Asianet Suvarna News Asianet Suvarna News

ಕಾಂಗ್ರೆಸ್‌ ಗೆದ್ದರೆ ಮಡಿವಾಳರಿಗೆ ಎಸ್ಸಿ ಮೀಸಲು: ಸಿದ್ದು

* ಅನ್ನಪೂರ್ಣಮ್ಮ ವರದಿ ಕೇಂದ್ರಕ್ಕೆ ಶಿಫಾರಸು

* ಕಾಂಗ್ರೆಸ್‌ ಗೆದ್ದರೆ ಮಡಿವಾಳರಿಗೆ ಎಸ್ಸಿ ಮೀಸಲು: ಸಿದ್ದು

* ಮೇಲ್ಮನೆಯಲ್ಲೂ ಪ್ರಾತಿನಿಧ್ಯ ನೀಡಲು ಯತ್ನ: ಮಾಜಿ ಸಿಎಂ ಭರವಸೆ

If Congress Wins Madiwalas will get SC reservation Says Karnataka Former CM Siddaramaiah pod
Author
Bangalore, First Published May 23, 2022, 4:52 AM IST

ತುಮಕೂರು(ಮೇ.23): ರಾಜ್ಯದಲ್ಲಿ ಮುಂದೆ ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದಾಗ ಮಡಿವಾಳ ಸಮುದಾಯವನ್ನು (Madivala Community) ಪರಿಶಿಷ್ಟಜಾತಿಗೆ (ಎಸ್‌ಸಿ) ಸೇರಿಸುವ ಸಂಬಂಧ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಡಿಕೆಶಿ vs ಸಿದ್ದರಾಮಯ್ಯ: ಎಂಎಲ್‌ಸಿ ಟಿಕೆಟ್‌ ಬಡಿದಾಟದಲ್ಲಿ ಗೆಲುವು ಯಾರಿಗೆ?

ನಗರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮಡಿವಾಳ ಸಮಾಜ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಡಿವಾಳ ಸಮಾಜದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಡಿವಾಳ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆ ಇದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಡಿವಾಳ ಸಮಾಜಕ್ಕೆ ಮೇಲ್ಮನೆಯಲ್ಲಿ ಟಿಕೆಟ್‌ ನೀಡಲು ಪ್ರಯತ್ನಿಸುತ್ತೇವೆ. ಸಮಾಜಕ್ಕೆ ಎಸ್ಸಿ ಮೀಸಲಾತಿ ಕಲ್ಪಿಸಲು ಶಿಫಾರಸು ಮಾಡಿರುವ ಅನ್ನಪೂರ್ಣಮ್ಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲೂ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇವೆ ಎಂದು ಹೇಳಿದರು.

ಅಸಮಾನತೆಗೆ ಹಿಂದುಳಿದ ಜಾತಿಗಳಲ್ಲ, ಸಾಮಾಜಿಕ ವ್ಯವಸ್ಥೆ ಕಾರಣ. ಶೂದ್ರ ಸಮುದಾಯ ಹಾಗೂ ಪಂಚಮ ವರ್ಗ ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಅಕ್ಷರದಿಂದ ವಂಚಿತರಾದವರು ಅಸಮಾನತೆ ಅನುಭವಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಂದಿಗೂ ಕೆಲ ಸಮುದಾಯಗಳಿಗೆ ಸಮಾನತೆ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ. ಶೋಷಿತ, ಅವಕಾಶ ವಂಚಿತ ಸಮಾಜಗಳ ಏಳಿಗೆಗೆ ಕಾರ್ಯಕ್ರಮಗಳನ್ನು ರೂಪಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಸರ್ಕಾರಗಳ ಆದ್ಯ ಕರ್ತವ್ಯ. ನಾವು ಅಧಿಕಾರಕ್ಕೆ ಬಂದರೆ ಸಾಮಾಜಿಕ ನ್ಯಾಯದಿಂದ ವಂಚಿತರಾದ ಜಾತಿಗಳಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡುತ್ತೇವೆ ಎಂದರು.

ಹೈಕಮಾಂಡ್ ಬುಲಾವ್: ದೆಹಲಿಗೆ ಹಾರಿದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ಸಿ.ನಂಜಪ್ಪ, ಕರ್ನಾಟಕ ಮಡಿವಾಳ ಸಮಾಜದ ಅಮರನಾಥ್‌, ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ, ಎಚ್‌.ಎಂ.ರೇವಣ್ಣ ಇತರರು ಇದ್ದರು.

 

Follow Us:
Download App:
  • android
  • ios