Asianet Suvarna News Asianet Suvarna News

'ಮುಸ್ಲಿಮರ ಬೆಂಬಲ ಬೇಡ, ಹೊನ್ನಾಳಿ-ನ್ಯಾಮತಿ ಕೇಸರಿಮಯ ಮಾಡ್ತೀನಿ!'

ಹೊನ್ನಾಳಿ-ನ್ಯಾಮತಿ ‘ಕೇಸರಿಮಯ’ ಮಾಡ್ತೀನಿ!| ಮುಸ್ಲಿಮರ ಕೇರಿಗೆ ಬಂದ ಹಣ ಹಿಂದುಗಳ ಕೇರಿಗೆ ಕೊಡುವೆ: ಶಾಸಕ ರೇಣುಕಾಚಾರ್ಯ| ಕೋಮುವಾದಿ ಬಿಜೆಪಿಯಲ್ಲ, ಲಿಂಗಾಯತ ಜಾತಿ ಒಡೆದ ಸಿದ್ದರಾಮಯ್ಯ ಕೋಮವಾದಿ

I Dont Want The Support Of Muslims Says Honnali BJP MLA MP Renukacharya
Author
Bangalore, First Published Jan 21, 2020, 8:43 AM IST

ದಾವಣಗೆರೆ[ಜ.21]: ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳನ್ನು ಸಂಪೂರ್ಣ ಕೇಸರಿಮಯ ಮಾಡುವ ಜೊತೆಗೆ ಮುಸ್ಲಿಮರನ್ನು ಎಲ್ಲಿಡಬೇಕೋ ಅಲ್ಲೇ ಇಡುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

"

ನನ್ನ ಕ್ಷೇತ್ರ ವ್ಯಾಪ್ತಿಯ ಎರಡೂ ತಾಲೂಕುಗಳನ್ನು ಕೇಸರಿಮಯ ಮಾಡುವೆ. ಜೊತೆಗೆ ಮುಸ್ಲಿಮರ ಕೇರಿಗೆ ಬಂದ ಅನುದಾನ ಹಿಂದುಗಳ ಕೇರಿಗಳ ಅಭಿವೃದ್ಧಿಗೆ ನೀಡುತ್ತೇನೆ. ಯಾರನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡುತ್ತೇನೆ. ನನಗೆ ಅಂತಹವರ ಬೆಂಬಲವೇ ಬೇಡ ಎಂದು ಹೇಳಿದರು.

'ಮುಸ್ಲಿಮರ ಕೇರಿಗೆ ಬಂದ ಹಣ ಹಿಂದುಗಳ ಕೇರಿಗೆ ನೀಡುವೆ'

ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಕೋಮುವಾದಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ ಟೀಕಿಸುತ್ತಾರೆ. ನಿಜವಾದ ಕೋಮುವಾದಿಗಳೇ ಇಂತಹವರು ಎಂದರು.

ಜಾತಿ ಗಣತಿ ಮಾಡಿ, ವೀರಶೈವ ಲಿಂಗಾಯತರನ್ನು ಒಡೆದಿರಲ್ಲ ನೀವುಗಳು ನಿಜವಾದ ಕೋಮುವಾದಿಗಳು. ಸಿದ್ದರಾಮಯ್ಯಗಾಗಲೀ, ಡಿ.ಕೆ.ಶಿವಕುಮಾರ್‌ಗಾಗಲೀ ಬಿಜೆಪಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯೂ ಇಲ್ಲ ಎಂದು ಅವರು ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದರು.

ಅನೇಕ ಕಡೆ ಮಸೀದಿಗಳಲ್ಲಿ ಪ್ರಾರ್ಥನೆ ಬದಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದಾರೆ. ಇದಕ್ಕಾಗಿ ನಿಮಗೆ ಮಸೀದಿಗಳು ಬೇಕಾ? ಭಯೋತ್ಪಾದನೆಯನ್ನು ಬಿತ್ತುವುದು, ಬಂದೂಕು ಸಂಗ್ರಹಿಸೋದು, ಮಾರಕಾಸ್ತ್ರಗಳನ್ನು ಸಂಗ್ರಹಿಸಿಡುವುದೇ ನಿಮ್ಮ ಸಂಸ್ಕೃತಿಯೇ? ಇದನ್ನೆಲ್ಲಾ ನೋಡಿಕೊಂಡು ನಾವು ಸುಮ್ಮನಿರಬೇಕಾ ಎಂದು ಪ್ರಶ್ನಿಸಿದರು.

ಮಂಗಳೂರು ಗೋಲಿಬಾರ್‌ನಲ್ಲಿ ಸತ್ತಂತಹ ಇಬ್ಬರೂ ಅಮಾಯಕರು ಎಂಬುದಾಗಿ ಕಾಂಗ್ರೆಸ್‌ನ ಯು.ಟಿ.ಖಾದರ್‌ ಹೇಳುತ್ತಾರೆ. ಭಾರತವೇನು ಮಾವನ ಮನೆಯಾ? ನಿಮಗೆ ಪಾಕ್‌ನಿಂದ ಹಣ ಬಂದಿದ್ದರೆ ಮೃತರ ಕುಟುಂಬಕ್ಕೆ ನೀಡಿ. ಯಾರು ಬೇಡಾ ಅಂದರು ಎಂದು ಅವರು ವಾಗ್ದಾಳಿ ಮುಂದುವರಿಸಿದರು.

ಗೂಳಿ ಆಯ್ತು, ಟಗರು ಕಾಳಗಕ್ಕೆ ಹೊನ್ನಾಳಿ ಶಾಸಕ ರೇಣು ಚಾಲನೆ!

ಕಾಂಗ್ರೆಸ್‌ನಲ್ಲಿ ಪ್ರತಿ ಪಕ್ಷ ಸ್ಥಾನ ಖಾಲಿ ಇದೆ. ದಿನೇಶ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟು, ಓದಿ ಹೋದರು. ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಖಾಲಿ ಇದೆ. ಮೂರು ತಿಂಗಳಾದರೂ ಈವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಆ ಪಕ್ಷದ ಹೈಕಮಾಂಡ್‌ ನೇಮಕ ಮಾಡಿಲ್ಲ. ಇದು ಕಾಂಗ್ರೆಸ್‌ನ ಸ್ಥಿತಿ ಎಂದು ರೇಣುಕಾಚಾರ್ಯ ಲೇವಡಿ ಮಾಡಿದರು.

Follow Us:
Download App:
  • android
  • ios