ಕರ್ನಾಟಕದ ಜನತೆ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ಅದನ್ನು ದೆಹಲಿ ಕಾಂಗ್ರೆಸ್‌ನ ಎಟಿಎಂ ಮಾಡಿಕೊಳ್ಳಲಿದ್ದಾರೆ. 70 ವರ್ಷ ಅಧಿಕಾರದಲ್ಲಿದ್ದರೂ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಆಗಲಿಲ್ಲ ಸುಪ್ರೀಂ ತೀರ್ಪು ಬಂದ ಕೂಡಲೇ ಮೋದಿಜಿ ರಾಮ ಮಂದಿರಕ್ಕೆ ಕಟ್ಟಲು ಪ್ರಾರಂಭಿಸಿದರು ಎಂದು ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಹರಿಹರ (ಏ.29) : ಕರ್ನಾಟಕದ ಜನತೆ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ಅದನ್ನು ದೆಹಲಿ ಕಾಂಗ್ರೆಸ್‌ನ ಎಟಿಎಂ ಮಾಡಿಕೊಳ್ಳಲಿದ್ದಾರೆ. 70 ವರ್ಷ ಅಧಿಕಾರದಲ್ಲಿದ್ದರೂ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಆಗಲಿಲ್ಲ ಸುಪ್ರೀಂ ತೀರ್ಪು ಬಂದ ಕೂಡಲೇ ಮೋದಿಜಿ ರಾಮ ಮಂದಿರಕ್ಕೆ ಕಟ್ಟಲು ಪ್ರಾರಂಭಿಸಿದರು. ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಿಎಫ್‌ಐಯ ಬ್ಯಾನ್‌ ಮಾಡಲು ಸಾಧ್ಯವಾಗಿದ್ದು ಪ್ರಧಾನಿ ಮೋದಿಯಿಂದ ಎಂದು ಕಾಂಗ್ರೆಸ್‌ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಾಗ್ಧಾಳಿ ನಡೆಸಿದರು.

ನಗರದ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ ಬೃಹತ್‌ ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ.ಹರೀಶ್‌ ಪರ ಮತಯಾಚನೆ ಮಾಡಿ ಮಾತನಾಡಿ ನೀವು ನಿಮ್ಮ ಮತದಾನದ ಮೂಲಕ ಕಾಂಗ್ರೆಸ್‌ಗೆ ಬುದ್ಧಿ ಕಲಿಸಬೇಕು ಎಂದು ಸಭಿಕರಿಗೆ ಕರೆ ನೀಡಿದರಲ್ಲದೆ, ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ಜನರ ಸಾಲದಿಂದ ಮುಕ್ತರಾಗಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಡವರಿಗಾಗಿ ಮನೆ, ರೈತನಿಧಿ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಾವು ದುಡಿಯುತ್ತಿದ್ದೇವೆ ಎಂದರು. ನೀವು ಯಾರನ್ನೋ ಮುಖ್ಯಮಂತ್ರಿ ಮಾಡುವ, ಸಚಿವರಾಗಿ ಮಾಡುವ ಸಲುವಾಗಿ ಮತದಾನ ಮಾಡುತ್ತಿಲ್ಲ, ದೇಶದ, ರಾಜ್ಯದ ಭವಿಷ್ಯಕ್ಕಾಗಿ ಮತದಾನ ಮಾಡುತ್ತಿದ್ದೀರಿ. ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಮತದಾನ ಮಾಡುತ್ತಿದ್ದೀರಿ, ದೇಶದ ಬಡವರ, ದೀನ ದಲಿತರ ಜೀವನ ರೂಪಿಸಲು ನಿಮ್ಮ ಮತ ಅಮೂಲ್ಯ ಎಂದರು.

Karnataka election 2023: ಮಹದಾಯಿ ಸಮಸ್ಯೆ ಬಗೆಹರಿಸಿದ್ದು ಬಿಜೆಪಿ ಸರ್ಕಾರ: ಅಮಿತ್ ಶಾ

ಬಿಜೆಪಿಯಿಂದ ಭದ್ರಾ ಮೇಲ್ದಂಡೆ ಜಾರಿ:

ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಮುಂದಾಗಿದ್ದು ಬಿಜೆಪಿ ಸರ್ಕಾರ, 70 ಸಾವಿರ ಕೋಟಿ ಏತ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ಚಾಲನೆ ಕೊಟ್ಟಿದೆ. ರಾಗಿ, ಜೋಳ ಎಂಎಸ್‌ಪಿಯಲ್ಲಿ ಖರೀದಿಯಾಗುತ್ತಿವೆ. ಬಿಜೆಪಿ ಸರ್ಕಾರ ಬಡವರಿಗೆ ಮನೆ, ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾಗಿ ದುಡಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ರೈತರ ಏಳಿಗೆಗಾಗಿ ಶ್ರಮಿಸುತ್ತಿವೆ. ಸಾಮಾಜಿಕ ನ್ಯಾಯದ ಪರವಾಗಿರುವ ಬಿಜೆಪಿಯ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದರು.

