Asianet Suvarna News Asianet Suvarna News

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ 10 ಕೆ.ಜಿ. ಉಚಿತ ಅಕ್ಕಿ: ಸಿದ್ದರಾಮಯ್ಯ

ಮುಂಬರುವ 2023ರ ಚುನಾವಣೆಯಲ್ಲಿ ಜನಾಶೀರ್ವಾದಿಂದ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿ ಉಚಿ​ತ​ವಾಗಿ ಕೋಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿ​ಸಿ​ದ​ರು.

If Congress wins 10 kg Free rice says siddaramaiah in belagavi gvd
Author
Bangalore, First Published May 9, 2022, 3:10 AM IST

ಬೆಳಗಾವಿ (ಮೇ.09): ಮುಂಬರುವ 2023ರ ಚುನಾವಣೆಯಲ್ಲಿ ಜನಾಶೀರ್ವಾದಿಂದ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿ ಉಚಿ​ತ​ವಾಗಿ (Rice) ಕೋಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಘೋಷಿ​ಸಿ​ದ​ರು. ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಭಾನು​ವಾ​ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಅಗತ್ಯವಸ್ತು ಬೆಲೆ ದುಪ್ಪ​ಟ್ಟಾ​ಗಿ​ದೆ. 

ಒಂದು ಕಡೆ ಬೆಲೆ ಏರಿಕೆ ಇನ್ನೊಂದು ಕಡೆ ಲೂಟಿ ಹೊಡೆಯುವುದು ನಡೆ​ಯು​ತ್ತಿ​ದೆ. ಪಿಎಸ್‌ಐ ನೇಮಕಾತಿಯಲ್ಲಿ (PSI Recruitment Scam) ಸುಮಾರು .300 ಕೋಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು. ಇಂಥ ಸರ್ಕಾರ ಯಾವುದೇ ಕಾರ​ಣಕ್ಕೂ ಇರ​ಬಾ​ರದು, ಇಂಥ ಸರ್ಕಾ​ರ​ವನ್ನು ಬೇರು ಸಮೇತ ಕಿತ್ತು ಎಸೆದಾಗ ದೇಶ, ನಾವು, ನೀವು ಉಳಿ​ಯು​ತ್ತೇ​ವೆ. ಈ ಸರ್ಕಾರಕ್ಕೆ ಕಣ್ಣು ಕಾಣಿಸಲ್ಲ, ಕಿವಿಯೂ ಕೇಳಿಸಲ್ಲ. ಈ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ, ಘೇಂಡಾಮೃಗದ ಚರ್ಮ ಎಂದು ತೀವ್ರ ಕಿಡಿಕಾರಿದರು.

Karnataka Politics: ಸಿದ್ರಾಮಣ್ಣನಷ್ಟು ಭ್ರಷ್ಟಾಚಾರಿ ಈ ರಾಜ್ಯದಲ್ಲಿ ಬೇರಿಲ್ಲ: ನಳಿನ್‌ ಕುಮಾರ್‌ ಕಟೀಲ್‌

ಕೈ ಜೋಡಿಸಿ ಕೇಳುವೆ ಮತ್ತೆ ಅವಕಾಶ ಕೊಡಿ: ಕೈಜೋಡಿಸಿ ಪ್ರಾರ್ಥನೆ ಮಾಡು​ತ್ತೇನೆ, ಮತ್ತೆ ಕಾಂಗ್ರೆಸ್‌ಗೆ (Congress) ಅವಕಾಶ ಕೊಡಿ. ಕೊರೋನಾ (Corona) ಕಾಲ​ದಲ್ಲಿ ಅನ್ನಭಾಗ್ಯ ಕಾರ್ಯಕ್ರಮ ಇಲ್ಲದಿದ್ದರೆ ಜನ ಬದುಕಲು ಆಗು​ತ್ತಿತ್ತಾ? ರಾಜ್ಯದಲ್ಲೀಗ ಜನ ವಿರೋಧಿ ಸರ್ಕಾರ ಅಧಿ​ಕಾ​ರ​ದ​ಲ್ಲಿದೆ. ಈ ಸರ್ಕಾರ ಯಾವುದೇ ಕಾರ​ಣಕ್ಕೂ ಮುಂದು​ವ​ರಿ​ಯ​ಬಾ​ರ​ದು ಎಂದು ಆಕ್ರೋಶ ಹೊರ​ಹಾ​ಕಿ​ದ​ರು.

