Karnataka Politics: ಮತದಾರರೇ ಹಣ ನೀಡಿ ಗೆಲ್ಲಿಸಬೇಕು, ನಾನ್ಯಾರಿಗೂ ದುಡ್ಡು ನೀಡೋದಿಲ್ಲ: ರಾಯರೆಡ್ಡಿ
* ಐದುನೂರು ಸಾವಿರಕ್ಕೆ ವೋಟ್ ಹಾಕಬೇಡಿ. ಒಂದು ವೋಟ್‌ಗೆ 5 ಲಕ್ಷ ರೂಪಾಯಿ ಫಿಕ್ಸ್ ಮಾಡಿ
* ಮನೆಯಲ್ಲಿ 10 ವೋಟ್ ಇದ್ದರೆ 50 ಲಕ್ಷ ಕೊಡಲು ಹೇಳಿ
* ಬಿಜೆಪಿಗೆ ಅಧಿಕಾರ ಕೊಟ್ಟು ಬೇಸತ್ತಿರುವ ಜನ
ಕೊಪ್ಪಳ(ಡಿ.22): ಒಂದು ಮತಕ್ಕೆ(Vote) ಕನಿಷ್ಠ 5 ಲಕ್ಷ ರೂ. ಫಿಕ್ಸ್ ಮಾಡಿ ಅಂತ ಜಿಲ್ಲೆಯ ಯಲಬುರ್ಗಾ ಮತದಾರರಿಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಸಲಹೆ ನೀಡಿದ್ದಾರೆ. ನಿನ್ನೆ(ಮಂಗಳವಾರ) ಕೊಪ್ಪಳ(Koppal) ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯತ್ ಚುನಾವಣೆ ಪ್ರಚಾರದಲ್ಲಿ(Campaign) ಮಾತನಾಡಿದ ರಾಯರೆಡ್ಡಿ ಅವರು, ಈ ಬಾರಿ ವಿಧಾನಸಭೆ ಚುನಾವಣೆಗೆ(Assembly Election) ಐದುನೂರು ಸಾವಿರಕ್ಕೆ ವೋಟ್ ಹಾಕಬೇಡಿ. ಒಂದು ವೋಟ್‌ಗೆ 5 ಲಕ್ಷ ರೂಪಾಯಿ ಫಿಕ್ಸ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಮನೆಯಲ್ಲಿ 10 ವೋಟ್ ಇದ್ದರೆ 50 ಲಕ್ಷ ಕೊಡಲು ಹೇಳಿ. ಐದುನೂರ ಸಾವಿರ ತಗೊಂಡರೆ ಕೊಪ್ಪಳಕ್ಕೆ ಹೋಗಿ ಚಹಾ ಕುಡಿಯೋದಲ್ಲೂ ಆಗೊಲ್ಲ. ಆದರೆ, ನನಗೆ ದುಡ್ಡು ಕೊಡಲು ಆಗೀದೊಲ್ಲ ಹೀಗಾಗಿ ನನಗೆ ವೋಟ್ ಹಾಕಿ ನೀವೇ ನನಗೆ 200, 300 ರೂಪಾಯಿ ಕೊಡಬೇಕು. ಆಗ ನೀವು ಕರ್ನಾಟಕದಲ್ಲಿ(Karnataka) ನೀವು ಫೇಮಸ್ ಆಗ್ತೀರು ಅಂತ ಮತದಾರರಿಗೆ ರಾಯರೆಡ್ಡಿ ಹೇಳಿದ್ದಾರೆ.
Karnataka Politics: 'ಬಿಜೆಪಿಯ ಘಟಾನುಗಟಿ ನಾಯಕರು ಕಾಂಗ್ರೆಸ್ ಸೇರ್ಪಡೆ'
ಬಿಜೆಪಿ(BJP) ದುಡ್ಡಿನ ಆಮಿಷ ತೋರಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ದುಡ್ಡಿನ ಚುನಾವಣೆ ನನಗೆ ಇಷ್ಟವಿಲ್ಲ. ಇಷ್ಟುವರ್ಷ ಕ್ಷೇತ್ರದಲ್ಲಿ ನನ್ನ ಆಡಳಿತಾವಧಿಯಲ್ಲಿಯಾದ ಅಭಿವೃದ್ಧಿ ಮನಗಂಡು ಮತದಾರರು ಮುಂದಿನ ಚುನಾವಣೆಯಲ್ಲಿ ನನಗೆ ಮತ ನೀಡಬೇಕು. ನಾನು ಶಾಸಕನಾಗಬೇಕಾದರೆ ಕುಕನೂರು ಪಪಂ ಚುನಾವಣೆ ಬುನಾದಿಯಾಗಿದ್ದು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಬೇಕು. ದುಡ್ಡಿಗೆ ಮತ ಮಾರಿಕೊಳ್ಳಬಾರದು ಎಂದರು.
