ಈ ಹಿಂದಿನ ಕಾಂಗ್ರೆಸ್‌ ಆಡ​ಳಿ​ತಾ​ವ​ಧಿ​ಯಲ್ಲಿ ಕರ್ನಾ​ಟಕಕ್ಕೆ 30 ಸಾವಿರ ಕೋಟಿ ರು. ವಿದೇಶಿ ಹೂಡಿಕೆ ಬರು​ತ್ತಿತ್ತು. ಇದೀಗ ಬಿಜೆ​ಪಿಯ ಅವ​ಧಿ​ಯಲ್ಲಿ 90 ಸಾವಿರ ಕೋಟಿ ರು. ವಿದೇಶಿ ಹೂಡಿಕೆ ಬರು​ತ್ತಿದೆ. ಈ ಬಾರಿ ಬಿಜೆಪಿಗೆ ಮತ್ತೊಮ್ಮೆ ಬಹುಮತ ಕೊಡಿ. ಕರ್ನಾಟಕವನ್ನು ದೇಶದಲ್ಲಿಯೇ ನಂಬರ್‌ ಒನ್‌ ರಾಜ್ಯ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. 

ಬೆಳಗಾವಿ/ಹುಮನಾಬಾದ್‌ (ಏ.30): ಈ ಹಿಂದಿನ ಕಾಂಗ್ರೆಸ್‌ ಆಡ​ಳಿ​ತಾ​ವ​ಧಿ​ಯಲ್ಲಿ ಕರ್ನಾ​ಟಕಕ್ಕೆ 30 ಸಾವಿರ ಕೋಟಿ ರು. ವಿದೇಶಿ ಹೂಡಿಕೆ ಬರು​ತ್ತಿತ್ತು. ಇದೀಗ ಬಿಜೆ​ಪಿಯ ಅವ​ಧಿ​ಯಲ್ಲಿ 90 ಸಾವಿರ ಕೋಟಿ ರು. ವಿದೇಶಿ ಹೂಡಿಕೆ ಬರು​ತ್ತಿದೆ. ಈ ಬಾರಿ ಬಿಜೆಪಿಗೆ ಮತ್ತೊಮ್ಮೆ ಬಹುಮತ ಕೊಡಿ. ಕರ್ನಾಟಕವನ್ನು ದೇಶದಲ್ಲಿಯೇ ನಂಬರ್‌ ಒನ್‌ ರಾಜ್ಯ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ಮೋದಿ, ಬೀದರ್‌ ಜಿಲ್ಲೆ ಹುಮ್ನಾಬಾದ್‌ ಹಾಗೂ ಬೆಳಗಾವಿಯ ಕೋಳಿಗುಡ್ಡದಲ್ಲಿ ಶನಿವಾರ ಸಮಾವೇಶ ಉದ್ದೇಶಿಸಿ ಮಾತನಾಡಿದರು. 

ಕರ್ನಾ​ಟ​ಕದ ಈ ಚುನಾ​ವಣೆ ಕೇವಲ 5 ವರ್ಷದ ಸರ್ಕಾರ ರಚಿ​ಸಲು ಅಲ್ಲ. ಇದು ಕರ್ನಾ​ಟ​ಕ​ವನ್ನು ದೇಶದ ನಂ.1 ರಾಜ್ಯ​ವ​ನ್ನಾ​ಗಿ​ಸುವ ಚುನಾ​ವ​ಣೆ​ಯಾ​ಗಿದೆ. ಭಾರ​ತದ ಅಭಿ​ವೃ​ದ್ಧಿ​ಯ​ಲ್ಲಿ ಕರ್ನಾ​ಟ​ಕದ ಬಹು​ದೊಡ್ಡ ಭೂಮಿ​ಕೆ​ಯನ್ನು ನಿರ್ಧ​ರಿ​ಸುವ ಚುನಾ​ವ​ಣೆ​ಯಾ​ಗಿದೆ ಎಂದ​ರು. ರೈತರಿಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್‌ ಸಮ್ಮಾನ್‌ ಯೋಜ​ನೆ​ಯಡಿ ಫಲಾ​ನು​ಭ​ವಿ​ಗಳ ಪಟ್ಟಿಕಳಿ​ಸದೆ ಈ ಹಿಂದಿನ ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ಸಮ್ಮಿಶ್ರ ಸರ್ಕಾ​ರದ ಆಡ​ಳಿ​ತ​ದಲ್ಲಿ ಮೋಸ ಮಾಡ​ಲಾ​ಗಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಕಿಸಾನ್‌ ಸಮ್ಮಾನ್‌ ಯೋಜ​ನೆ​ಯಡಿ 6 ಸಾವಿರ ರು. ಪರಿ​ಹಾ​ರ​ವನ್ನು ಪ್ರತಿ ರೈತ ಕುಟುಂಬಕ್ಕೆ ನೀಡು​ತ್ತಿ​ದ್ದರೆ, ರಾಜ್ಯ ಸರ್ಕಾರ ಅದಕ್ಕೆ 4 ಸಾವಿರ ರು. ಸೇರಿಸಿ ಒಟ್ಟು 10 ಸಾವಿರ ರು. ನೀಡು​ತ್ತಿ​ದೆ. 

