Asianet Suvarna News Asianet Suvarna News

ಹೊಸ ಶಾಸಕರ ಸೇರಿಸಿಕೊಳ್ಳುವಷ್ಟು ನಮ್ಮ ಹೊಟ್ಟೆ ದೊಡ್ಡದಿದೆ: ಸಚಿವ ಮಧು ಬಂಗಾರಪ್ಪ

67ಕ್ಕೆ ಸೀಮಿತವಾದರೆ ರಾಜ್ಯದ ಬಿಜೆಪಿ ನಾಯಕರನ್ನು ನರೇಂದ್ರ ಮೋದಿ ದೂರ ಇಡುತ್ತಾರೆ ಎಂಬುದನ್ನು ಬಿಜೆಪಿಯವರೇ ಅರಿಯಲಿ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರವನ್ನು ನಾವು ಗೆದ್ದೇ ಗೆಲ್ಲುತ್ತೇವೆ: ಮಧು ಬಂಗಾರಪ್ಪ 

I Welcoming Who Came to Congress Says Minister Madhu Bangarappa grg
Author
First Published Aug 29, 2023, 1:54 PM IST

ಶಿರಸಿ(ಆ.29):  ಶಾಸಕರ ಸಂಖ್ಯಾಬಲದ ದೃಷ್ಟಿಯಿಂದ ನಮಗೆ ಹೊಟ್ಟೆ ತುಂಬಿದೆ. ಆದರೆ, ಹೊಸ ಶಾಸಕರನ್ನು ಸೇರಿಸಿಕೊಳ್ಳುವಷ್ಟು ನಮ್ಮ ಹೊಟ್ಟೆ ದೊಡ್ಡದಿದೆ. ಕಾಂಗ್ರೆಸ್‌ಗೆ ಶಾಸಕರ ಸೇರ್ಪಡೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಎಸ್‌. ಬಂಗಾರಪ್ಪನವರೂ ಸಹ ಹಲವು ಬಾರಿ ಪಕ್ಷ ಬದಲಿಸಿದ್ದರು. ಶಾಸಕರು ಪಕ್ಷಕ್ಕೆ ಬಂದರೆ ವಾತಾವರಣ ಕಲ್ಮಶ ಆಗುವುದಿಲ್ಲ. ಸ್ಥಳೀಯವಾಗಿ ಕಾರ್ಯಕರ್ತರಲ್ಲಿ ಅಸಮಾಧಾನ ಸಹಜ. ಶಿವರಾಮ ಹೆಬ್ಬಾರ ಸೇರ್ಪಡೆಗೆ ಶಾಸಕ ಭೀಮಣ್ಣ ನಾಯ್ಕ ಸಹ ವಿರೋಧ ವ್ಯಕ್ತಪಡಿಸಿದ್ದರು. ಅವರಿಗೆ ರಾಷ್ಟ್ರೀಯ ನಾಯಕರೇ ಪೋನ್‌ ಮಾಡಿ ತಿಳಿಸಿ ಹೇಳಿದ್ದಾರೆ. ರಾಜಕಾರಣದಲ್ಲಿ ಇವೆಲ್ಲ ಸಹಜ ಎಂದರು.

ನಾನೀಗ ಬಿಜೇಪಿಲಿ ಇದ್ದೇನೆ, ಮುಂದೇನು ಗೊತ್ತಿಲ್ಲ: ಕುತೂಹಲ ಮೂಡಿಸಿದ ಕಮಲ ನಾಯಕನ ಹೇಳಿಕೆ..!

ಚುನಾವಣೆ ವೇಳೆ ನಾವು ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಸೋತವರು ಟೀಕೆ, ಟಿಪ್ಪಣಿ ಮಾಡುತ್ತಾರೆ. ಅವುಗಳ ಬದಲು ಬಡವರ ಪ್ರಗತಿಗಾಗಿ ಸಹಕಾರ ನೀಡಬೇಕು ಎಂದು ಅವರು, ಪ್ರಣಾಳಿಕೆ ಸದಸ್ಯನಾಗಿ ಬಡವರ ಜೀವನದಲ್ಲಿ ಭಾಗಿ ಆಗುತ್ತಿರುವುದಕ್ಕೆ ಸಂತಸ ಆಗುತ್ತಿದೆ. ಕೊಟ್ಟಮಾತು ಉಳಿಸುವ ಕಾರ್ಯ ಮಾಡಿದ್ದೇವೆ ಎಂದರು.

ಸಮಸ್ಯೆಗಳೇ ಹೆಚ್ಚು:

ಶಿಕ್ಷಣ ಇಲಾಖೆ ಪ್ರಮುಖ ಇಲಾಖೆಯಾದ್ದರಿಂದ ಇಲ್ಲಿ ಸಮಸ್ಯೆಗಳೇ ಹೆಚ್ಚು. ಮೊದಲು ಅರ್ಥ ಮಾಡಿಕೊಂಡು ಬಗೆಹರಿಸುತ್ತೇನೆ. ಶಿಕ್ಷಣ ಇಲಾಖೆಯಲ್ಲಿ ಕೆಲ ಹೊಸ ಪ್ರಯೋಗ ಮಾಡುತ್ತಿದ್ದೇವೆ. 10ನೇ ಕ್ಲಾಸ್‌ ವರೆಗೂ ಮೊಟ್ಟೆನೀಡುತ್ತಿದ್ದೇವೆ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಒಂದು ವರ್ಷ ಹಾಳಾಗಾಬಾರದೆಂಬ ಉದ್ದೇಶದಿಂದ ಸಪ್ಲಿಮೆಂಟರಿ ಪರೀಕ್ಷೆ ನಡೆಸಲು ಉದ್ದೇಶಿಸಿದ್ದೇವೆ. 1.30 ಲಕ್ಷ ವಿದ್ಯಾರ್ಥಿಗಳು ಸಪ್ಲಿಮೆಂಟರಿ ಪರೀಕ್ಷೆಗೆ ಬಂದಿದ್ದಾರೆ. ಕಾಲೇಜು ಆರಂಭವಾಗಿ ಈಗಾಗಲೇ 2 ತಿಂಗಳ ಕಳೆದಿದ್ದರಿಂದ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ. ಸ್ಪೆಶಲ್‌ ಕ್ಲಾಸ್‌ ಮಾಡುತ್ತೇವೆ. ಮುಖ್ಯ ವಾಹಿನಿಗೆ ಬಂದ ಬಳಿಕ ಅವರು ವೇಗ ಪಡೆಯುತ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

10 ಸಾವಿರ ಶಿಕ್ಷಕರ ನೇಮಕ:

ರಾಜ್ಯದಲ್ಲಿ 32 ಸಾವಿರ ಶಿಕ್ಷಕರು ವರ್ಗಾವಣೆ ಪಡೆದಿದ್ದಾರೆ. ಇದರಿಂದ ಶಿಕ್ಷಣ ವ್ಯವಸ್ಥೆಯ ಸಮತೋಲನ ಕೊರತೆ ಆಗಿದೆ. ಇದನ್ನು ಸರಿಪಡಿಸಲು 10 ಸಾವಿರ ಅತಿಥಿ ಶಿಕ್ಷಕರನ್ನು ತಕ್ಷಣ ನೇಮಕ ಮಾಡಿಕೊಳ್ಳುತ್ತೇವೆ. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿ ಶಿಕ್ಷಕರನ್ನು ಒದಗಿಸುತ್ತೇವೆ. ಆದರೆ, ಅತಿಥಿ ಶಿಕ್ಷಕರೇ ಜಾಸ್ತಿ ಇದ್ದರೆ ಸರಿಯಲ್ಲ. ಹೀಗಾಗಿ, ಮುಂದಿನ ವರ್ಷಾಂತ್ಯದೊಳಗೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕೆಪಿಎಸ್‌ಸಿ ಮಾದರಿ ಶಾಲೆ ಆರಂಭಿಸಲಾಗುತ್ತಿದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಪ್ರಯಾಣ ವೆಚ್ಚ ನೀಡಲು ಉದ್ದೇಶಿಸಿದ್ದೇವೆ. ಮಕ್ಕಳ ಮನಸ್ಸಿನಲ್ಲಿ ಯಾವುದೇ ಕಲ್ಮಶಕ್ಕೆ ಆಸ್ಪದ ನೀಡದೆ ಉತ್ತಮ ಶಿಕ್ಷಣ ನೀಡುತ್ತೇವೆ. ರಾಜ್ಯದಲ್ಲಿ 296 ಶೂನ್ಯ ಮಕ್ಕಳ ಶಾಲೆಗಳಿವೆ. 1ರಿಂದ 12ರ ವರೆಗಿನ ಕೆಪಿಎಸ್‌ಸಿ ಶಾಲೆಯ ಜತೆ ಎಲ್‌ಕೆಜಿ, ಯುಕೆಜಿ ಸಹ ಮಾಡುತ್ತೇವೆ. ಖಾಸಗಿ ಶಾಲೆಗಳನ್ನು ಹಿಂದಿಕ್ಕಬೇಕೆಂಬುದು ನಮ್ಮ ಉದ್ದೇಶವಲ್ಲ. ನಮ್ಮ ಸರ್ಕಾರಿ ಶಾಲೆಗಳು ಪ್ರಗತಿ ಆಗಬೇಕು ಎಂಬುದು ಉದ್ದೇಶ ಎಂದರು.

ಕಾಂಗ್ರೆಸ್‌ ಸೇರೊಲ್ಲವೆಂದು ಹೇಳುತ್ತಲೇ ಸಿಎಂ ಸಿದ್ದರಾಮಯ್ಯ ಭೇಟಿಯಾದ ಶಾಸಕ ಶಿವರಾಂ ಹೆಬ್ಬಾರ್

ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ಅಬ್ಬಾಸ್‌ ತೋನ್ಸೆ, ಜಗದೀಶ ಗೌಡ ಇದ್ದರು.

ಚಂದ್ರಯಾನ ಯಶಸ್ವಿಯಾದಾಗ ಪ್ರಧಾನಿ ರಾಕೆಟ್‌ ವೇಗದಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಅದೇ ವೇಗದಲ್ಲಿ ಮಣಿಪುರಕ್ಕೆ ಏಕೆ ಹೋಗಲ್ಲ?

67ಕ್ಕೆ ಸೀಮಿತವಾದರೆ ರಾಜ್ಯದ ಬಿಜೆಪಿ ನಾಯಕರನ್ನು ನರೇಂದ್ರ ಮೋದಿ ದೂರ ಇಡುತ್ತಾರೆ ಎಂಬುದನ್ನು ಬಿಜೆಪಿಯವರೇ ಅರಿಯಲಿ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರವನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. 

Follow Us:
Download App:
  • android
  • ios