- 20 ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದ ಯತ್ನಾಳ್- ಅದಕ್ಕೇ ನಿಮ್ಮನ್ನು ಮಾಡಿಲ್ಲ: ಕಾಲೆಳೆದ ಸಿದ್ದು- ವಿಧಾಸಭೆಯಲ್ಲಿ ಸಿದ್ದರಾಮಯ್ಯ-ಯತ್ನಾಳ್ ನಡುವೆ ಮಾತಿನ ಲಹರಿ

ಬೆಂಗಳೂರು (ಮಾ. 9): ‘ನಾನು ಮುಖ್ಯಮಂತ್ರಿಯಾದರೆ ನಿಮ್ಮ ಸರ್ಕಾರ ಬರುವುದೇ ಇಲ್ಲ. 20 ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಅದಕ್ಕೇ ನನ್ನನ್ನು ಮಾಡುವುದಿಲ್ಲ’ ಎಂಬ ಆಡಳಿತಾರೂಢ ಬಿಜೆಪಿ (BJP) ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ (Basanagouda Patil Yatnal) ಹೇಳಿಕೆಯು ಸ್ವಾರಸ್ಯಕರ ಚರ್ಚೆಗೆ ಕಾರಣವಾದ ಪ್ರಸಂಗ ನಡೆಯಿತು.
ಮಂಗಳವಾರ ಬಜೆಟ್‌ (Budget) ಮೇಲಿನ ಚರ್ಚೆಗೂ ಮುನ್ನ ಬಸನಗೌಡ ಪಾಟೀಲ್‌ ಯತ್ನಾಳ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (opposition leader Siddaramaiah) ಅವರನ್ನು ಉದ್ದೇಶಿಸಿ, ‘ನಿಮ್ಮನ್ನು ಕಾಯುತ್ತಾ ಆಡಳಿತ ಪಕ್ಷದವರು ಒಂದು ಗಂಟೆ ಕಾಯುತ್ತಾ ಕುಳಿತಿದ್ದೇವೆ. ಹೀಗಾಗಿ ಅರ್ಧಗಂಟೆ ನಿಮ್ಮ ಭಾಷಣ ಮೊಟಕುಗೊಳಿಸಿ. ನಾವೂ ಸ್ವಲ್ಪ ಮಾತನಾಡುತ್ತೇವೆ’ ಎಂದರು.


ಆಗ ಸಿದ್ದರಾಮಯ್ಯ ಅವರು, ‘ಯತ್ನಾಳ ಅವರೇ ನೀವು ಸಚಿವರು ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ನಿಮಗೇಕೆ ಉಸಾಬರಿ? ನಾವು ಮಾತನಾಡಬೇಕು.. ನಾವು ಮಾತನಾಡಬೇಕು ಎಂದರೆ ಹೇಗೆ? ನೀವು ಎಷ್ಟುಬೇಕಾದರೂ ಮಾತನಾಡಿ’ ಎಂದು ಕುಹಕವಾಡಿದರು. ಆಗ ಯತ್ನಾಳ್‌, ‘ನಾನು ಮುಖ್ಯಮಂತ್ರಿಯಾದರೆ ನಿಮ್ಮ ಸರ್ಕಾರ ಬರುವುದೇ ಇಲ್ಲ. 20 ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ’ ಎಂದು ಟಾಂಗ್‌ ಕೊಟ್ಟರು. ಈ ವೇಳೆ ಸದನವು ನಗೆಗಡಲಲ್ಲಿ ತೇಲಿತು.

‘ಅದಕ್ಕೆ ಆಗಿಲ್ಲ. 20 ವರ್ಷ ಕುರ್ಚಿ ಬಿಡದೆ ಕುಳಿತುಕೊಳ್ಳುತ್ತೀಯ ಎಂಬ ಕಾರಣಕ್ಕಾಗಿಯೇ ಮಾಡಿಲ್ಲ’ ಎಂದು ಸಿದ್ದರಾಮಯ್ಯ ಛೇಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, ‘ನನ್ನನ್ನು ಮಾಡಿದರೆ ನನಗೆ ಅವಕಾಶ ಹೋಗುತ್ತದೆ ಎಂದು ನನ್ನನ್ನು ಮಾಡುತ್ತಿಲ್ಲ. ಮಂತ್ರಿ ಮಾಡಿದರೂ ಮುಂದೆ ಮುಖ್ಯಮಂತ್ರಿ ಕ್ಯಾಂಡಿಟೇಟ್‌ ಎಂಬ ಭಯ ಇದೆ. ನಿಮಗೆ ನನ್ನ ಬಗ್ಗೆ ಅಪಾರ ಗೌರವ ಇದೆ. ಅದಕ್ಕೆ ನಿಮಗೆ ಧನ್ಯವಾದಗಳು’ ಎಂದರು.