ಮತದಾನದ ಜಾಗೃತಿಗಾಗಿ ನಗೆ ಹಬ್ಬ: ಮತದಾನದ ಮಹತ್ವ ತಿಳಿಸಿದ ಹಾಸ್ಯ ಕಲಾವಿದೆ ಇಂದುಮತಿ

ಈ ಯೋಜನೆಯಡಿ ರಾಜ್ಯಕ್ಕೆ 18 ಸಾವಿರ ಕೋಟಿ ರು.ಬಿಡು​ಗಡೆಯಾಗಿದೆ. ಇದ​ರಲ್ಲಿ 400ಕೋಟಿ ರು.ಬೀದರ್‌ ಜಿಲ್ಲೆಯ ರೈತ​ರಿಗೆ ಸಿಕ್ಕಿದೆ ಎಂದರು. ನಾವು ಕಬ್ಬಿನಿಂದ ಸಕ್ಕರೆ ಮಾತ್ರ ಮಾಡಲಿಲ್ಲ. ಅದರಿಂದ ಎಥೆನಾಲ್‌ ಉತ್ಪಾದಿಸಿದೆವು. ಇದರಿಂದ ವಾಹನಗಳಿಗೂ ಬಳಕೆಯಾಯಿತು. ಜತೆಗೆ ಕಬ್ಬು ಬೆಳೆಗಾರರಿಗೂ ಲಾಭವಾಯಿತು. ಈಗ ಪೆಟ್ರೋಲ್‌ನಲ್ಲಿ ಶೇ. 20 ರಷ್ಟುಎಥೆನಾಲ್‌ ಬಳಸಲಾಗುತ್ತಿದೆ. ವಿದೇಶಕ್ಕೆ ಹೋಗುತ್ತಿದ್ದ ಹಣ ಉಳಿಯಿತು ಎಂದು ಕೇಂದ್ರದ ಸಾಧನೆ ಬಿಚ್ಚಿಟ್ಟರು. 

ಕಾಂಗ್ರೆಸ್‌ ಬಡ​ವ​ರನ್ನು ಓಟ್‌ ಬ್ಯಾಂಕ್‌ ಆಗಿ​ಸಿತ್ತು. ಬಿದ್ರಿ ಕರ​ಕು​ಶಲಕರ್ಮಿ ಶಾಹ್‌ ರಶೀದ್‌ ಖಾದ್ರಿ ಅವ​ರನ್ನು, ಅವರ ಕಲೆ​ಯನ್ನು ಕಡೆ​ಗಣಿ​ಸಿತ್ತು. ನಮ್ಮ ಸರ್ಕಾರ ಅವ​ರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಪುರ​ಸ್ಕ​ರಿ​ಸಿದ್ದು ಸಮಾ​ನ​ತೆಯನ್ನು ಪ್ರತಿ​ಪಾ​ದಿ​ಸು​ತ್ತದೆ ಎಂದು ಹೇಳಿ​ದ​ರು. ನಾವು ಮೂರು ಲಕ್ಷ ಮನೆ ಕಟ್ಟಿಕೊಟ್ಟಿದ್ದೇವೆ. ಅವರ ಮಾಲೀಕರು ಮಹಿಳೆಯರು. ಹೀಗಾಗಿ ಅವರು ಲಕ್ಷಾಧಿಪತಿಗಳಾಗಿರುವುದು ನಮಗೆ ಹೆಮ್ಮೆ ವಿಚಾರ. ಮನೆ, ಮನೆಗೂ ನೀರು, ಮನೆ, ಮನೆಗೂ ಟಾಯ್ಲೆಟ್‌ಗಳ ಮೂಲಕ ನಾವು ಮಹಿಳೆಯರ ಬದುಕನ್ನು ಹಸನುಗೊಳಿಸಿದ್ದೇವೆ. 

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 22,18,055 ಮತದಾರರು: ಡಿಸಿ ಯಶವಂತ ಗುರುಕರ್

ಹೀಗಾಗಿ ಹೆಣ್ಣು ಮಕ್ಕಳ ಆಶೀರ್ವಾದ ನಮಗೆ ಸಿಗಲಿದೆ. ಮೇ 10 ರಂದು ನೀವು ರಾಜ್ಯವನ್ನು ದೇಶದ ನಂಬರ್‌ ಒನ್‌ ರಾಜ್ಯವಾಗಿಸಲು ಮತ ಹಾಕುತ್ತಿದ್ದೀರಿ. ನಾನು ಕರ್ನಾಟಕದ ಒಬ್ಬ ಸೇವಕನ ರೂಪದಲ್ಲಿ ಸಹಾಯ ಮಾಡಲು ಬಯಸಿದ್ದೇನೆ. ನೀವು ನನಗೆ ಜತೆ ನೀಡುತ್ತೀರಲ್ಲಾ, ಆಶೀರ್ವಾದ ಮಾಡುತ್ತೀರಲ್ಲಾ? ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.