ಬಿಜೆಪಿಗೆ ಅಧಿಕಾರ ಕೊಟ್ಟು ಜನ ಬೇಸತ್ತಿದ್ದಾರೆ. ಜನ ಸಹ ಹುಸಿ ಭರವಸೆಯಿಂದ ಬೇಸತ್ತಿದ್ದಾರೆ ಎಂದರು. ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ನಗರ ಘಟಕ ಅಧ್ಯಕ್ಷ ರಹೆಮಾನಸಾಬ್ ಮಕ್ಕಪ್ಪನವರ, ವಕ್ತಾರ ಸಂಗಮೇಶ ಗುತ್ತಿ, ಮಲ್ಲಿಕಾರ್ಜುನ ಭಜಂತ್ರಿ, ಮಂಜುನಾಥ ಕಡೇಮನಿ, ಸತ್ಯನಾರಾಯಣಪ್ಪ ಹರಪನ್ಹಳ್ಳಿ, 9ನೇ ವಾರ್ಡಿನ ಅಭ್ಯರ್ಥಿ ಮಂಜುನಾಥ ಕೇಳೂರು, 8ನೇ ವಾರ್ಡಿನ ಅಭ್ಯರ್ಥಿ ಲಲಿತಾ ಯಡಿಯಾಪುರ ಇದ್ದರು.
ಬರೀ ಲೂಟಿ ಹೊಡೆಯುವ ಬಿಜೆಪಿ ಸರ್ಕಾರ
ಯಲಬುರ್ಗಾ: ಬಿಜೆಪಿ ಸರ್ಕಾರಕ್ಕೆ(BJP Government) ಬಡವರ ಬಗ್ಗೆ ಕಾಳಜಿ ಇಲ್ಲ. ಕೇವಲ ಲೂಟಿ(Loot) ಹೊಡೆಯುವ ಸರ್ಕಾರ ಇದಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ರಾಯಚೂರ-ಕೊಪ್ಪಳ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶರಣಗೌಡ ಬಯ್ಯಾಪೂರ ಅವರಿಗೆ ಅಭಿನಂದನಾ ಸಮಾರಂದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಜನರ ಸಮಸ್ಯೆಗಳ ಬಗ್ಗೆ ಚಿಂತೆಯಿಲ್ಲ. ಬರೀ ಹಣ ಲೂಟಿ ಹೊಡೆಯುವ ಕಾರ್ಯದಲ್ಲೇ ಮಗ್ನರಾಗಿದ್ದಾರೆ. ಇಂತಹ ಸರ್ಕಾರ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಹೇಳಿದ್ದರು.ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇದುವರೆಗೊ ಬಡವರಿಗೆ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ. ಆದರೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟುಮನೆಗಳನ್ನು ನೀಡಿದ್ದೇವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಎಲ್ಲಾ ಬಡವರಿಗೆ ಉಚಿತ ಮನೆಗಳನ್ನು ನೀಡುತ್ತೇವೆ ಎಂದು ಹೇಳಿದರು.
Upper Krishna Project: ಕೊಪ್ಪಳ ಏತ ನೀರಾವರಿ ಯೋಜನೆಗೆ 2,715 ಕೋಟಿ ವೆಚ್ಚ: ಸಚಿವ ಕಾರಜೋಳ
ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ರಾಜ್ಯದ ನೂತನ ವಿಪ ಸದಸ್ಯರು ಅಭಿವೃದ್ಧಿ ಪರ ಕಾಳಜಿಯುಳ್ಳವರಾಗಿದ್ದಾರೆ. ಶರಣಗೌಡ ಪಾಟೀಲ ಅವರು ಸಹಕಾರಿ ಧುರೀಣರಾಗಿದ್ದಾರೆ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಮಸ್ಯೆ ಕುರಿತು ವಿಧಾನಸೌಧದಲ್ಲಿ ಧ್ವನಿ ಎತ್ತಲಿದ್ದಾರೆ. ಕುಷ್ಟಗಿ ಯುವ ಮುಖಂಡ ದೊಡ್ಡಬಸವನಗೌಡ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಗ್ರಾಪಂ ಸದಸ್ಯರು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಾಜಿ ಸಚಿವ ಬಸವರಾಜ ರಾಯರಡ್ಡಿಯವರು ರಾಜಕೀಯ ಅನುಭವವುಳ್ಳವರು, ಅಭಿವೃದ್ಧಿಯ ರೂವಾರಿಗಳು, ಅವರನ್ನು ನೋಡಿ ನಮ್ಮಂತಹ ರಾಜಕಾರಣಿಗಳು ಸಾಕಷ್ಟು ಕಲಿಯಬೇಕಿದೆ. ಈ ಹಿಂದೆ ನಾನು ಎಂದೂ ರಾಯರಡ್ಡಿಯವರ ಪಕ್ಕ ಕುಳಿತಿಲ್ಲ. ಇದೀಗ ಕುಳಿತಿದ್ದೇನೆ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಹಿತ ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.