Asianet Suvarna News Asianet Suvarna News

BJP Politics: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ ಎಂದ ಯತ್ನಾಳ..!

*  ನನ್ನ ಮೇಲೆ ಗಣಿ, ಅಕ್ರಮ ಆಸ್ತಿ, ಜಾತಿ ಯಾವುದೇ ಆರೋಪ ಇಲ್ಲ
*  ಪ್ರಧಾನಿ ನರೇಂದ್ರ ಮೋದಿ ಮನಸು ಮಾಡಿದರೆ ನಾನೇ ಸಿಎಂ ಆಗುತ್ತೇನೆ
*  ನಾನು ಸಿಎಂ ಏಕೆ ಆಗಬಾರದು? ಮುಖ್ಯಮಂತ್ರಿ ಆಗುವ ಅರ್ಹತೆ ನನಗೂ ಇದೆ 

I am The Next Chief Minister of Karnataka Says Basanagouda Patil Yatnal grg
Author
Bengaluru, First Published Apr 14, 2022, 2:02 PM IST

ವಿಜಯಪುರ(ಏ.14):  ಮುಂದಿನ ಸಿಎಂ ನಾನೇ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಇಂಗಿತ ವ್ಯಕ್ತಪಡಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನನ್ನ ಮೇಲೆ ಗಣಿ, ಅಕ್ರಮ ಆಸ್ತಿ, ಜಾತಿ ಯಾವುದೇ ಆರೋಪ ಇಲ್ಲ. ಪ್ರಧಾನಿ ನರೇಂದ್ರ ಮೋದಿ(Narendra Modi) ಮನಸು ಮಾಡಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದರು.

ನಾನು ಮುಖ್ಯಮಂತ್ರಿ ಏಕೆ ಆಗಬಾರದು? ಮುಖ್ಯಮಂತ್ರಿ(Chief Minister of Karnataka) ಆಗುವ ಅರ್ಹತೆ ನನಗೂ ಇದೆ. ಹೈಕಮಾಂಡ್‌(High Command) ಒಪ್ಪಿದರೆ ನನ್ನ ನೇತೃತ್ವದಲ್ಲಿ ಚುನಾವಣೆ ನಡೆಸಲು ಸಿದ್ಧ. ಚುನಾವಣೆ(Election) ನೇತೃತ್ವ ನನಗೆ ಕೊಟ್ಟರೆ 130 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದರು.

'ನನ್ನಿಂದಲೇ ಬಿಜೆಪಿ ಎನ್ನುವರನ್ನೇ ಹೈಕಮಾಂಡ್ ಮನೆಯಲ್ಲಿ ಕೂರಿಸಿದೆ, ವಿಜಯೇಂದ್ರ ಯಾವ ಗಿಡದ ತಪ್ಪಲು?'

ಈಶ್ವರಪ್ಪ(KS Eshwarappa) ರಾಜೀನಾಮೆಗೆ ಆಗ್ರಹಿಸಿ ಗುತ್ತಿಗೆದಾರರ ಸಂಘ ಪ್ರತಿಭಟನೆ ಮಾಡಿದೆ. ಇದು ನಿಜವಾದ ಗುತ್ತಿಗೆದಾರರ ಸಂಘವೋ? ಕಾಂಗ್ರೆಸ್‌ ಪ್ರೇರಿತ ಗುತ್ತಿಗೆದಾರರ ಸಂಘವೋ ಎಂಬುವುದನ್ನು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಸಂಘದ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ ಎಂದು ತಿಳಿಸಿದರು.

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್‌. ಈಶ್ವರಪ್ಪನವರ ಮೇಲೆ ಬಂದಿರುವ ಆರೋಪದ ಹಿಂದೆ ಡಿಕೆಶಿ ಧಮ್ಕಿ ಕಾರಣವಾಗಿದೆ. ನನಗೂ ಕೂಡ ಡಿಕೆಶಿ(DK Shivakumar) ಸದನದಲ್ಲಿ ಧಮ್ಕಿ ಹಾಕಿದ್ದರು ಎಂದರು.