ಕೃಷಿಗೆ ಬಳಕೆಗೆ ಒತ್ತುವರಿ ಭೂ ಕಬಳಿಕೆ ಅಲ್ಲ: ಮಾಧುಸ್ವಾಮಿ
ವಿಧಾನಸಭೆ:
ಬಗರ್‌ಹುಕುಂ (Bagar Hukum)ಒತ್ತುವರಿ ವೇಳೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವಿಧಾನಸಭೆಯಲ್ಲಿ ಯಡಿಯೂರಪ್ಪ (bs yediyurappa), ಸಿದ್ದರಾಮಯ್ಯ ಮತ್ತಿತರರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದರ, ಪರಿಣಾಮ ಕೃಷಿ ಬಳಕೆಗಾಗಿ ಮಾಡಿರುವ ಒತ್ತುವರಿಯನ್ನು ಭೂ ಕಬಳಿಕೆ ಎಂದು ಪರಿಗಣಿಸದಿರಲು ಕಾನೂನು ತಿದ್ದುಪಡಿ ತರುವುದಾಗಿ ಕಾನೂನು ಸಚಿವ ಮಾಧುಸ್ವಾಮಿ (JC Madhuswamy)ಭರವಸೆ ನೀಡಿದರು.

Chikkamagaluru ಶ್ರೀಗಂಧ ಮರಗಳಿಗೆ ವೈಜ್ಞಾನಿಕ ಪರಿಹಾರಕ್ಕೆ ವಾರದ ಗಡುವು
ಕ್ಲಬ್‌ಗೆ ನೀಡಿದ್ದ ವೈಮಾನಿಕ ಶಾಲೆಯ 25 ಎಕರೆ ವಾಪಸ್‌
ವಿಧಾನಸಭೆ:
ಬೆಂಗಳೂರಿನ ಜಕ್ಕೂರು ವೈಮಾನಿಕ ತರಬೇತಿ ಶಾಲೆಯ 200 ಎಕರೆ ಕ್ಯಾಂಪಸ್‌ನಲ್ಲಿ 25 ಎಕರೆ ಭೂಮಿಯನ್ನು ವೈಮಾನಿಕ ಹಾಗೂ ಸಾಹಸ ಕ್ರೀಡೆಗಳ ಹೆಸರಲ್ಲಿ ರಚಿಸಲಾಗಿರುವ ಸೊಸೈಟಿಯೊಂದಕ್ಕೆ ಎಕ್ಸಿಕ್ಯುಟೀವ್‌ ಕ್ಲಬ್‌ ಮಾಡಲು ನೀಡಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ನಾರಾಯಣಗೌಡ (narayana gowda) ತಿಳಿಸಿದ್ದಾರೆ.

ಪ್ರಾದೇಶಿಕ ಅಸಮಾನತೆ ಕಲ್ಯಾಣದ ಸೀಮೆ ಬಿಟ್ಟು ಹೋಗಿಲ್ಲ
ಜಕ್ಕೂರು ವೈಮಾನಿಕ ತರಬೇತಿ ಶಾಲೆಯ ( Jakkur flying school ) ಬೆಲೆ ಬಾಳುವ ಸರ್ಕಾರಿ ಜಮೀನನ್ನು ನೂರಾರು ಮಂದಿ ರಾಜಕಾರಣಿಗಳು, ಐಎಎಸ್‌ ಅಧಿಕಾರಿಗಳು, ನ್ಯಾಯಮೂರ್ತಿಗಳನ್ನೊಳಗೊಂಡು ಮಾಡಿಕೊಂಡಿರುವ ಸೊಸೈಟಿಗೆ ನೀಡಿ ಎಕ್ಸಿಕ್ಯುಟೀವ್‌ ಕ್ಲಬ್‌ ಮಾಡಲು ಆದೇಶಿಸಲಾಗಿದೆ. ಇದರಿಂದ ಆಗುತ್ತಿರುವ ಅಧಿಕಾರ ದುರುಯೋಗ ಕುರಿತು ಕಾಂಗ್ರೆಸ್‌ ಸದಸ್ಯ ಕೃಷ್ಣ ಬೈರೇಗೌಡ ಅವರ ಗಮನ ಸೆಳೆವ ಸೂಚನೆಗೆ ಉತ್ತರ ನೀಡಿದ ಸಚಿವರು, ಈ ಶಾಲೆಯ 200 ಎಕರೆ ಭೂಮಿಯಲ್ಲಿ 25 ಎಕರೆಯನ್ನು ಎಕ್ಸಿಕ್ಯುಟಿವ್‌ ಕ್ಲಬ್‌ಗೆ ನೀಡಲು ನಿಮ್ಮ ಸರ್ಕಾರದ ಅವಧಿಯಲ್ಲೇ ಆದೇಶ ಆಗಿತ್ತು. ಇದನ್ನು ನಮ್ಮ ಸರ್ಕಾರ ವಾಪಸ್‌ ಪಡೆದಿದೆ ಎಂದು ತಿಳಿಸಿದರು.