ಮಾಜಿ ಐಎಎಸ್ ಅಧಿಕಾರಿ ರಾಜಕೀಯ ಸೇರ್ಪಡೆಗೆ ಸಜ್ಜಾಗಿದ್ದು ಅಧಿಕೃತವಾಗಿ ಪಕ್ಷ ಸೇರಲು ದಿನಾಂಕ ನಿಗದಿಯಾಗಿದೆ
ಚೆನ್ನೈ (ನ.08): ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ. ನವೆಂಬರ್ 9 ರಂದು ಅಧಿಕೃತವಾಗಿ ತಮಿಳುನಾಡಿನಲ್ಲಿ ಸೆಂಥಿಲ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಸುವರ್ಣ ನ್ಯೂಸ್ ಗೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸ್ಪಷ್ಟಪಡಿಸಿದ ಸಸಿಕಾಂತ್ ಸೆಂಥಿಲ್ ತಮ್ಮ ರಾಜಕೀಯ ಜೀವನ ಆರಂಭದ ಬಗ್ಗೆ ತಿಳಿಸಿದ್ದಾರೆ.
2009ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ 2017ರ ಅಕ್ಟೋಬರ್ 10ರಿಂದ ದ.ಕ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ರಾಜೀನಾಮೆ ನೀಡಿದ್ದು ಸೆಂಥಿಲ್ ಹೇಡಿತನ: ಬಿಜೆಪಿ ವ್ಯಂಗ್ಯ
2019ರ ಸೆ.6 ರಂದು ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಸೆಂಥಿಲ್ ಆ ಬಳಿಕ ಸಿಎಎ ಸೇರಿ ರಾಜ್ಯದಲ್ಲಿ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು.
ಸದ್ಯ ಚೆನ್ನೈ ನಲ್ಲೇ ಉಳಿದುಕೊಂಡಿರುವ ಸಸಿಕಾಂತ್ ಸೆಂಥಿಲ್ ಅಧಿಕೃತವಾಗಿ ನವೆಂಬರ್ 9 ರಂದು ಚೆನ್ನೈನಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
