ಕಾಂಗ್ರೆಸ್‌ನಿಂದ ನನಗೆ ಆಫರ್‌ ಬಂದಿತ್ತು: ಜೆಡಿಎಸ್‌ ಶಾಸಕ ಸಮೃದ್ಧಿ

ಮಾಲೂರು ಶಾಸಕ ನಂಜೇಗೌಡರು, ಕೋಲಾರದ ಜೆಡಿಎಸ್‌ ಶಾಸಕರೊಬ್ಬರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಅವರೇ ಹೆಸರು ಬಹಿರಂಗಪಡಿಸಲಿ. ನಾನಂತೂ ಸೇರಲ್ಲ. ಇದೆಲ್ಲ ಬರೀ ಊಹಾಪೋಹ. ಗಾಳಿ ಸುದ್ದಿಗಳಿಗೆ ಕಿವಿ ಕೊಡಬಾರದು ಎಂದ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್  
 

I got an offer from Congress Says Mulabagilu JDS MLA Samruddhi Manjunath

ಮುಳಬಾಗಿಲು(ಡಿ.16):  ಸಿಎಂ ಸಿದ್ದರಾಮಯ್ಯ ನನ್ನನ್ನು ಖಾಸಗಿ ಯಾಗಿ ಕರೆದು ಮಾತನಾಡಿರುವುದು ಸತ್ಯ. ಆದರೆ, ನಾನು ಕಾಂಗ್ರೆಸ್ ಸೇರ್ಪಡೆ ಆಗುವುದಿಲ್ಲ. ಅದು ಊಹಾಪೋಹ ಮಾತ್ರ. ಗಾಳಿ ಸುದ್ದಿಗಳಿಗೆ ಯಾರು ಕಿವಿ ಕೊಡಬಾರದು ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ. 

11 ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಸಿದ್ದರಿದ್ದಾರೆ ಎಂಬ ಇತ್ತೀಚಿನ ಕಾಂಗ್ರೆಸ್ ಶಾಸಕರ ಹೇಳಿಕೆ ಬೆನ್ನಲ್ಲೇ ಸಮೃದ್ಧಿ ಅವರ ಈ ಸ್ಪಷ್ಟನೆ ಹೊರಬಿದ್ದಿದೆ. ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿ, ಸಿಎಂ ನನ್ನನ್ನು ಖಾಸಗಿಯಾಗಿ ಕರೆದು ಮಾತನಾಡಿರುವುದ ಸತ್ಯ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅನುದಾನಕ್ಕೆ ಹೋಗಿರು ವುದೇ ವಿನಃ ಕಾಂಗ್ರೆಸ್ ಸೇರ್ಪಡೆಗಲ್ಲ' ಎಂದರು. 

ಬಿಜೆಪಿಗರಿಂದ ಬೆಂಕಿ ಹಚ್ಚುವ ಕೆಲಸ: ಸಚಿವ ದಿನೇಶ್‌ ಗುಂಡೂರಾವ್‌

ಮಾಲೂರು ಶಾಸಕ ನಂಜೇಗೌಡರು, ಕೋಲಾರದ ಜೆಡಿಎಸ್‌ ಶಾಸಕರೊಬ್ಬರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಅವರೇ ಹೆಸರು ಬಹಿರಂಗಪಡಿಸಲಿ. ನಾನಂತೂ ಸೇರಲ್ಲ. ಇದೆಲ್ಲ ಬರೀ ಊಹಾಪೋಹ. ಗಾಳಿ ಸುದ್ದಿಗಳಿಗೆ ಕಿವಿ ಕೊಡಬಾರದು ಎಂದರು. 

ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ನಂಬಿ ಪಕ್ಷ ಬಿ' ಫಾರಂ ಕೊಟ್ಟಿದೆ. ಗೆಲುವಿಗೆ ಜೆಡಿಎಸ್‌ ಮುಖಂಡರು ಶ್ರಮಿಸಿದ್ದಾರೆ. ಅಲ್ಲದೆ ತಾಲೂಕಿನ ಮತದಾರರು ನನ್ನನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುತ್ತೇನೆ' ಎಂದು ಸ್ಪಷ್ಟಪಡಿಸಿದರು. 

Latest Videos
Follow Us:
Download App:
  • android
  • ios