‘ಈ ಹಂತದಲ್ಲಿ ನಾನು ಏನೂ ಹೇಳುವುದಿಲ್ಲ. ಕಾಲ ಕೂಡಿ ಬರಲಿ. ಏನಾಗುತ್ತದೆ ನೋಡೋಣ’ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಡಿ.ವಿ.ಸದಾನಂದಗೌಡ ಮಾರ್ಮಿಕವಾಗಿ ಹೇಳಿದ್ದಾರೆ.
ಬೆಂಗಳೂರು (ಜ.2) : ‘ಈ ಹಂತದಲ್ಲಿ ನಾನು ಏನೂ ಹೇಳುವುದಿಲ್ಲ. ಕಾಲ ಕೂಡಿ ಬರಲಿ. ಏನಾಗುತ್ತದೆ ನೋಡೋಣ’ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಡಿ.ವಿ.ಸದಾನಂದಗೌಡ ಮಾರ್ಮಿಕವಾಗಿ ಹೇಳಿದ್ದಾರೆ.
ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ ಬಳಿಕ ಮತ್ತೆ ಸ್ಪರ್ಧಿಸುವಂತೆ ಪಕ್ಷದ ಹಲವು ಮುಖಂಡರು ಒತ್ತಾಯ ಮಾಡುತ್ತಿರುವ ಬಗ್ಗೆ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ರಾಜಕಾರಣದಲ್ಲಿ ಹೊಸಬರು ಬರಬೇಕು ಎಂಬ ಉದ್ದೇಶದಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದೆ. ಆದರೆ, ಪಕ್ಷದ ಎಲ್ಲ ನಾಯಕರು, ಕ್ಷೇತ್ರದ ಶಾಸಕರು ಮತ್ತೊಮ್ಮೆ ಸ್ಪರ್ಧಿಸಬೇಕು, ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಒತ್ತಾಯ ಮಾಡಿದ್ದಾರೆ. ಆದರೆ, ಈ ಒತ್ತಡಗಳನ್ನು ಮೀರಿ ನಿಲ್ಲುವುದರಲ್ಲಿ ನಾನು ಯಶಸ್ವಿಯಾಗುತ್ತೇನೆಯೋ ಅಥವಾ ಇಲ್ಲವೋ ಎಂಬುದನ್ನು ಈಗ ಹೇಳಲು ಆಗುವುದಿಲ್ಲ ಎಂದರು.
ಸರ್ಕಾರವನ್ನೇ ನಡುಗಿಸುತ್ತಿದ್ದ ಚಳವಳಿಗಳು ಇಂದು ಮಂಕು; ಕೇಸ್ ಮೇಲೆ ಕೇಸ್: ಹೋರಾಟಗಳ ಕಾವೇ ಇಳಿಕೆ!
ಕ್ಷೇತ್ರದ ವ್ಯಾಪ್ತಿಯ ಒಬ್ಬ ಕಾರ್ಯಕರ್ತನ ವಿರೋಧ ಇಲ್ಲದಂತೆ ನಡೆಸಿಕೊಂಡಿದ್ದೇನೆ. ನಾನು ಪ್ರಚಾರ ಪ್ರಿಯ ಅಲ್ಲ. ಒಂದು ಸಣ್ಣ ಕೆಲಸ ಮಾಡಿ ಅದನ್ನು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವಂಥ ವ್ಯಕ್ತಿ ನಾನಲ್ಲ. ಇದರಿಂದ ನಾನು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದೇನೆ ಎಂದು ತಿಳಿದುಕೊಳ್ಳುವುದು ಬೇಡ. ನಾನೇನೋ ಬಹಳ ಹಿಂದೆಯೇ ತೀರ್ಮಾನ ತೆಗೆದುಕೊಂಡಿದ್ದೇನೆ. ಆದರೆ, ಪಕ್ಷದ ಹಿತದೃಷ್ಟಿ ಮತ್ತು ಕ್ಷೇತ್ರದ ಎಲ್ಲ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಬಗ್ಗೆ ಪಕ್ಷ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುತ್ತದೆಯೇ ಹೊರತು ನಾನಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಸ್ಪರ್ಧೆ ಸುಳ್ಳು; ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡೋಲ್ಲ: ಸೋಮಣ್ಣ ಸ್ಪಷ್ಟನೆ
