Asianet Suvarna News Asianet Suvarna News

ಮಡಿಕೇರಿ ಪ್ರವಾಸದ ವೇಳೆ ಸಿದ್ದರಾಮಯ್ಯಗೆ ಬಟನ್ ಚಾಕುವಿನಿಂದ ಹೊಡೆದಿದ್ರು, ಎಂ ಲಕ್ಷ್ಮಣ್ ಸ್ಫೋಟಕ ಆರೋಪ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ಬಿಜೆಪಿ ಹಾಗೂ ಪೊಲೀಸ್ ವೈಫಲ್ಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ವಕ್ತಾರ ಸ್ಫೋಟಕ ಆರೋಪವೊಂದನ್ನು ಮಾಡಿದ್ದಾರೆ.

I Saw button knife During BJP RSS Protest at Siddaramaiah Madikeri Tour Says Congress Leader Lakshman rbj
Author
Bengaluru, First Published Aug 20, 2022, 5:38 PM IST

ಮೈಸೂರು, (ಆ.20): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿದೆ. ಇದರ ಮಧ್ಯೆ ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಅವರು ಸ್ಫೋಟ ಆರೋಪವೊಂದನ್ನು ಮಾಡಿದ್ದಾರೆ.

ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿ ಪ್ರವಾಸದ ವೇಳೆ ಸಿದ್ದರಾಮಯ್ಯಗೆ ಬಟ್ಟನ್ ಚಾಕುವಿನಿಂದ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡದ್ದಾರೆ.

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯುವ exclusive ವಿಡಿಯೋ: ಇವನೇ ಆ ಯುವಕ!

ಸಿದ್ದರಾಮಯ್ಯ ಅವರೊಂದಿಗೆ ನಾನು ಕಾರ್ ನಲ್ಲಿ ಕುಳಿತ್ತಿದ್ದೆ. ನಾವು ಹೋಗುವ ಮಾರ್ಗದಲ್ಲಿ  7 ಕಡೆಗಳಲ್ಲಿ ಕಪ್ಪುಪಟ್ಟಿ, 3 ಕಡೆಗಳಲ್ಲಿ ಮೊಟ್ಟೆ ಹಿಡಿದುಕೊಂಡಿದ್ದರು.
ಇದಲ್ಲದೆ ಅದೇ ಮಾರ್ಗದಲ್ಲಿ ಒಂದು ಕಡೆ ಬಟ್ಟನ್ ಚಾಕು ಹೊಡೆದಿದ್ದಾರೆ. ಇದನ್ನ ನಾವೇ ನೋಡಿದ್ದೇನೆ ಎಂದು ಹೇಳಿದರು.

ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ತಿಳಿಸಲಾಯಿತು. ತಕ್ಷಣವೇ ಅಲ್ಲಿನ ಎಸ್ಪಿಗೆ ಸಿದ್ದರಾಮಯ್ಯ ತಿಳಿಸಿದರು.ಆ ಸಂದರ್ಭದಲ್ಲಿ ನಾವು ಹೆದರಿದೆವು. ಆದರೆ ಸಿದ್ದರಾಮಯ್ಯ ಹೆದರಲಿಲ್ಲ. ಅಲ್ಲಿನ ಜಿಲ್ಲಾಧಿಕಾರಿಯನ್ನ ಸಿದ್ದರಾಮಯ್ಯ 10 ಬಾರಿ ಸಂಪರ್ಕಿಸಿದರು. ಆದರೆ ಡಿಸಿ ಫೋನ್ ರಿಸೀವ್ ಮಾಡಲಿಲ್ಲ. ಇದು ಡಿಸಿಯ ಬೇಜವಾಬ್ದಾರಿತನ. ಸಿದ್ದರಾಮಯ್ಯ ಮೇಲೆ ಹಲ್ಲೆ ಮಾಡಲು ಆರ್ ಎಸ್ ಎಸ್ ತಯಾರು ಮಾಡಿದ್ದರು ಎಂದು ಸ್ಫೋಟಕ ಆರೋಪವನ್ನು ಮಾಡಿದರು.

ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫ್ಲೆಕ್ಸ್ ಯಾಕೆ ಹಾಕಬೇಕು ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ ಬಿಜೆಪಿ ಕಾರ್ಯಕರ್ತರು, ಆಗಸ್ಟ 18 ರಂದು  ಮಲೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತರಳುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಈ ಪ್ರಕರಣ ಸಂಬಂಧ 9 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ.

ಮೊಟ್ಟೆ ಎಸೆದಿದ್ದು ಬಿಜೆಪಿ ಕಾರ್ಯಕರ್ತ ಸಂಪತ್ ಎಂದು ತಿಳಿದುಬಂದಿದೆ. ಇನ್ನು ಈ ಸಂಪತ್ ಶಾಸಕ ಅಪ್ಪಚ್ಚು ರಂಜನ್ ಜೊತೆ ಇರುವ ಫೋಟೋಗಳು ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.ಆ ಆ ಸಂಪತ್ ನಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ. 

Follow Us:
Download App:
  • android
  • ios