ನೇಕಾರರ ಸಾಲ ಮನ್ನಾ ಮಾಡಿದ್ದು ನಾನು. ಬಿ.ಎ​ಸ್‌.ಯಡಿಯೂರಪ್ಪ (BS Yediyurappa) ಮತ್ತು ಬೊಮ್ಮಾಯಿ (Basavaraj Bommai) ಅವರು ಒಂದೇ ಒಂದು ರುಪಾಯಿ ಸಾಲ ಮನ್ನಾ ಮಾಡಿದ್ದನ್ನು ತೋರಿಸಲಿ ಎಂದು ಸವಾಲು ಹಾಕಿದ ಅವರು, ಪ್ರವಾಹ ಬಂದು ಜನ ಸಂಕ​ಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ಕೊಡಿ ಎಂದು ಯಡಿಯೂರಪ್ಪಗೆ ಹೇಳಿದೆ. ಆದರೆ, ಅವರು ಕೊಡ​ಲೇ ಇಲ್ಲ. ಬಸವರಾಜ ಬೊಮ್ಮಾಯಿ ಕೂಡ ನಿರ್ಲಕ್ಷ್ಯ ಮಾಡಿ​ದ​ರು. ಬಸವರಾಜ ಬೊಮ್ಮಾಯಿ ಚುನಾ​ಯಿತ ಮುಖ್ಯ​ಮಂತ್ರಿ ಅಲ್ಲ, ನೇಮ​ಕ​ಗೊಂಡ ಮುಖ್ಯ​ಮಂತ್ರಿ ಎಂದು ಲೇವಡಿ ಮಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ​ದ​ಲ್ಲಿ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ. ಇವರ ಜನ್ಮಕ್ಕೆ ಒಂದು ಮನೆ ಕಟ್ಟಿಸಿಕೊಡಲೂ ಆಗಿಲ್ಲ. ಏಳು ಕೆ.ಜಿ. ಅಕ್ಕಿಯನ್ನು ನಾನು ಉಚಿತವಾಗಿ ಕೊಟ್ಟಿದ್ದೆ. ಈಗ ಅವರು ಅದ​ರಲ್ಲೂ ಎರಡು ಕೆ.ಜಿ. ಕಡಿಮೆ ಮಾಡಿದ್ದಾರೆ. ಮುಂದೇನು ಮಾಡ್ತಾರೋ ಗೊತ್ತಿಲ್ಲ ಎಂದರು ಸಿದ್ದ​ರಾ​ಮ​ಯ್ಯ.

ಸಿದ್ದರಾಮಯ್ಯಗೆ ಟಕ್ಕರ್​ ಕೊಡಲು ಜೆಡಿಎಸ್ ಸಜ್ಜು, ಎಚ್‌ಡಿಕೆಗೆ ಬಾದಾಮಿಯೇ ಟಾರ್ಗೆಟ್​

ನೇಕಾರರ ಸಾಲ ಮನ್ನಾ ಮಾಡಿದ್ದು ನಾನು. ಯಡಿಯೂರಪ್ಪ ಮತ್ತು ಬೊಮ್ಮಾಯಿ ಒಂದೇ ಒಂದು ರುಪಾಯಿ ಸಾಲ ಮನ್ನಾ ಮಾಡಿದ್ದನ್ನು ತೋರಿಸಲಿ. ಪ್ರವಾಹ ಬಂದು ಜನ ಸಂಕ​ಷ್ಟಕ್ಕೆ ಸಿಲುಕಿದ್ದಾರೆ, ಪರಿಹಾರ ಕೊಡಿ ಎಂದು ಯಡಿಯೂರಪ್ಪಗೆ ಹೇಳಿದೆ. ಆದರೆ, ಅವರು ಕೊಡ​ಲೇ ಇಲ್ಲ. ಬೊಮ್ಮಾಯಿ ಕೂಡ ನಿರ್ಲಕ್ಷ್ಯ ಮಾಡಿ​ದ​ರು.
-ಸಿದ್ದರಾಮಯ್ಯ, ವಿಪಕ್ಷ ನಾಯಕ

Follow Us:
Download App:
  • android
  • ios