ಮೂರು ತಿಂಗಳು ಕಾಯಿರಿ, ಧಮ್ಕಿ ಹಾಕುವ ಗೂಂಡಾಗಳನ್ನು ಜೈಲಿಗೆ ಕಳುಹಿಸುತ್ತೇವೆ. ಉತ್ತರ ಪ್ರದೇಶದಂತೆಯೇ ಕರ್ನಾಟಕದಲ್ಲಿಯೂ ಗೂಂಡಾಗಳನ್ನು ಅಂತ್ಯ ಮಾಡುತ್ತೇವೆ. ಕರ್ನಾಟಕದಲ್ಲಿಯೂ ಬುಲ್ಡೋಜರ್‌ ಶುರುವಾಗುತ್ತದೆ. ಗೂಂಡಾಗಳನ್ನು ಜೈಲಿಗೆ ಕಳಿಸುವುದು ಶುರುವಾಗುತ್ತದೆ ಎಂದರು.

ಹುಚ್ಚು ಸ್ವಾಮಿ ಬೆನ್ನತ್ತಿದ್ರೆ ಶಿಗ್ಗಾಂವಿನಲ್ಲಿ ಸಿಎಂ ಉಲ್ಟಾ, ಬೊಮ್ಮಾಯಿಗೆ ಯತ್ನಾಳ್ ಖಡಕ್ ಎಚ್ಚರಿಕೆ

ಈಶ್ವರಪ್ಪ ಮೇಲಿನ ಆರೋಪಕ್ಕೆ ಡಿಕೆಶಿ ಧಮ್ಕಿ ಕಾರಣ: ಯತ್ನಾಳ

ವಿಜಯಪುರ: ಸಚಿವ ಕೆ.ಎಸ್‌.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಗುತ್ತಿಗೆದಾರರ ಸಂಘ ಪ್ರತಿಭಟನೆ ಮಾಡಿದೆ. ಇದು ನಿಜವಾದ ಗುತ್ತಿಗೆದಾರರ ಸಂಘವೋ? ಕಾಂಗ್ರೆಸ್‌ ಪ್ರೇರಿತ ಗುತ್ತಿಗೆದಾರರ ಸಂಘವೋ ಎಂಬುವುದನ್ನು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಸಂಘದ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್‌.ಈಶ್ವರಪ್ಪನವರ ಮೇಲೆ ಬಂದಿರುವ ಆರೋಪದ ಹಿಂದೆ ಡಿಕೆಶಿ ಧಮ್ಕಿ ಕಾರಣವಾಗಿದೆ. ನನಗೂ ಕೂಡ ಡಿಕೆಶಿ ಸದನದಲ್ಲಿ ಧಮ್ಕಿ ಹಾಕಿದ್ದರು ಎಂದರು. ಮೂರು ತಿಂಗಳು ಕಾಯಿರಿ, ಧಮ್ಕಿ ಹಾಕುವ ಗೂಂಡಾಗಳನ್ನು ಜೈಲಿಗೆ ಕಳುಹಿಸುತ್ತೇವೆ. ಉತ್ತರ ಪ್ರದೇಶದಂತೆಯೇ ಕರ್ನಾಟಕದಲ್ಲಿಯೂ ಗೂಂಡಾಗಳನ್ನು ಅಂತ್ಯ ಮಾಡುತ್ತೇವೆ. ಕರ್ನಾಟಕದಲ್ಲಿಯೂ ಬುಲ್ಡೋಜರ್‌ ಶುರುವಾಗುತ್ತದೆ. ಗೂಂಡಾಗಳನ್ನು ಜೈಲಿಗೆ ಕಳಿಸುವುದು ಶುರುವಾಗುತ್ತದೆ ಎಂದರು.
 

Follow Us:
Download App:
  • android
  • ios