Asianet Suvarna News Asianet Suvarna News

ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋಗಲ್ಲ: ಸಂಸದ ಸಂಗಣ್ಣ

ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋಗುತ್ತೇನೆ ಎನ್ನುವ ಸುದ್ದಿ ಸುಳ್ಳು ಎಂದು ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದ್ದಾರೆ. ಅವರು ಸೋಮವಾರ ಪತ್ರಕರ್ತರ ಜತೆ ಮಾತನಾಡಿ, ನನ್ನ ರಾಜಕೀಯ ಗುರುವಾಗಿದ್ದ ಗಂಗಾವತಿಯ ಎಚ್‌.ಜಿ. ರಾಮುಲು ಮನೆಗೆ ಹೋಗಿ ಕುಶಲೋಪರಿ ವಿಚಾರಿಸಿರುವೆ.

I will not leave BJP Says Koppal MP Karadi Sanganna gvd
Author
First Published Jul 19, 2023, 2:01 PM IST | Last Updated Jul 19, 2023, 2:01 PM IST

ಕನಕಗಿರಿ (ಜು.19): ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋಗುತ್ತೇನೆ ಎನ್ನುವ ಸುದ್ದಿ ಸುಳ್ಳು ಎಂದು ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದ್ದಾರೆ. ಅವರು ಸೋಮವಾರ ಪತ್ರಕರ್ತರ ಜತೆ ಮಾತನಾಡಿ, ನನ್ನ ರಾಜಕೀಯ ಗುರುವಾಗಿದ್ದ ಗಂಗಾವತಿಯ ಎಚ್‌.ಜಿ. ರಾಮುಲು ಮನೆಗೆ ಹೋಗಿ ಕುಶಲೋಪರಿ ವಿಚಾರಿಸಿರುವೆ. ಇದನ್ನೇ ಕೆಲ ಮಾಧ್ಯಮಗಳು ಊಹಿಸಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತೇನೆ ಎಂದು ಸುದ್ದಿ ಪ್ರಕಟಿಸಿರುವುದು ಸತ್ಯಕ್ಕೆ ದೂರವಾದದು. 

ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಇದೆ. ಪಕ್ಷದಲ್ಲಿ ಹಲವರು ಆಕಾಂಕ್ಷಿಗಳಿದ್ದು, ಅದರಲ್ಲಿ ನಾನು ಸಹ ಒಬ್ಬ. ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡುತ್ತೋ ಅವರ ಪರವಾಗಿ ಕೆಲಸ ಮಾಡುವೆ ಎಂದಿದ್ದಾರೆ. ಮುಖಂಡರಾದ ಶಿವಪ್ಪ ಕಲ್ಮನಿ, ಸಣ್ಣ ಕನಕಪ್ಪ, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ಶಿವಾನಂದ ಬೆನಕನಾಳ, ಬಸವರಾಜ ಅಂಗಡಿ, ರಾಘವೇಂದ್ರ ಉಳ್ಳಾಗಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

