ಮೂಲ ಬಿಜೆಪಿ, ವಲಸೆ ಬಿಜೆಪಿಗ ಎಂಬ ಪ್ರಶ್ನೆ ನನ್ನೆದುರಿಗಿಲ್ಲ: ಸಚಿವ ಹೆಬ್ಬಾರ
ನಾನು ಮೂಲ ಬಿಜೆಪಿಗನೇ ಆಗಿರುವುದರಿಂದ ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿ ಎಂಬ ಪ್ರಶ್ನೆ ಸಮಸ್ಯೆ ತನ್ನೆದುರಿಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸ್ಪಷ್ಟಪಡಿಸಿದರು.
ಶಿರಸಿ (ನ.20) : ನಾನು ಮೂಲ ಬಿಜೆಪಿಗನೇ ಆಗಿರುವುದರಿಂದ ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿ ಎಂಬ ಪ್ರಶ್ನೆ ಸಮಸ್ಯೆ ತನ್ನೆದುರಿಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸ್ಪಷ್ಟಪಡಿಸಿದರು. ತಾಲೂಕಿನ ಬಿಸ್ಲಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. ತಾನು ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸಂಘಟನೆ ಆಧಾರದ ಮೇಲೆ ತನ್ನ ತಪ್ಪಿದ್ದರೆ ವಿರೋಧಿಸುವವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇನೆ. ಹಾಗೇ ತಪ್ಪನ್ನು ಪ್ರಾಂಜಲ ಮನಸ್ಸಿನಿಂದ ತಿದ್ದುಕೊಳ್ಳಲು ಸಿದ್ಧನಿದ್ದೇನೆ. ಆದರೆ ವೈಯಕ್ತಿಕ ಆಧಾರದಲ್ಲಿ ವಿರೋಧಿಸುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್ ಹೆಬ್ಬಾರ್
ವೈಯಕ್ತಿಕ ಹಿತಾಸಕ್ತಿ ಇರುವ ಕಾರ್ಯಕರ್ತರನ್ನು ಸರಿ ಮಾಡಲು ಆಗುತ್ತದೆ ಎಂದು ಹೇಳಲಾಗದು. ಆದರೆ ಸರಿ ಮಾಡಲು ಪ್ರಯತ್ನ ಮಾಡುತ್ತೇವೆ. ಅದು ಸರಿ ಆಗುತ್ತದೆ ಎಂದು ಹೇಳಲಾಗದು. ಅದರಲ್ಲೂ ರಾಜಕೀಯ ಕಾರಣಕ್ಕೆ ವಿರೋಧಿಸುವವರನ್ನು ಸರಿ ಮಾಡಲು ಸಾಧ್ಯವಿಲ್ಲ. ಪಕ್ಷದೊಳಗೆ ಹಾಗೂ ಹೊರಗೆ ಯಾರೇ ವಿರೋಧಿಸುವ ಸಾಹಸ ಮಾಡಿದರೂ ಅಂತಿಮವಾಗಿ ದೇವರು ಹಾಗೂ ಜನ ನೋಡುವವರಿದ್ದಾರೆ ಎಂದರು.
ಜಿಪಂ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ. ಚುನಾವಣೆ ಎದುರಿಸುವ ಶಕ್ತಿ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಇದೆ. ನಮಗೆ ಯಾವುದೇ ಆತಂಕವಿಲ್ಲ. ಆದರೆ ಗೊತ್ತಿಲ್ಲದೇ ಮಾಡಿದ ಸೀಟು ಹಂಚಿಕೆ, ಮೀಸಲಾತಿಯನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿಲ್ಲ. ಇದರ ಬಗ್ಗೆ ರಚನೆಯಾದ ಸಮಿತಿ ವರದಿಗಾಗಿ ಕಾಯುತ್ತಿದ್ದೇವೆ. ಅದಾದ ನಂತರ ಸಂಪುಟದಲ್ಲಿ ಈ ಬಗ್ಗೆ ನಿರ್ಣಯಿಸಿ ಚುನಾವಣೆಗೆ ಹೋಗುವ ನಿರ್ಧರಿಸುತ್ತೇವೆ ಎಂದರು.
ವಿರೋಧ ಪಕ್ಷವಾಗಿ ಆರೋಪ ಮಾಡುವುದು ಕರ್ತವ್ಯದ ಭಾಗ. ಅದನ್ನು ಮಾಡಿದಾಗ ಮಾತ್ರ ವಿರೋಧ ಪಕ್ಷ ಎನಿಸಿಕೊಳ್ಳುತ್ತದೆ. ಆಡಳಿತ ಪಕ್ಷದಲ್ಲಿ ಲೋಪದೋಷ ಆಗುವುದಿಲ್ಲ. ಸಣ್ಣಪುಟ್ಟಆಗಬಹುದು. ಆದರೆ ಕಾಂಗ್ರೆಸ್‌ನವರು ಹೇಳುವಂತೆ ಎಲ್ಲ ಲೋಪದೋಷ ಆಗಿದೆ ಎಂದು ಹೇಳಲಾಗದು. ಕೆಲವು ಆಗಿದ್ದನ್ನು ಹೇಳುತ್ತಾರೆ. ಕೆಲವು ಆಗದೇ ಇರುವುದನ್ನು ಜಾಸ್ತಿ ಹೇಳುತ್ತಾರೆ ಎಂದರು.
Global Investors Meet: ಭಾರತ ಭವಿಷ್ಯದ ಉತ್ಪಾದನಾ ಹಬ್: ಸಚಿವ ಹೆಬ್ಬಾರ್
ಶೇ.40 ಕಮಿಷನ್ ಬಗ್ಗೆ ಮಾತನಾಡಿದರು. ದಾಖಲೆ ಕೊಡಿ ಎಂದರೆ ಕೊಡಲಿಲ್ಲ. ಆಧಾರ ರಹಿತ ಆರೋಪವನ್ನು ಆರೋಪ ಎಂದಷ್ಟೇ ಪರಿಗಣಿಸಬಹುದು. ದಾಖಲೆ ಇಲ್ಲದ್ದನ್ನು ಗಂಭಿರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸಚಿವ ಹೆಬ್ಬಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಬಿಜೆಪಿ ಗ್ರಾಮಿಣ ಅಧ್ಯಕ್ಷ ನರಸಿಂಹ ಹೆಗಡೆ ಮುಂತಾದವರು ಹಾಜರಿದ್ದರು.