Asianet Suvarna News Asianet Suvarna News

ವಯಸ್ಸಾಗಿದೆ, ನನಗೆ ಎಂಪಿ ಟಿಕೆಟ್‌ ಕೊಡಲ್ಲ: ಸಂಸದ ಬಚ್ಚೇಗೌಡ

‘ನನಗೀಗ 81 ವರ್ಷ ವಯಸ್ಸಾಗಿದೆ. ಪ್ರಧಾನಿ ಮೋದಿ ಪ್ರಕಾರ 75 ವರ್ಷ ದಾಟಿದವರಿಗೆ ಟಿಕೆಟ್‌ ನೀಡುವುದಿಲ್ಲ. ಹೀಗಾಗಿ, ನನಗೆ ಟಿಕೆಟ್‌ ಕೊಡಲ್ಲ. ಆದರೂ, ಚಿಂತೆಯಿಲ್ಲ, ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆ. ಹಾಗಂತ ಬಿಜೆಪಿ ಬಿಟ್ಟು, ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಸಂಸದ ಬಿ.ಎನ್‌.ಬಚ್ಚೇಗೌಡ ಹೇಳಿದರು. 

I am old MP ticket is not given to me Says BN Bache Gowda gvd
Author
First Published Aug 23, 2023, 10:20 AM IST

ಚಿಕ್ಕಬಳ್ಳಾಪುರ (ಆ.23): ‘ನನಗೀಗ 81 ವರ್ಷ ವಯಸ್ಸಾಗಿದೆ. ಪ್ರಧಾನಿ ಮೋದಿ ಪ್ರಕಾರ 75 ವರ್ಷ ದಾಟಿದವರಿಗೆ ಟಿಕೆಟ್‌ ನೀಡುವುದಿಲ್ಲ. ಹೀಗಾಗಿ, ನನಗೆ ಟಿಕೆಟ್‌ ಕೊಡಲ್ಲ. ಆದರೂ, ಚಿಂತೆಯಿಲ್ಲ, ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆ. ಹಾಗಂತ ಬಿಜೆಪಿ ಬಿಟ್ಟು, ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಸಂಸದ ಬಿ.ಎನ್‌.ಬಚ್ಚೇಗೌಡ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ‘ನನ್ನ ಮಗ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ನಲ್ಲಿ ಇರುವುದು ನಿಜ. ಅದು ಅವನ ರಾಜಕೀಯ ಜೀವನ. ಆದರೆ, ನಾನು ಬಿಜೆಪಿಯಲ್ಲಿದ್ದೇನೆ. ಕಾಂಗ್ರೆಸ್‌ಗೆ ಹೋಗುವ ವಿಚಾರವೇನೂ ಇಲ್ಲ’ ಎಂದರು. 

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಯಾವ ಕಾರ್ಯಕ್ರಮಗಳಿಗೂ ಹಾಜರಾಗಿಲ್ಲ. ಒಬ್ಬ ಸಂಸದರಿಗೆ ಅಧಿಕೃತ ಆಹ್ವಾನ ಇಲ್ಲ, ಯಾವುದೇ ಕರಪತ್ರಗಳಲ್ಲಿ ಹೆಸರಿಲ್ಲ ಎಂದರೆ ಹೇಗೆ ಬರಲಾಗುತ್ತೆ? ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ಹೆಸರು ಹೇಳದೆ ಹರಿಹಾಯ್ದರು. ಸಿಎಂ ಸಿದ್ಧರಾಮಯ್ಯ ಸಮರ್ಥ ನಾಯಕರಾಗಿದ್ದು, ಅವರಿಗೆ ರಾಜ್ಯದ ಆರ್ಥಿಕತೆಯ ಆಗುಹೋಗುಗಳ ಬಗ್ಗೆ ಸ್ಪಷ್ಟಚಿತ್ರಣವಿದೆ. 5 ಗ್ಯಾರಂಟಿಗಳಿಂದ ಜನತೆಗೆ ಅನಾನುಕೂಲಕ್ಕಿಂತ ಅನುಕೂಲವೇ ಹೆಚ್ಚಿದೆ. 

ತಮ್ಮ ಶಾಸಕರನ್ನೇ ಹೆದರಿಸಲು ಕಾಂಗ್ರೆಸ್‌ ಆಪರೇಷನ್‌ ತಂತ್ರ: ಬಾಲಚಂದ್ರ ಜಾರಕಿಹೊಳಿ

ಯಾವ ಕಾರಣಕ್ಕೂ ರಾಜ್ಯವನ್ನು ದಿವಾಳಿ ಆಗಲು ಅವರು ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಈ ವಿಚಾರದಲ್ಲಿ ಬಿಜೆಪಿ, ಜೆಡಿಎಸ್‌ ಟೀಕೆ ಅನಗತ್ಯ ಎಂದರು. ಪೂರ್ಣ ಬಹುಮತ ಪಡೆದಿರುವ ಕಾಂಗ್ರೆಸ್‌ ಸರಕಾರದ ಆಡಳಿತ ವೈಖರಿಯನ್ನು ಟೀಕಿಸುತ್ತಿರುವ ಬಿಜೆಪಿಯದು ಒಡೆದ ಮನೆಯ ಮನಸ್ಥಿತಿಯಾಗಿದೆ. ನಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ನಾಯಕರಿಗೆ 3 ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕರನ್ನು ಆರಿಸಲು ಆಗಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಆರಿಸಲು ಕೂಡ ಆಗಿಲ್ಲ. 

ಚಂದ್ರಯಾನ-3ರಿಂದಾಗಿ ನೈಸ್‌ ದಾಖಲೆ ಬಿಡುಗಡೆ ಮುಂದಕ್ಕೆ: ಎಚ್.​ಡಿ.ಕುಮಾರಸ್ವಾಮಿ

ನನ್ನ 50 ವರ್ಷದ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಸೇರುವುದಿಲ್ಲ. ದೇವೇಗೌಡರು ಬರುಕಿರುವವರೆಗೆ ಜೆಡಿಎಸ್‌ಗೆ ಅವಸಾನದ ಭಯವಿಲ್ಲ ಎಂದರು. ದೇಶದಲ್ಲಿ ಈಗ ಮೋದಿ ಹವಾ ಇದೆ. ಆದರೆ, ದೇಶದಲ್ಲಿ ಕ್ಷಿಪ್ರಗತಿಯಲ್ಲಿ ರಾಜಕೀಯ ಕ್ರಾಂತಿ ಆಗುತ್ತಿದ್ದು, ಇಂಡಿಯಾ ವರ್ಸಸ್‌ ಎನ್‌ಡಿಎ ನಡುವೆ ಸ್ಪರ್ಧೆಯಿದೆ. ಮೋದಿ ಮತ್ತೊಮ್ಮೆ ಆರಿಸಿ ಬರುತ್ತಾರೋ ಇಲ್ಲವೋ ಎಂದು ಈಗಲೇ ಹೇಳಲಾಗುವುದಿಲ್ಲ. ಬದಲಾವಣೆ ಅಂತೂ ಆಗಲಿದೆ ಎಂದು ಹೇಳಿದರು. ಇದೇ ವೇಳೆ, ಕರ್ನಾಟಕವನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

Follow Us:
Download App:
  • android
  • ios