ದೆಹಲಿ ಭೇಟಿ ಕುರಿತು ಯಾವುದೇ ಮುಚ್ಚು ಮರೆ ಇಲ್ಲ. ಈ ಮೊದಲೇ ಹೇಳಿದ್ದೇನೆ. ಇಲಾಖಾ ವಿಷಯಗಳ ಕುರಿತು ಸಹಕಾರ ಸಚಿವರಾದ ಅಮಿತ್ ಶಾ ಸೇರಿ ವಿ. ಸೋಮಣ್ಣ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದ ಸಹಕಾರ ಸಚಿವ ಕೆ.ಎನ್. ರಾಜಣ್ಣ
ಬೆಂಗಳೂರು(ಫೆ.12): ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ವಿಧಾನ ಪರಿಷತ್‌ಗೆ ನಾಮನಿರ್ದೇಶನ ಹಾಗೂ ದಲಿತ ಸಮುದಾಯಗಳ ಸಮಾವೇಶ ಕುರಿತು ಪಕದ ನಾಯಕರ ಜೊತೆ ಚರ್ಚಿಸಲು ದೆಹಲಿಗೆ ಹೋಗುತ್ತಿರುವುದಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ದೆಹಲಿ ಭೇಟಿ ಕುರಿತು ಯಾವುದೇ ಮುಚ್ಚು ಮರೆ ಇಲ್ಲ. ಈ ಮೊದಲೇ ಹೇಳಿದ್ದೇನೆ. ಇಲಾಖಾ ವಿಷಯಗಳ ಕುರಿತು ಸಹಕಾರ ಸಚಿವರಾದ ಅಮಿತ್ ಶಾ ಸೇರಿ ವಿ. ಸೋಮಣ್ಣ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದರು.
ಕಾಂಗ್ರೆಸ್ ಬೆಂಬಲಿಗರ ಸಮಾವೇಶ ನಡೆಸುತ್ತೇವೆ: ಸಚಿವ ಕೆ.ಎನ್. ರಾಜಣ್ಣ
ಉಳಿದಂತೆ ಹೈಕಮಾಂಡ್‌ನಲ್ಲಿ ಯಾವ ನಾಯಕರು ಸಿಗುತ್ತಾರೋ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಪ್ರಮುಖವಾಗಿ ಭೇಟಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ ಶಕ್ತಿಶಾಲಿ ಆಗಬೇಕು. ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕಾಗಿದೆ. ಈ ಬಗ್ಗೆ ಹೈಕಮಾಂಡ್‌ನ ನಾಯಕರ ಜೊತೆ ಮಾತನಾ ಡಬೇಕು. ಅದರಂತೆ ಕೆಪಿಸಿಸಿ ಅಧ್ಯಕ್ಷರ ಬದಲಾ ವಣೆ, ದಲಿತ ಸಮುದಾಯಗಳ ಸಮಾವೇಶದ ಬಗ್ಗೆಯೂ ಚರ್ಚೆ ನಡೆಸಬೇಕಿದೆ. ಸಮಾವೇಶ ವನ್ನು ಪಕ್ಷದ ಆಶ್ರಯದಲ್ಲೇ ಮಾಡಬೇಕು. ಹಾಗಾಗಿ ದೆಹಲಿಗೆ ಹೋಗುತ್ತಿದ್ದೇನೆ ಎಂದು ಸಹಕಾರ ಸಚಿವ ರಾಜಣ್ಣ ಅವರು ಪ್ರಶ್ನೆಯೊಂ ದಕ್ಕೆ ಉತ್ತರಿಸಿದರು.
