ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ 25 ಸಾವಿರ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತೇವೆ. ಜತೆಗೆ ಎಲ್ಲರಿಗೂ ತಲಾ 10 ಲಕ್ಷ ರು. ಮೊತ್ತದ ವಿಮಾ ಪಾಲಿಸಿ ಜಾರಿ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಘೋಷಿಸಿದ್ದಾರೆ. 

ಬೆಂಗಳೂರು (ಏ.23): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ 25 ಸಾವಿರ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತೇವೆ. ಜತೆಗೆ ಎಲ್ಲರಿಗೂ ತಲಾ 10 ಲಕ್ಷ ರು. ಮೊತ್ತದ ವಿಮಾ ಪಾಲಿಸಿ ಜಾರಿ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಘೋಷಿಸಿದ್ದಾರೆ. ಶನಿವಾರ ಬೆಂಗಳೂರಿನ ಈಜಿಪುರ ಬಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಪೌರ ಕಾರ್ಮಿಕರ ಸಂವಾದದಲ್ಲಿ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬಂದರೆ ಪೌರಕಾರ್ಮಿಕರಿಗೆ ನೀಡಲಿರುವ ಕೊಡುಗೆಗಳ ಬಗ್ಗೆ ಘೋಷಣೆ ಮಾಡಿದರು.

ಪೌರಕಾರ್ಮಿಕರು ನಗರಗಳ ಆತ್ಮ ಹಾಗೂ ಪ್ರಾಣ ಇದ್ದಂತೆ. ಅವರು ಒಂದು ದಿನ ಕೆಲಸ ಮಾಡದಿದ್ದರೂ ಬೆಂಗಳೂರು ಸೇರಿದಂತೆ ನಗರಗಳೇ ಸ್ಥಬ್ಧವಾಗುತ್ತವೆ. ಜತೆಗೆ ಪೌರ ಕಾರ್ಮಿಕರು ಕಸ ಸಂಗ್ರಹಣೆ, ಕಸ ವಿಂಗಡಣೆಯಂತಹ ಅಪಾಯಕಾರಿ ಕೆಲಸಗಳನ್ನು ಮಾಡುತ್ತಾರೆ. ಹೀಗಾಗಿ ಅಪಾಯ ಭತ್ಯೆಯನ್ನೂ ಜಾರಿ ಮಾಡಲಾಗುವುದು ಎಂದು ಶ್ಲಾಘಿಸಿದರು.

ಶೆಟ್ಟರ್‌, ಸವದಿ ಸೋಲಿಸುವ ಹೊಣೆ ಯಡಿಯೂರಪ್ಪಗೆ: ಇಬ್ಬರ ಕ್ಷೇತ್ರಕ್ಕೂ ಹೋಗಿ ಪ್ರಚಾರಕ್ಕೆ ಶಾ ಸೂಚನೆ

ಬೆಂಗಳೂರಿನ ಹತ್ತಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದೇವೆ. ಕಸ ಸಂಗ್ರಹಕಾರರು, ಕಸ ವಿಂಗಡಣೆಗಾರರು, ಕಸದ ಲಾರಿಗಳ ಚಾಲಕರು ಸೇರಿದಂತೆ ಹಲವರೊಂದಿಗೆ ಸಮಸ್ಯೆ ಬಗ್ಗೆ ವಿಚಾರಿಸಿದ್ದೇವೆ. ಇನ್ನು ರಾಹುಲ್‌ಗಾಂಧಿ ಅವರು ಬಂದಾಗ ಜಯನಗರ ಕ್ಷೇತ್ರದಲ್ಲಿ ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಎಲ್ಲವನ್ನೂ ಪರಾಮರ್ಶೆ ಮಾಡಿ ಈ ಕೊಡುಗೆಗಳನ್ನು ಘೋಷಿಸಿದ್ದೇವೆ ಎಂದು ತಿಳಿಸಿದರು.

