ಕಾಂಗ್ರೆಸ್‌ ಗೆದ್ದರೆ 1 ಸಾವಿರಕ್ಕೆ ಹಮಾಲರಿಗೆ ನಿವೇಶನ: ಮಾಜಿ ಸಚಿವ ದಿವಾಕರಬಾಬು ಭರವಸೆ

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ ವಿವಿಧ ವಿಭಾಗಗಳಲ್ಲಿ ದುಡಿಯುತ್ತಿರುವ ಎಲ್ಲ ಹಮಾಲರಿಗೆ ಬರೀ .1 ಸಾವಿರಗಳಿಗೆ 25*30 ವಿಸ್ತೀರ್ಣದ ನಿವೇಶನ ನೀಡುವುದಾಗಿ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಪಕ್ಷದ ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎಂ. ದಿವಾಕರಬಾಬು ಭರವಸೆ ನೀಡಿದರು.

If Congress wins porters will get a place for 1000 rupis Ex-minister Diwakarbabu promises at bellary rav

ಬಳ್ಳಾರಿ (ಫೆ.13) : ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ ವಿವಿಧ ವಿಭಾಗಗಳಲ್ಲಿ ದುಡಿಯುತ್ತಿರುವ ಎಲ್ಲ ಹಮಾಲರಿಗೆ ಬರೀ .1 ಸಾವಿರಗಳಿಗೆ 25*30 ವಿಸ್ತೀರ್ಣದ ನಿವೇಶನ ನೀಡುವುದಾಗಿ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಪಕ್ಷದ ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎಂ. ದಿವಾಕರಬಾಬು((M Diwakarbabu) ಭರವಸೆ ನೀಡಿದರು.

ಇಲ್ಲಿನ ಮುಂಡ್ರಿಗಿ ಕೈಗಾರಿಕಾ ಪ್ರದೇಶ(Mundrigi Industrial Area)ದ 2ನೇ ಹಂತದ ಅಗ್ರೋಟೆಕ್‌ ಆವರಣದಲ್ಲಿ ರೈಸ್‌ ಮಿಲ್‌, ಕಾಟನ್‌ ಮಿಲ್‌ ಮತ್ತು ಎ.ಸಿ.ಗೋಡಾನ್‌ ಹಮಾಲರ ಸಂಘಟನೆ ವತಿಯಿಂದ ಆಯೋಜಿಸಿದ್ದ ‘ನಾವು ನಿಮಗಾಗಿ-ನೀವು ನಮಗಾಗಿ’ ಸಮಾವೇಶದಲ್ಲಿ ಹಮಾಲರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಮಾಲರಿಗೆ ಜೀವವಿಮೆ ಸೇರಿದಂತೆ ಕಾರ್ಮಿಕರಿಗೆ ಅನುಕೂಲಕ್ಕಾಗಿ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ಕಂಪ್ಲಿ ಕಲಾರತಿ ಉತ್ಸವದ ಸಂಭ್ರಮ, ಸಾಂಸ್ಕೃತಿಕ ಇತಿಹಾಸ ಮರುಕಳಿಸಿದ ವೈಭವ ಮೆರವಣಿಗೆ

ಸುಳ್ಳು ಹೇಳುವ ಜಾಯಮಾನ ನನ್ನದಲ್ಲ. ಹಮಾಲರು, ಕಾರ್ಮಿಕರ ಏನೇ ಕಷ್ಟಗಳಿದ್ದರೂ ಎಂಥದೇ ಸಂದರ್ಭದಲ್ಲೂ ನಾನು ನಿಮ್ಮ ಜೊತೆಗೆ ಇರುತ್ತೇನೆ. ನಿಮ್ಮೆಲ್ಲ ಕಷ್ಟ-ನಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಪಕ್ಷವೆಂದರೆ ಅದು ಕಾಂಗ್ರೆಸ್‌ ಪಕ್ಷ ಮಾತ್ರ. ಕಳೆದ 18 ವರ್ಷದ ಹಿಂದೆಯೇ ನಾನು 600 ಜನ ಹಮಾಲರಿಗಾಗಿ ಸ್ಥಳ ಒದಗಿಸಿದ್ದೆ. ಇಂದಿಗೂ ಯಾವುದೇ ನಾಯಕ, ಯಾವುದೇ ಸರ್ಕಾರ ಬಂದರೂ ನಿಮಗೆಲ್ಲ ಮನೆಗಳನ್ನು ಕಟ್ಟಿಸಿಕೊಡಲಾಗಲಿಲ್ಲ. ಈ ಕೊರತೆ ನೀಗಿಸಲು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರಲ್ಲದೆ, ಕಾಂಗ್ರೆಸ್‌ ಪಕ್ಷದಿಂದ ನನಗೆ ಟಿಕೆಟ್‌ ನೀಡಿದಲ್ಲಿ ಈ ಬಾರಿ ಮತ್ತೆ ನನ್ನ ಕೈ ಹಿಡಿದರೆ ನಾನೇ ಒಂದು ಲೇಔಟ್‌ ಮಾಡಿ ನಿಮಗೆಲ್ಲರಿಗೂ 25*30 ಅಳತೆಯ ನಿವೇಶನಗಳನ್ನು ಮಾಡಿ ಹಂಚಿಕೆ ಮಾಡುತ್ತೇನೆ ಎಂಬುದು ಬರೀ ಭರವಸೆಯಲ್ಲ; ಇದು ನನ್ನ ವಾಗ್ದಾನ ಎಂದು ಹೇಳಿದರು.

