ಬೆಂಗಳೂರಲ್ಲಿ ಇತ್ತೀಚೆಗೆ ಬಿಜೆಪಿ ರಾಜ್ಯ ಉಸ್ತುವಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶೇ. 80ರಷ್ಟು ನಾಯಕರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನನ್ನನ್ನೇ ಮುಂದು ವರಿಸಲು ಕೋರಿದ್ದಾರೆ. ಕೇವಲ ಐದಾರು ಜನ ಮಾತ್ರ ನನ್ನ ವಿರುದ್ದ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿಯಲ್ಲಿನ ಎಲ್ಲಾ ಗೊಂದಲಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ ಎಂದು ಹೇಳಿದ  ಬಿ.ವೈ. ವಿಜಯೇಂದ್ರ

ಶಿವಮೊಗ್ಗ(ಜ.24): ಅಧ್ಯಕ್ಷ ಹುದ್ದೆಯ ಬದಲಾವಣೆ ಕುರಿತು ಭಾರೀ ಗದ್ದಲ ನಡೆದಿರುವ ನಡುವೆಯೇ, ಇತ್ತೀಚೆಗೆ ನಡೆದ ಪಕ್ಷದ ಶಾಸಕರ ಸಭೆಯಲ್ಲಿದ್ದ ಶೇ.80 ರಷ್ಟು ಸದಸ್ಯರು ನನ್ನನ್ನೇ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. 

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ವಿಜಯೇಂದ್ರ, 'ಬೆಂಗಳೂರಲ್ಲಿ ಇತ್ತೀಚೆಗೆ ಬಿಜೆಪಿ ರಾಜ್ಯ ಉಸ್ತುವಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶೇ. 80ರಷ್ಟು ನಾಯಕರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನನ್ನನ್ನೇ ಮುಂದು ವರಿಸಲು ಕೋರಿದ್ದಾರೆ. ಕೇವಲ ಐದಾರು ಜನ ಮಾತ್ರ ನನ್ನ ವಿರುದ್ದ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿಯಲ್ಲಿನ ಎಲ್ಲಾ ಗೊಂದಲಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ' ಎಂದು ಹೇಳಿದ್ದಾರೆ. 

ರೆಡ್ಡಿ ರಾಮುಲು ಭಿನ್ನಾಭಿಪ್ರಾಯಕ್ಕೆ ಏನು ಕಾರಣ..? Janardhana Reddy VS Sriramulu | Suvarna News

ಬೇಸರ ನಿಜ:

ಬಿಜೆಪಿಯಲ್ಲಿನ ಬಣ ಬೆಳವಣಿಗೆಗಳು ಕಾರ್ಯಕರ್ತರು ಹಾಗೂ ನನಗೂ ಬೇಸರ ತರಿಸಿವೆ. ಆದರೆ ನನ್ನ ಅಧ್ಯಕ್ಷಗಿರಿಯ ಬಗ್ಗೆ ಕಾರ್ಯ ಕರ್ತರಿಗೆ ಸಮಾಧಾನ ಇದೆ. ಯಡಿಯೂರಪ್ಪ ನವರ ಬಗ್ಗೆ ಅಪಮಾನ ಆಗುವ ರೀತಿಯಲ್ಲಿ ಕೆಲವರು ಮಾತ ನಾಡುತ್ತಿದ್ದಾರೆ. ಕಾರ್ಯಕರ್ತರು ನೊಂದಿದ್ದಾರೆ. ಈ ವಿಚಾರವಾಗಿ ಹೈಕಮಾಂಡ್ ಜೊತೆ ಮಾತಾಡಿದ್ದೇನೆ. ಶ್ರೀರಾಮಲು ವಿಚಾರ ಕೋರ್‌ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ರಾಮಲು ಬಗ್ಗೆ ಗೌರವ ಇದೆ. ಎಲ್ಲಾ ಅಂಶಗ ಳನ್ನು ಹೊರ ಗಡೆ ಹೇಳಲು ಸಾಧ್ಯವಿಲ್ಲ. ಶ್ರೀರಾಮುಲು ಅಪಾರ್ಥಕ್ಕೆ ಅವಕಾಶ ಮಾಡಿಕೊಡ ಬಾರದು. ಎಲ್ಲರೂ ಒಗ್ಗಟ್ಟಾಗಬೇಕು ಅಂತಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ತಿಳಿಸಿದ್ದಾರೆ. ಎಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದು ತಿಳಿಸಿದರು.

ಬಿವೈವಿ ನುಡಿ

* ಬಿಜೆಪಿ ಬೆಳವಣಿಗೆ ಬಗ್ಗೆ ಕಾರ್ಯಕರ್ತರಿಗೆ ಬೇಸರ ಇದೆ. ಆದರೆ ನನ್ನ ಅಧ್ಯಕ್ಷಗಿರಿ ಬಗ್ಗೆ ಅವರಿಗೆ ಸಮಾಧಾನ ಇದೆ 
* ಬೆಂಗಳೂರಿನಲ್ಲಿ ನಡೆದ ಶಾಸಕರ ಸಭೆಯ ವೇಳೆಯೂ ಅಲ್ಲಿದ್ದ ಶೇ.80ರಷ್ಟು ಸದಸ್ಯರು ನನ್ನ ಬೆಂಬಲಕ್ಕಿದ್ದರು 
* ಕೇವಲ ಐದಾರು ಜನರು ಮಾತ್ರವೇ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಈ ಗೊಂದಲಗಳಿಗೆ ಶೀಘ್ರ ತೆರೆ ಬೀಳಲಿದೆ