ಬೆಳಗಾವಿ, [ನ.30]: ಸಕಾ೯ರ ಯಾವುದೇ ಬರಲಿ ಗೋಕಾಕ್ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯಥಿ೯ ಗೆದ್ದರೆ ಮಂತ್ರಿಯಾಗ್ತಾರೆ ಎಂದು ಮಾಜಿನ ಸಿಎಂ ಅಚ್ಚರಿ ಹೇಳಿಕೆ ನಿಡಿದ್ದಾರೆ.

ಜೆಡಿಎಸ್ ಅಭ್ಯಥಿ೯ ಗೆಲ್ಲಿಸಿ ಕೊಡಿ ಮಂತ್ರಿ ಮಾಡೇ ಬೆಂಗಳೂರಿಂದ ಗೋಕಾಕ್ ಗೆ ಕಳಸ್ತೀವಿ ಎಂದು ಕುಮಾರಸ್ವಾಮಿ ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಗೋಕಾಕ್ ಪಟ್ಟಣದ ರೋಡ್ ಶೋ ವೇಳೆ ಮತದಾರರನ್ನ ಉದ್ದೇಶಿಸಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ನನಗೆ ಮಂತ್ರಿಯಾಗೋ ಆಸೆ ಇಲ್ಲ. ಆದ್ರೆ ಗೆದ್ದರೆ ಅಶೋಕ್ ಪೂಜಾರಿಯನ್ನ ಮಂತ್ರಿ ಮಾಡೇ ಮಾಡ್ತೀವಿ. ಇದು ಭರವಸೆಯ ಮಾತಲ್ಲ, ಮಂತ್ರಿ ಮಾಡಿ ತೋರಸ್ತೀವಿ ಎಂದು ಹೊಸ ಬಾಂಬ್ ಸಿಡಿಸಿದರು.

ಈ ಹಿಂದೆ ಅಷ್ಟೇ ಬಿಜೆಪಿ ಸರ್ಕಾರವನ್ನು ಬೀಳಿಸಲು ಬಿಡಲ್ಲ ಎಂದು ಹೇಳಿರುವುದು ಮತ್ತು ಈಗ ಹೇಳಿದ್ದು ಎಲ್ಲೋ ಒಂದು ಕಡೆ ಉಪ ಚುನಾವಣೆಗೂ ಮುನ್ನ ಒಳರಾಜಕಾರಣದ ಒಪ್ಪಂದ  ನಡೆದಿದೆಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ಪುಜಾರಿ ವರು ಕಾಂಗ್ರೆಸ್ ಮನೆ ಬಾಗಿಲು ತಟ್ಟಿದ್ದರು. ಆದ್ರೆ, ಟಿಕೆಟ್ ಸಿಗುವುದಿಲ್ಲ ಎಂದು ಮನವರಿಕೆಯಾದ ಬಳಿಕ ಅಂತಿಮವಾಗಿ ಜೆಡಿಎಸ್ ಟಿಕೆಟ್ ಪಡೆದು ಗೋಕಾಕ್ ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ.

ಕುಮಾರಸ್ವಾಮಿ ಸರ್ಕಾರವನ್ನು ಪತನಗೊಳಿಸುಲ್ಲಿ ಪ್ರಮುಖ ಪಾತ್ರವಹಿಸಿದ್ದ ರಮೇಶ್ ಜಾರಕಿಹೊಳಿಯನ್ನು ಶತಾಯಗತಾಯವಾಗಿ ಸೋಲಿಸಲೇಬೇಂಕೆಂದು ಕುಮಾರಸ್ವಾಮಿ ಗೋಕಾಕ್ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಅಲ್ಲೇ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಇದರ ಮಧ್ಯೆ ಈ ಹೇಳಿಕೆ ನೀಡಿರುವುದು ಗಮನಿಸಿದ್ರೆ, ಉಪ ಚುನಾವಣೆಗೂ ಮುನ್ನ ನಡೆದಿದೆಯಾ ಒಳರಾಜಕಾರಣದ ಒಪ್ಪಂದ?  ಗೋಕಾಕ್ ಜೆಡಿಎಸ್ ಅಭ್ಯಥಿ೯ ಗೆದ್ದರೆ ಮಂತ್ರಿ ಸ್ಥಾನ ಫಿಕ್ಸ್ ಎಂದ ಎಚ್ಡಿಕೆ ಒಳಮಮ೯ವಾದ್ರೂ ಏನು..? ಎನ್ನುವುದು ಭಾರೀ ಕುತೂಹಲಕ್ಕೆ ಕಾರಣವಾಗಿದ್ರೆ, ಇನ್ನು ಕೆಲವರಿಗೆ ಅಚ್ಚರಿಯುಂಟು ಮಾಡಿದೆ.

ಇದೇ ಡಿಸೆ.ಬರ್ 5ಕ್ಕೆ ಮತದಾನ ನಡೆಯಲಿದ್ದು, ಡಿ.9ಕ್ಕೆ ಫಲಿತಾಂಶ ಹೊರಬೀಳಲಿದೆ.