನ, ರಾಜು ಕೋರ್ಯಾಣಮಠ, ವೆಂಕಟೇಶ ಹಬೀಬ, ಅಮೃತ ಕಲ್ಪವೃಕ್ಷ, ಮಹೇಶ ಲಕಾಜನವರ, ಸಂದೀಪ ಅಣವೇಕರ, ಗೋವಿಂದ ಬೇದ್ರೆ, ಮಾರುತಿ ಸೊನ್ನದ, ಲಕ್ಷೀಕಾಂತ ಘೋಡಕೆ, ಶೇಖಪ್ಪ ಇಂಗಳಗಿ, ಪ್ರತಿಭಾ ಪವಾರ, ನಾಗರತ್ನಾ ಬಳ್ಳಾರಿ, ಪೂಜಾ ರಾಯ್ಕರ, ಸರೋಜಾ ಶಾಂತಗೇರಿ ಮಾಲಾ ಸಣ್ಣಗೌಡರ, ರುಕ್ಮಣಿ ಸುರಪೂರ, ಮೀನಾಕ್ಷಿ ಬಡಿಗೇರ ಮತ್ತಿತರು ಪಾಲ್ಗೊಂಡು ಮಳೆಗಾಗಿ ಪ್ರಾರ್ಥಿಸಿದರು.

ಕರಾವಳಿಯಲ್ಲಿ ಭಾರೀ ಮಳೆಯ ಆರೆಂಜ್‌ ಅಲರ್ಟ್‌: ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್‌ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮುಂದಿನ 24 ಗಂಟೆಯಲ್ಲಿ 115 ಮಿ.ಮೀ ನಿಂದ 204 ಮಿ.ಮೀ ವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರಾವಳಿಯ ಮೂರು ಜಿಲ್ಲೆಗಳಿಗೂ ಆರೆಂಜ್‌ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.

ಬಡವರಿಗೆ ಅಕ್ಕಿ ಕೊಡದೆ ಬಿಜೆಪಿ ಸೇಡಿನ ರಾಜಕಾರಣ: ಶಾಸಕ ಶರತ್‌ ಬಚ್ಚೇಗೌಡ

ಜತೆಗೆ, ಸಮುದ್ರದಲ್ಲಿ 40 ರಿಂದ 55 ಕಿ.ಮೀ ವೇಗದಲ್ಲಿ ಜೋರು ಗಾಳಿ ಬೀಸುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಿಗೆ ಮುಂಗಾರು ವ್ಯಾಪಿಸಿದ್ದು, ಉತ್ತಮ ಮಳೆಯಾಗುತ್ತಿದೆ. ಮುಂದಿನ ಐದು ದಿನ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಶುಕ್ರವಾರ ಕಾರವಾರದಲ್ಲಿ ಅತಿ ಹೆಚ್ಚು 14 ಸೆಂ.ಮೀ ಮಳೆಯಾದ ವರದಿಯಾಗಿದೆ. ಉಳಿದಂತೆ ಹೊನ್ನಾವರದಲ್ಲಿ 12, ಮಂಕಿ, ಕುಮಟಾದಲ್ಲಿ ತಲಾ 10, ಗೋಕರ್ಣ, ಶಿರಾಲಿಯಲ್ಲಿ ತಲಾ 9, ಅಂಕೋಲಾ ಗೇರುಸೊಪ್ಪಾ, ಪಣಂಬೂರಿನಲ್ಲಿ ತಲಾ 7 ಸೆಂ.ಮೀ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Latest Videos
Follow Us:
Download App:
  • android
  • ios