ಐಪಿಡಿ ಸಾಲಪ್ಪ ಸ್ಮಾರಕ ನಿರ್ಮಾಣ: ಎಲ್ಲಾ ಪೌರಕಾರ್ಮಿಕರಿಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಪೌರಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡಿದ ಕಾಂಗ್ರೆಸ್‌ ಹಿರಿಯ ನಾಯಕ ಐಪಿಡಿ ಸಾಲಪ್ಪ ಅವರ ನೆನಪಿಗಾಗಿ ಐಪಿಡಿ ಸಾಲಪ್ಪ ಸ್ಮಾರಕ ಭ ವನ ನಿರ್ಮಾಣ ಮಾಡಲಾಗುವುದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಬಿಜೆಪಿ 40 ಸೀಟ್‌ಗಳನ್ನೂ ಗೆಲ್ಲಲ್ಲ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಶೆಟ್ಟರ್‌ ನಿವಾಸಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಪಕ್ಷಕ್ಕೆ ಶೆಟ್ಟರ್‌ ಬಂದಿರುವುದು ಆನೆ ಬಲಬಂದಂತಾಗಿದೆ ಎಂದರು. ಬಿಜೆಪಿಗೆ ಲಿಂಗಾಯತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವುದೇ ಅಜೆಂಡಾ ಎಂದು ಕಿಡಿಕಾರಿದ ಅವರು, ಪಕ್ಷವನ್ನು ಕಟ್ಟಿಬೆಳೆಸಲು ಹಗಲಿರಳು ಶ್ರಮಿಸಿದವರನ್ನು ಮೂಲೆಗುಂಪು ಮಾಡುವ ಮೂಲಕ ಅಪಮಾನಿಸುತ್ತಿದೆ. ಈ ಮೂಲಕ ಬಿಜೆಪಿಯು ತಾನು ತೋಡುವ ಖೆಡ್ಡಾಕ್ಕೆ ತಾನೇ ಬೀಳಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿ. ಇದನ್ನರಿತು ಈಗಲಾದರೂ ಅನ್ಯರಿಗೆ ಖೆಡ್ಡಾ ತೋಡುವುದನ್ನು ಬಿಟ್ಟು ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು ಎಂದರು.

ಇನ್ನು ಪ್ರಚಾರ ಅಬ್ಬರ: ಇಂದಿನಿಂದ ಎಲ್ಲ ಪಕ್ಷಗಳ ಮತಬೇಟೆ ಬಿರುಸು

ಹೊಸ ಹುಮ್ಮಸ್ಸು ಹುಟ್ಟಿಸಿದೆ: ಶೆಟ್ಟರ್‌ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿರುವುದು ಪಕ್ಷದ ಕಾರ್ಯಕರ್ತರು, ನಾಯಕರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಉತ್ತರ ಕರ್ನಾಟಕ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಶೆಟ್ಟರ್‌ ಅವರ ಅಭಿಮಾನಿಗಳಿದ್ದು, ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಮತ್ತಷ್ಟುಬಲ ಸಿಗಲಿದೆ ಎಂದರು. ದೇಶದ ಪ್ರಗತಿಗೆ ಬಿಜೆಪಿ ಮಾರಕ, ನಾಡಕವಿ ಕುವೆಂಪು, ನಾರಾಯಣಗುರು, ಬಸವಣ್ಣನವರ ಚರಿತ್ರೆ ಕುರಿತು ಪುಸ್ತಕಗಳಿಗೆ ಬಿಜೆಪಿ ಕತ್ತರಿ ಹಾಕುವ ಕಾರ್ಯ ಮಾಡುತ್ತಿದೆ. ಯುವ ಪೀಳಿಗೆಗೆ ಏನು ಸಂದೇಶ ನೀಡಲು ಹೊರಟಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಡಬಲ್‌ ಎಂಜಿನ್‌ ಸರ್ಕಾರದಿಂದ ದೇಶದ ಪ್ರಗತಿ ನಿರೀಕ್ಷಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲೆಡೆ ಶೇ. 40ರ ಹಗರಣದ್ದೇ ಮಾತಾಗಿದೆ ಎಂದು ಹೇಳಿದರು.