ಪಕ್ಷದಲ್ಲಿ ನಾನೂ ಸೀನಿಯರ್, ಮಂತ್ರಿ ಮಾಡುವಂತೆ ಮನವಿ ಮಾಡಿದ್ದೇನೆ: ಶಾಸಕ ನಾರಾಯಣಸ್ವಾಮಿ

ಕಾಂಗ್ರೆಸ್ ಪಕ್ಷದಲ್ಲಿ ನಾನೂ ಸಹ ಸೀನಿಯರ್ ಆಗಿದ್ದು, ಮಂತ್ರಿಗಿರಿ ಬೇಕೆಂದು ಹೈಕಮಾಂಡ್ ಬಳಿ ನಾನೂ ಸಾಕಷ್ಟು ಮನವಿ ಮಾಡಿದ್ದೇನೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. 

I have requested to be minister Says Kola MLA SN Narayanaswamy gvd

ಕೋಲಾರ (ಅ.21): ಕಾಂಗ್ರೆಸ್ ಪಕ್ಷದಲ್ಲಿ ನಾನೂ ಸಹ ಸೀನಿಯರ್ ಆಗಿದ್ದು, ಮಂತ್ರಿಗಿರಿ ಬೇಕೆಂದು ಹೈಕಮಾಂಡ್ ಬಳಿ ನಾನೂ ಸಾಕಷ್ಟು ಮನವಿ ಮಾಡಿದ್ದೇನೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಬಂಗಾರಪೇಟೆಯಲ್ಲಿ ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಕುರಿತು ಮಾತನಾಡಿದ ಅವರು ಅದು ಹೈಕಮಾಂಡ್ ತೀರ್ಮಾನ ಮಾಡುತ್ತದೆ.

ಅಲ್ಲದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಹಿರಿಯರು ಸಚಿವ ಸಂಪುಟ ಬದಲಾವಣೆ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ, ನಾವೆಲ್ಲಾ ಪಕ್ಷದ ಶಿಸ್ತಿನ ಸಿಪಾಯಿಗಳು ಪಕ್ಷ ಏನು ಹೇಳುತ್ತದೆಯೋ ಅದನ್ನ ಶಿರಸಾ ವಹಿಸಿ ಮಾಡುತ್ತೇವೆ ಎಂದು ಹೇಳಿದರು. ಅಧಿಕಾರ ಹಂಚಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ, ಅವಕಾಶ ಕೊಟ್ಟರೆ ತಪ್ಪೇನು ಇಲ್ಲ ಎಂದ ಅವರು, ಹಿರಿಯ ಸದಸ್ಯರಿಗೆ ಆಸೆ ಎನ್ನುವುದು ಇದ್ದೇ ಇರುತ್ತೆ ಅವರನ್ನೂ ಮಂತ್ರಿ ಮಾಡಲಿ ಎಂದರು. 

ನನ್ನ, ಸತೀಶಣ್ಣ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಈ ಹಿಂದೆ ಕೆ.ಎಚ್.ಮುನಿಯಪ್ಪ ಅವರೇ ಈ ಕುರಿತು ಹೇಳಿಕೆ ನೀಡಿದ್ದಾರೆ, ಅವರೆ ಬಿಟ್ಟುಕೊಟ್ಟಲ್ಲಿ ಸ್ವಾಗತ ಮಾಡುತ್ತೇವೆ ಎಂದರು. ಮುಂದಿನ ತಿಂಗಳ ನ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಕರೆ ತಂದು ಉದ್ಘಾಟನೆಗೆ ಮುಂದಾಗಿದ್ದು, ಅದರಂತೆ ಇಂದು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಸಮಾರಂಭವನ್ನ ಯಶಸ್ವಿಗೊಳಿಸುವಂತೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಜೆಡಿಎಸ್‌ ಕಾರ್ಯಕರ್ತರ ಅಭಿಪ್ರಾಯ ಪಡೆಯಲಿ: ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಆತುರದ ನಿರ್ಧಾರವಾಗಿದ್ದು ಕಾರ್ಯಕರ್ತರಿಂದ ಅಪಸ್ವರ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಎಂದು ಜೆಡಿಎಸ್ ಹಿರಿಯ ಮುಖಂಡ ಜಿ.ರಾಮರಾಜು ಸಲಹೆ ನೀಡಿದ್ದಾರೆ. 

ಹುಚ್ಚುನಾಯಿಗೆ ಕಲ್ಲು ಹೊಡೆದು ಸಾಯಿಸಿದಂತೆ ಕಾಂಗ್ರೆಸ್ ಸರ್ಕಾರ ಓಡಿಸಲಿದ್ದಾರೆ ಜನ: ಕಾರಜೋಳ

ಹೇಳಿಕೆ ನೀಡಿರುವ ಅವರು, ಮೈತ್ರಿ ಅವಶ್ಯಕತೆ ಇದೆಯೇ ಎಂಬ ಕುರಿತು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಬೇಕು. ಜೆಡಿಎಸ್‌ಗೆ ಕಾರ್ಯಕರ್ತರೇ ಬೆನ್ನೆಲಬು, ಅವರ ಸಹಕಾರ ಬಹಳ ಮುಖ್ಯ. ಅದರಂತೆ ನಡೆದರೆ ಜೆ.ಡಿ.ಎಸ್. ಪಕ್ಷ ಸದೃಢಗೊಳ್ಳುತ್ತದೆ. ಇಲ್ಲವಾದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios