ಇಷ್ಟು ದಿನ ಸೈಲೆಂಟ್ ಆಗಿದ್ದೆ ಇನ್ನು ವೈಲೆಂಟ್ ಆಗುವೆ: ಎಂಟಿಬಿ ನಾಗರಾಜ್
ನಾವೆಲ್ಲ ಪ್ರಧಾನಿ ಮೋದಿ ಅವರಿಗಾಗಿ ದುಡಿಯುತ್ತಿದ್ದು ಅವರು ಮೂರನೇ ಬಾರಿ ಪ್ರಧಾನಮಂತ್ರಿ ಆಗಬೇಕು ಎಂಬ ಆಕಾಂಕ್ಷಿಯೊಂದಿಗೆ ಈ ಬಾರಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ನಮ್ಮ ಅಭ್ಯರ್ಥಿ ಡಾ.ಕೆ.ಸುಧಾಕರ್ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ: ಮಾಜಿ ಸಚಿವ ಎಂಟಿಬಿ ನಾಗರಾಜ್
ಚಿಕ್ಕಬಳ್ಳಾಪುರ(ಮಾ.28): ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರೀ ಸೋತ ಬಳಿಕ ಸಾಕಷ್ಟು ಸೈಲೆಂಟಾಗಿದ್ದೆ. ಆದರೆ ಈಗ ವೈಲೆಂಟ್ ಆಗುತ್ತೇನೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಸೋಲನ್ನು ಒಪ್ಪಿಕೊಂಡು ಮಾಜಿ ಸಚಿವ ಹಾಗೂ ಆಪ್ತರು ಆದ ಡಾ.ಕೆ.ಸುಧಾಕರ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ ಸಾಕಷ್ಟು ಅಸಮಾಧಾನ ತೋರಿದ್ದರು. ಆದರೆ ಈಗ ಮಾಜಿ ಸಚಿವರಿಗೆ ಲೋಕಸಭಾ ಟಿಕೆಟ್ ಘೋಷಣೆಯಾದಂತೆ ಮಾಜಿ ಸಚಿವ ಸುಧಾಕರ್‌ಗೆ ಬೆಂಬಲ ಸೂಚಿಸಲು ಮಾಜಿ ಸಚಿವ ಎಂಟಿಬಿ ನಾಗರಾಜ್ ಮುಂದಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ, ಅಭಿವೃದ್ಧಿ ಪರ್ವ ಸೃಷ್ಟಿಸುವೆ: ಡಾ.ಕೆ.ಸುಧಾಕರ್
ಇನ್ನೂ ನಾವೆಲ್ಲ ಪ್ರಧಾನಿ ಮೋದಿ ಅವರಿಗಾಗಿ ದುಡಿಯುತ್ತಿದ್ದು ಅವರು ಮೂರನೇ ಬಾರಿ ಪ್ರಧಾನಮಂತ್ರಿ ಆಗಬೇಕು ಎಂಬ ಆಕಾಂಕ್ಷಿಯೊಂದಿಗೆ ಈ ಬಾರಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ನಮ್ಮ ಅಭ್ಯರ್ಥಿ ಡಾ.ಕೆ.ಸುಧಾಕರ್ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಉತ್ತರಿಸಿದ್ದಾರೆ.
ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸೋಲನ್ನ ಒಪ್ಪಿಕೊಂಡ ಬಳಿಕ ಸಾಕಷ್ಟು ಬೇಸರದಿಂದ ಇದ್ದು ರಾಜಕೀಯದಿಂದ ದೂರವಾಗಿ ಸಾಕಷ್ಟು ಸೈಲೆಂಟಾಗಿದ್ದೆ ಆದರೆ ಈಗ ಮತ್ತೆ ನಾನು ವೈಲೆಂಟ್ ಆಗುತ್ತೇನೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದೇ ನನ್ನ ಗುರಿ ಎಂದು ಇದೇ ವೇಳೆ ಮಾಧ್ಯಮಗಳಿಗೆ ತಿಳಿಸಿದರು.