ನಾನು ಎಂದಿಗೂ ಜಾತಿ ಭೇದ ಮಾಡಿಲ್ಲ, ಮಾಡೋದೂ ಇಲ್ಲ. ಹಾಗೊಂದು ವೇಳೆ ನಾನು ಸೇರಿದಂತೆ ಯಾರೇ ಜಾತಿ ಭೇದ ಮಾಡಿದರೂ ಅವರ ಮಕ್ಕಳು ಹುಳು ಬಿದ್ದು ಸಾಯುತ್ತಾರೆ. ನಾನು ನನ್ನ ಮೊಮ್ಮಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ. ಜಾತಿ ಮಾಡಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. 

ಕೊಪ್ಪಳ (ಜ.27): ನಾನು ಎಂದಿಗೂ ಜಾತಿ ಭೇದ ಮಾಡಿಲ್ಲ, ಮಾಡೋದೂ ಇಲ್ಲ. ಹಾಗೊಂದು ವೇಳೆ ನಾನು ಸೇರಿದಂತೆ ಯಾರೇ ಜಾತಿ ಭೇದ ಮಾಡಿದರೂ ಅವರ ಮಕ್ಕಳು ಹುಳು ಬಿದ್ದು ಸಾಯುತ್ತಾರೆ. ನಾನು ನನ್ನ ಮೊಮ್ಮಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ. ಜಾತಿ ಮಾಡಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಬಿಜೆಪಿಯವರು ಮಾತೆತ್ತಿದರೆ ಜಾತಿ, ಜಾತಿ ಎನ್ನುತ್ತಾರೆ. ಆದರೆ, ವೇದಿಕೆ ಮೇಲೆ ಕುಳಿತಿರುವ ರಾಯರಡ್ಡಿ ಸಾಹೇಬರ ಎದುರಿಗೆ ಹೇಳುತ್ತೇನೆ. ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ರಾಜಕೀಯದಲ್ಲಿ ಇರುವವರು ಜಾತಿ ಮಾಡಬಾರದು. ಜಾತಿ ಮಾಡಬೇಕಾಗಿದ್ದರೆ ರಾಜಕೀಯಕ್ಕೆ ಬರಬಾರದು ಎಂದು ಹೇಳಿದರು.

ಅಲ್ಪಸಂಖ್ಯಾತರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಮೂಲ ಸೌಕರ್ಯಗಳ ಕುರಿತು ಸಭೆ ನಡೆಯಿತು. ವಿರಾಜಪೇಟೆ ಕ್ಷೇತ್ರದಲ್ಲಿ ಮಸೀದಿ ದುರಸ್ತಿ, ರಸ್ತೆಗಳು, ವಿದ್ಯಾರ್ಥಿ ವೇತನ, ಮೂಲಭೂತ ಸೌಕರ್ಯಗಳು, ಹೆಚ್ಚುವರಿಯಾಗಿ ಮನೆಗಳನ್ನು ಮಂಜೂರು ಮಾಡಲು ಶಾಸಕರು ಹಾಗೂ ಮುಖಂಡರು ಮನವಿ ಸಲ್ಲಿಸಿದರು. ಈ ಬಗ್ಗೆ ವಸತಿ ಸಚಿವರು ಪ್ರತಿಕ್ರಿಯಿಸಿ, ವಿರಾಜಪೇಟೆ ಕ್ಷೇತ್ರದ ಅಲ್ಪಸಂಖ್ಯಾತರ ಮೂಲಭೂತ ಸೌಕರ್ಯಕ್ಕೆ 3.5 ಕೋಟಿ ರು. ಅನುದಾನ ನೀಡಲಾಗಿದೆ. 

ಡಾ ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿ ಹಾಗೂ ಬಸವ ವಸತಿ ಯೋಜನೆ ಅಡಿ 1200 ಮನೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಎ.ಎಸ್ ಪೊನ್ನಣ್ಣ ಅವರ ಮನವಿ ಮೇರೆಗೆ 4 ಕೋಟಿ ಹೆಚ್ಚುವರಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡುವ ಬಗ್ಗೆ ಭರವಸೆ ನೀಡಿದರು. ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿ ಮತ್ತು ಬಸವ ವಸತಿ ಯೋಜನೆ ಅಡಿ ಹೆಚ್ಚುವರಿಯಾಗಿ 1000 ಮನೆಗಳನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಹೆಸರಿಗಷ್ಟೇ ಉಸ್ತುವಾರಿ, ಬಳ್ಳಾರಿಗೆ ಜಮೀರ್‌ ಬರೋದು ಯಾವಾಗ?

ಯಾರೇ ಕೃತ್ಯ ಎಸಗಿದ್ದರೂ ಕಠಿಣ ಶಿಕ್ಷೆ: ತಾವು ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರದಲ್ಲಿ ದುಷ್ಕರ್ಮಿಗಳು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವುದನ್ನು ವಸತಿ ಹಾಗೂ ಅಲ್ಪಸಂಖ್ಯಾತ ಸಚಿವ ಜಮೀರ್‌ ಅಹಮದ್‌ ಖಂಡಿಸಿದ್ದು, ಈ ಕೃತ್ಯ ಎಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜತೆಗೆ, ಘಟನೆಯಿಂದ ನಷ್ಟವಾಗಿರುವ ಹಸುವಿನ ಮಾಲೀಕನ ಜೀವನೋಪಾಯಕ್ಕೆ ಬದಲಿ ಹಸುಗಳನ್ನು ಕೊಡಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ. ಸುದ್ದಿ ತಿಳಿದು ಭಾನುವಾರ ಗಾಯಗೊಂಡಿರುವ ಹಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಚಾಮರಾಜಪೇಟೆಯ ಪಶು ಆಸ್ಪತ್ರೆಗೆ ಧಾವಿಸಿದ ಸಚಿವರು ವೈದ್ಯರಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೂಕ ಪ್ರಾಣಿಗಳ ಮೇಲೆ ಇಂತಹ ವಿಕೃತಿ ಆಗಬಾರದು. ಯಾರೇ ಇದನ್ನು ಮಾಡಿದ್ದರೂ ಸುಮ್ಮನೆ ಬಿಡುವುದಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ಈ ಘಟನೆ ಬಗ್ಗೆ ಪೊಲೀಸ್‌ ಆಯುಕ್ತರಿಂದ ಮಾಹಿತಿ ಪಡೆದು ತಪ್ಪಿತಸ್ಥರ ಶೀಘ್ರ ಪತ್ತೆಗೆ ಸೂಚಿಸಿದ್ದಾರೆ. ಯಾರೇ ಈ ಕೆಲಸ ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿದೆ ಎಂದರು.