ಉತ್ತಮ ಶಿಕ್ಷಣ, ಆರೋಗ್ಯದಿಂದ ದೇಶದ ಅಭಿವೃದ್ಧಿ: ಎಚ್‌.ಡಿ.ಕುಮಾರಸ್ವಾಮಿ

ತಾಯಿ ಋುಣ ತೀರಿಸಲು ಸಾಧ್ಯವಿಲ್ಲ: ತಾಯಿ ಋುಣ ತೀರಿಸಲು ಸಾಧ್ಯವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜಿನಲ್ಲಿ ಭಾನುವಾರ ನಡೆದ ದಿ.ಅನುಸೂಯಮ್ಮ ಹನುಮಂತಪ್ಪ ಚೌಧರಿ 10ನೇ ವರ್ಷದ ಪುಣ್ಯ ಸ್ಮರಣಾರ್ಥಕ ನಿಮಿತ್ತ ಮಲ್ಲಿಕಾರ್ಜುನ ಚೌಧರಿ ಮತ್ತು ಕುಟುಂಬ ಬಳಗದಿಂದ ಆಯೋಜಿಸಲಾಗಿದ್ದ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ತಂದೆ, ತಾಯಿ ಋುಣ ತೀರಿಸಲು ಸಾಧ್ಯವಿಲ್ಲ.ಅನುಸೂಯಮ್ಮ ದಿವಂಗತರಾಗಿ ಹತ್ತು ವರ್ಷಗಳಾಗಿವೆ. ಅವರ ಕುಟುಂಬಸ್ಥರು ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ತಂದೆ, ತಾಯಿ ಅವರ ಋುಣದಲ್ಲಿ ಬದುಕುತ್ತಿದ್ದೇವೆ ಅವರ ಸೇವೆ ಯಾರು ಮರೆಯಬಾರದು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್‌ ಗುಳಗಣ್ಣವರ್‌ ಮಾತನಾಡಿ, ಚೌಧರಿ ಕುಟುಂಬಸ್ಥರು ಅನಸೂಯಮ್ಮ ನಿಧನರಾದ ಬಳಿಕ ತುಂಭಾ ನೋವು ಇದ್ದರು ಅವರ ಸ್ಮರಣಾರ್ಥ ಇಂತಹ ಕ್ರಿಕೆಟ್‌ ಆಯೋಜಿಸುವ ಪರಿಪಾಠ 10 ವರ್ಷಗಳಿಂದ ಬಂದಿದೆ ಎಂದರು. ಆಯೋಜಕ ಪಪಂ ಸದಸ್ಯ ಮಲ್ಲಿಕಾರ್ಜುನ ಚೌಧರಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ ಹೇಳವರ,ಈರಪ್ಪ ಹೂಗಾರ, ಮುಖಂಡ ವೀರೇಶ ಸಬರದ, ಸಾಧೀಕ್‌ಪಾಷಾ ಖಾಜಿ, ಪಪಂ ಸದಸ್ಯ ಗಗನ ನೋಟಗಾರ, ಬಾಲರಾಜ ಗಾಳಿ, ಮಂಜುನಾಥ ನಾಡಗೌಡ್ರು, ಮಯೂರ ತಳವಾರ, ರಂಗನಾಡಗೌಡ್ರು ಯುವ ಕ್ರೀಡಾಪಟುಗಳು ಇದ್ದರು.

ರೈತರ ಆತ್ಮಹತ್ಯೆ ತಡೆಗೆ ಪ್ಯಾಕೇಜ್‌ ಘೋಷಿಸಿ: ದರ್ಶನ್‌ ಪುಟ್ಟಣ್ಣಯ್ಯ

ಬಿಜೆಪಿ-ಕಾಂಗ್ರೆಸ್‌ ಎನ್ನುವುದಕ್ಕಿಂತ ನಾನು ತಳಮಟ್ಟದ ನಾಯಕರೊಂದಿಗೆ ಸಂಪರ್ಕ ಹೊಂದಿದ್ದು, ಅವರು ಅನಾರೋಗ್ಯ, ಅಪಘಾತವಾಗಿ ಚಿಕಿತ್ಸೆ ಪಡೆಯುತ್ತಿರುವಾಗ ನಾವು ಆರೋಗ್ಯ ವಿಚಾರಿಸುವುದು ನನ್ನ ಕರ್ತವ್ಯ. ಇಂತದ್ದೇ ಘಟನೆಗಳು ಕನಕಗಿರಿ, ಕಾರಟಗಿ ಪಟ್ಟಣಗಳಲ್ಲಿನ ಕಾಂಗ್ರೆಸ್‌ ನಾಯಕರ ಮನೆಗಳಲ್ಲಿ ನಡೆದಿದ್ದು, ಇವರು ಮನೆಗೆ ಹೋಗಿ ಆರೋಗ್ಯ ವಿಚಾರಿಸಿದ್ದೇನೆ. ಇದರಲ್ಲಿ ತಪ್ಪೇನಿದೆ?
-ಸಂಗಣ್ಣ ಕರಡಿ, ಸಂಸದ

Latest Videos
Follow Us:
Download App:
  • android
  • ios