ರೈಸ್‌ ಮಿಲ್‌ ಮತ್ತು ಕಾಟನ್‌ ಮಿಲ್‌ ಹಾಗೂ ಎ.ಸಿ. ಗೋಡಾನ್‌ ಹಮಾಲರ ಸಂಘಟನೆಯ ಧುರೀಣ ಕಾಕರ್ಲತೋಟ ವೀರೇಶ್‌ ಮಾತನಾಡಿ, ನಾವೆಲ್ಲರೂ ಈಗ ಒಗ್ಗಟ್ಟಾಗಬೇಕಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಎಂ.ದಿವಾಕರಬಾಬು ಅವರಿಗೆ ಟಿಕೆಟ್‌ ನೀಡಬೇಕೆಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡೋಣ. ಎಂ.ದಿವಾಕರಬಾಬು ಅವರಿಗೆ ಟಿಕೆಟ್‌ ಲಭಿಸಿದರೆ ಅವರ ಗೆಲುವು ನಿಶ್ಚಿತ. ಅವರನ್ನು ಗೆಲ್ಲಿಸಿ ಕೊಡುವ ಹೊಣೆಗಾರಿಕೆ ನಮ್ಮದು. ಅವರು ಗೆದ್ದರೆ ಹಮಾಲರು ಮತ್ತು ಕಾರ್ಮಿಕರ ಯಾವುದೇ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುತ್ತಾರೆ. ಅವರನ್ನು ಯಾವುದೇ ಸಾಮಾನ್ಯ ವ್ಯಕ್ತಿಯೂ ಕೂಡ ನೇರವಾಗಿ ಸಂಪರ್ಕಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು ಎಂದರು.

ಇದಕ್ಕೂ ಮುನ್ನ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯಲ್ಲಿ ತರಕಾರಿ, ಹಣ್ಣುಗಳ ವ್ಯಾಪಾರ, ಕಿರಾಣಿ ಸೇರಿದಂತೆ ನಾನಾ ವಿಭಾಗಗಳಲ್ಲಿ ಹಮಾಲರಾಗಿ ದುಡಿಯುತ್ತಿರುವ ಕೆಲ ಹಮಾಲರು ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಸಮಾವೇಶದಲ್ಲಿ ಮಾಜಿ ಸಚಿವ ಎಂ.ದಿವಾಕರ ಬಾಬು ಸಮ್ಮುಖದಲ್ಲಿ ಮಂಡಿಸಿದರು.

ಪ್ರಲ್ಹಾದ್ ಜೋಶಿ ಸಿಎಂ ಹೇಳಿಕೆ, ದಿಕ್ಕು ತಪ್ಪಿಸುವ ತಂತ್ರ: ಸಚಿವ ಶ್ರೀರಾಮುಲು

ಹಮಾಲರ ಸಂಘದ ಮಾಜಿ ಧುರೀಣರಾದ ತಿಮ್ಮಪ್ಪ, ಅಂದ್ರಾಳು ತಿಮ್ಮಪ್ಪ, ಕೃಷ್ಣಪ್ಪ ಒಳಗೊಂಡಂತೆ ರೈಸ್‌ ಮಿಲ್‌ ಮತ್ತು ಕಾಟನ್‌ ಮಿಲ್‌ ಹಾಗೂ ಎ.ಸಿ.ಗೋಡಾನ್‌ ಹಮಾಲರ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಮತ್ತು 2000 ಜನ ಹಮಾಲರು, ಕಾಂಗ್ರೆಸ್‌ ಪಕ್ಷದ ಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮ ಕಿಶೋರ್‌ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios