ಯಾರು ಏನ್ ತಿನ್ನಬೇಕು, ತಿನ್ನಬಾರದು ಎನ್ನುವ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಗುಡುಗಿದ್ದಾರೆ.
ಬೆಂಗಳೂರು, (ಡಿ.28): ನಾನು ದನದ ಮಾಂಸವನ್ನು ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ.
"
ನಿನ್ನೆ (ಡಿ. 27) ಹನುಮ ಜಯಂತಿಯಂದು ಮೈಸೂರಿನಲ್ಲಿ ಸ್ನೇಹಿತನ ಮನೆಗೆ ಹೋಗಿ ಬಾಡೂಟ ಸವಿದಿದ್ದ ಸಿದ್ದು, ಮತ್ತೆ ಇಂದು (ಸೋಮವಾರ) ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ದನದ ಮಾಂಸ ತಿನ್ನುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸಹವಾಸ ದೋಷದಿಂದ ಸಿದ್ದರಾಮಯ್ಯ ಕೆಟ್ರಾ...? ಯಾರದು..?
ನಾನು ದನದ ಮಾಂಸವನ್ನು ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು. ಅದನ್ನ ಕೇಳುವುದಕ್ಕೆ ನೀನ್ಯಾರು? ಎಂದು ಅಧಿವೇಶನದಲ್ಲಿಯೇ ನಾನು ಕೇಳಿದ್ದೇನೆ. ನಮ್ಮವರು ಇದನ್ನು ಗಟ್ಟಿಯಾಗಿ ಹೇಳಲ್ಲ. ಕೆಲ ವಿಚಾರಗಳ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು ಎಂದು ಅವರು ಹೇಳಿದರು.
ಗೋವನ್ನು ನಾವು ಪೂಜಿಸುತ್ತೇವೆ ಎಂಬುದು ಸರಿ. ಆದರೆ ವಯಸ್ಸಾದ ಹಸು, ಗಂಡು ಕರು ಏನ್ ಮಾಡೋದು ಹೇಳಿ? ಕಾಂಗ್ರೆಸ್‌ನವರು ಕೂಡ ಈ ವಿಚಾರದ ಬಗ್ಗೆ ಹೇಳಬೇಕು. ಬೇರೆ ಜಾತಿಯವರು ಏನೋ ಅನ್ಕೊಳ್ತಾರೆಂದು ಸುಮ್ಮನಾಗ್ತಾರೆ. ಮೌನಕ್ಕೆ ಶರಣಾಗುವುದನ್ನು ಬಿಡಬೇಕು. ನಮ್ಮ ಸಿದ್ಧಾಂತವನ್ನ ನಾವು ಹೇಳಬೇಕು ಎಂದು ತಿಳಿಸಿದರು.
