ನಾನು ಬಿಜೆಪಿ ಸೇರುತ್ತೇನೆ ಎಂದು ಮಾಧ್ಯಮ ವರದಿ ಬರುತ್ತಿವೆ. ಇದು ಹುರುಳಿಲ್ಲದ್ದು. ದೇಶದ ಜನ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ. ಹೀಗಾಗಿ, ಕೆಆರ್‌ಪಿಪಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದೇ ವಿನಃ ಪಕ್ಷ ಸೇರುವುದಿಲ್ಲ ಎಂದ ಶಾಸಕ ಗಾಲಿ ಜನಾರ್ದನ ರೆಡ್ಡಿ 

ಕೊಪ್ಪಳ(ಫೆ.18): ನಾನು ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಕಾಂಗ್ರೆಸ್‌ ಪಕ್ಷಸೇರುವ ಪ್ರಶ್ನೆಯೇ ಇಲ್ಲ. ಕೆಆರ್‌ಪಿಪಿ ಪಕ್ಷವನ್ನು ಸಂಘಟನೆ ಮಾಡುತ್ತೇವೆ ಎಂದು ಕೆಆ‌ರ್‌ಪಿಪಿ ಸಂಸ್ಥಾಪ ಅಧ್ಯಕ್ಷ, ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಸೇರುತ್ತೇನೆ ಎಂದು ಮಾಧ್ಯಮ ವರದಿ ಬರುತ್ತಿವೆ. ಇದು ಹುರುಳಿಲ್ಲದ್ದು. ದೇಶದ ಜನ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ. ಹೀಗಾಗಿ, ಕೆಆರ್‌ಪಿಪಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದೇ ವಿನಃ ಪಕ್ಷ ಸೇರುವುದಿಲ್ಲ ಎಂದರು.

ಕೊಪ್ಪಳ: ಜನಾರ್ದನ ರೆಡ್ಡಿ ಬಿಜೆಪಿಗೆ ಶೀಘ್ರ?

ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ರನ್ನು ಭೇಟಿಯಾಗಿದ್ದು ಸಹಜ ಭೇಟಿ. ನನ್ನ ಅವರ ಸ್ನೇಹ 25 ವರ್ಷಗಳದ್ದು. ಆದರೆ, ಅವರು ರಾಜಕೀಯವಾಗಿ ನನ್ನನ್ನು ಅಹ್ವಾನ ಮಾಡಿಲ್ಲ ಎಂದರು.