Asianet Suvarna News Asianet Suvarna News

ಕಾಂಗ್ರೆಸ್‌ ಇದ್ದರೆ ತಿಂಗಳ ಡೇಟಾ ಬಿಲ್‌ 5000 ಆಗುತ್ತಿತ್ತು: ಮೋದಿ

ಗುಜರಾತ್‌ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಿ ಎರಡು ದಿನ ಗುಜರಾತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದರು. ಗುಜರಾತ್‌ ಹೆಸರನ್ನು ಯಾರು ಕೆಡಿಸುತ್ತಿದ್ದಾರೋ ಅವರ ವಿರುದ್ಧ ಎಚ್ಚರದಿಂದಿರಬೇಕು ಎಂದರು.

If congress in power Monthly data bill will be 5 thousand rupees akb
Author
First Published Nov 20, 2022, 8:49 AM IST

ಅಹಮದಾಬಾದ್‌: ಗುಜರಾತ್‌ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಿ ಎರಡು ದಿನ ಗುಜರಾತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದರು. ಗುಜರಾತ್‌ ಹೆಸರನ್ನು ಯಾರು ಕೆಡಿಸುತ್ತಿದ್ದಾರೋ ಅವರ ವಿರುದ್ಧ ಎಚ್ಚರದಿಂದಿರಬೇಕು ಎಂದರು.

ಶನಿವಾರ ವಲ್ಸದ್‌ನ (Valsad) ಜುಜ್ವಾದಲ್ಲಿ (Jujva) ನಡೆದ ರಾರ‍ಯಲಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ 1 ಜಿಬಿ ಇಂಟರ್ನೆಟ್‌ (Internet) ಡೇಟಾದ ಬೆಲೆ 300 ರು. ಇತ್ತು. ಈಗ ಅದು 10 ರು.ಗೆ ಸಿಗುತ್ತಿದೆ. ಅಲ್ಲದೇ ಪ್ರಸ್ತುತ ತಿಂಗಳ ಡೇಟಾ ಬಿಲ್‌ ಸಹ 250ರಿಂದ 300 ರು. ಇದೆ. ಒಂದು ವೇಳೆ ಕಾಂಗ್ರೆಸ್‌ ಅಧಿಕಾರದಲ್ಲಿ ಮುಂದುವರೆದಿದ್ದರೆ ಇದು 5 ಸಾವಿರ ರು.ಗೆ ಏರಿಕೆಯಾಗುತ್ತಿತ್ತು ಎಂದರು.

ಇಂದೂ ಸಹ ಮೋದಿ ರಾಲಿ

ಭಾನುವಾರವೂ ಸಹ ಅಮ್ರೇಲಿ (Amreli), ಭಾವನಗರ (Bhavanagar), ಜುನಾಗಢ ಜಿಲ್ಲೆಗಳಲ್ಲಿ ನಡೆಯಲಿರುವ ನಾಲ್ಕು ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ತವರು ರಾಜ್ಯಕ್ಕೆ ಇದು ಮೋದಿ ಅವರ ಎರಡನೇ ಭೇಟಿಯಾಗಿದ್ದು ನ.6 ರಂದು ನಡೆದ ವಿವಿಧ ಸಮಾವೇಶಗಳಲ್ಲಿ ಭಾಗಿಯಾಗಿದ್ದರು. ರಾಜ್ಯದ 182 ವಿಧಾನಸಭಾ ಕ್ಷೇತ್ರಗಳಿಗೆ ಡಿ.1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.


Gujarat Elections: ಮೋದಿಯನ್ನು ಗೆಲ್ಲಿಸಿ, ಇಲ್ದಿದ್ರೆ ಪ್ರತಿ ನಗರದಲ್ಲೂ ಅಫ್ತಾಬ್‌ ಇರ್ತಾನೆ, ಅಸ್ಸಾಂ ಸಿಎಂ ಹೇಳಿಕೆ!

ಮೋದಿ ನಾಡಿಗೆ ಯೋಗಿ ಎಂಟ್ರಿ: ಕಮಲ ಅರಳಿಸಲು 'ತ್ರಿಶೂಲವ್ಯೂಹ'

Follow Us:
Download App:
  • android
  • ios