ಹರಿಹರ ರಸ್ತೆಗಳೆಲ್ಲ ಗುಂಡಿಮಯ:

ಅಭ್ಯರ್ಥಿ ಬಿ.ಪಿ.ಹರೀಶ್‌ ಮಾತನಾಡಿ, ನನಗೆ ಅಭಿವೃದ್ಧಿ ಮುಖ್ಯ, ಬಿಜೆಪಿಗೆ ಮತ ನೀಡಿದರೆ ಅದು ಮೋದಿಗೆ ಮತ ನೀಡಿದಂತೆ, ಮೋದಿಜಿಗೆ ಮತ ನೀಡಿದರೆ ದೇಶದ ಅಭಿವೃದ್ಧಿಗೆ, ಭಾರತೀಯ ಸಂಸ್ಕೃತಿಯ ಸಂರಕ್ಷಣೆಗೆ ಮತ ನೀಡಿದಂತೆ ಎಂದರು. ತಮ್ಮ ಹಿಂದಿನ ಅವಧಿಯಲ್ಲಿ ಸಾಕಷ್ಟುಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿತ್ತು. ಬೈರನಪಾದ ಯೋಜನೆ ಅಡಿಗಲ್ಲು ಹಾಕಲಾಗಿತ್ತು, ಆದರೆ ನಂತರ ಬಂದವರು ಅದನ್ನು ಕಡೆಗಣಿಸಿದರು. ತಾಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ಈಗಲೂ ನೀರು ದೊರೆಯದಿರುವುದು ಖೇದಕರ. ನಗರದ ಎಲ್ಲಾ ರಸ್ತೆಗಳ ಕಾಂಕ್ರೀಟೀಕರಣ ಮಾಡಲಾಗಿತ್ತು. ಆದರೆ ಒಳಚರಂಡಿ, ಜಲಸಿರಿ ಯೋಜನೆಗೆ ರಸ್ತೆಗಳೆಲ್ಲಾ ಅಗೆದಿದ್ದು, ಹರಿಹರ ಗುಂಡಿಮಯವಾಗಿದೆ. ಅಭಿವದ್ಧಿ ಮಾತ್ರ ನನ್ನ ಮುಂದಿದ್ದು, ಕ್ಷೇತ್ರದ ಜನತೆ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ತಮಗೆ ಮತ ನೀಡಬೇಕು ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಾಜ್ಯದಲ್ಲೂ ಬೊಮ್ಮಾಯಿ ನೇತೃತ್ವದ ಸರ್ಕಾರ ಬಡಮಕ್ಕಳ ಶಿಕ್ಷಣಕ್ಕೆ ವಿದ್ಯಾಸಿರಿ ಯೋಜನೆ, ವಿದ್ಯಾವಾಹಿನಿ ಯೋಜನೆಯಲ್ಲಿ ಉಚಿತ ಬಸ್‌ಪಾಸ್‌, ಉದ್ಯೋಗಸ್ಥ ಮಹಿಳೆಗೆ ಉಚಿತ ಬಸ್‌ಪಾಸ್‌, 7 ವಿವಿ ಸ್ಥಾಪನೆ, ರೈತರಿಗೆ ಶೂನ್ಯ ಬಡ್ಡಿದರದ ಸಾಲ ಇತ್ಯಾದಿ ಜನಪರ ಯೋಜನೆ ಜಾರಿಗೊಳಿಸಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದು ನಿಮ್ಮೆಲ್ಲರ ಗುರಿಯಾಗಬೇಕು ಎಂದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ದಾವಣಗೆರೆ ಉತ್ತರ ಶಾಸಕ ಎಸ್‌.ಎ.ರವೀಂದ್ರನಾಥ್‌, ವಿಧಾನಪರಿಷತ್‌ ಮಾಜಿ ಸದಸ್ಯ ಡಾ.ಎ.ಎಚ್‌.ಶಿವಯೋಗಿ ಸ್ವಾಮಿ, ಪ್ರದೀಪ್‌ ಸಿಂಗ್‌ ಜಡೇಜಾ, ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ್‌ ಹನಗವಾಡಿ, ಮುಖಂಡ ಚಂದ್ರಶೇಖರ್‌ ಪೂಜಾರ್‌ ಹಾಗೂ ಮತ್ತಿತರರಿದ್ದರು.

karnataka election: ರಾಜ್ಯ ಕುರುಕ್ಷೇತ್ರ ಕದನದಲ್ಲಿ ಅಮಿತ್‌ ಶಾ ಅಬ್ಬರ,ಮಂಗಳೂರಿನಲ್ಲಿ ಇಂದು 'ಶಾ' ರೋಡ್‌ ಶೋ

ಮೋದಿ ಅಧಿಕಾರಕ್ಕೆ ಬರದಿದ್ದರೆ ಭಾರತ ಈಗಾಗಲೆ ಪಾಕಿಸ್ತಾನ, ಬರ್ಮಾ, ಶ್ರೀಲಂಕಾದಂತೆ ದಿವಾಳಿ ಅಂಚಿನಲ್ಲಿರುತ್ತಿತ್ತು. ಕೋವಿಡ್‌ ಸಮಯದಲ್ಲಿ ಉಚಿತ ಲಸಿಕೆ ನೀಡಿ ದೇಶದ ಜನರ ಜೀವ ಉಳಿಸಿದ ಜಗತ್ತಿನ ಏಕೈಕ ನಾಯಕ ಮೋದಿ. ಎಲ್ಲರಿಗೂ ಶೌಚಾಲಯ, ಜನೌಷಧಿ, ಉಜ್ವಲ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಆಯುಷ್ಮಾನ್‌ ಭಾರತ್‌ ಮುಂತಾದ ಜನಪರ ಯೋಜನೆಗಳು ಮೋದಿಯವರ ಕೊಡುಗೆ.

ಜಿ.ಎಂ.ಸಿದ್ದೇಶ್ವರ, ಸಂಸದ