ನವದೆಹಲಿ(ಜ. 07) ಇದೇ ಮೊದಲ ಬಾರಿಗೆ ಎಂಬಂತೆ ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರಾ ರಾಜಕಾರಣದ  ಬಗ್ಗೆ ಮಾತನಾಡಿದ್ದಾರೆ.  ವಾದ್ರಾ ರಾಜಕಾರಣದ ಕಡೆ ಹೆಜ್ಜೆ  ಇಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಸಹ ಮೂಡಿದೆ.

ಒಂದು ಕಡೆ ಬೇನಾಮಿ ಆಸ್ತಿಗೆ ಸಂಬಂಧಿಸಿ ವಾದ್ರಾ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿದ್ದಾರೆ.  ಇದೆಲ್ಲದರ ನಡುವೆ ವಾದ್ರಾ ಈಗ ಮಾತನಾಡಿರುವ ವಿಚಾರ ದೊಡ್ಡ ಮಟ್ಟದ ಚರ್ಚೆ ವಸ್ತುವಾಗಿದೆ.

ಗೂಗಲ್ ಮ್ಯಾಪ್ ನೋಡಿ ಜಾಗ ಖರೀದಿ ಮಾಡಿದ್ದ ವಾದ್ರಾ

ಸೇವೆಗಾಗಿಯೇ ಪ್ರಾಣ ತ್ಯಾಗ ಮಾಡಿದ ಕುಟುಂಬಕ್ಕೆ ಸೇರಿದವರು ನಾನು.. ಈ ಸಮಯದಲ್ಲಿ ನಾನು ಸಂಸತ್ ನಲ್ಲಿ  ಇರಬೇಕಿತ್ತು ಎಂದು  ವಾದ್ರಾ ಹೇಳಿದ್ದಾರೆ.

ನನ್ನ ಮೇಲೆ ಬೇಕಂತಲೇ ಪ್ರಕರಣ ದಾಖಲಿಸಲಾಗಿದೆ. ಸಂಸತ್ ನಲ್ಲಿ ಇದ್ದರೆ ಹೋರಾಟ ಮಾಡಬಹುದಿತ್ತು ಎಂದಿದ್ದಾರೆ. ವಾದ್ರಾ ಸಕ್ರಿಯ  ರಾಜಕಾರಣಕ್ಕೆ ಇಳಿಯಲಿದ್ದಾರೆಯೇ ಎಂಬ ಪ್ರಶ್ನೆ ಇದರಿಂದ ಮೂಡಿದೆ.