Asianet Suvarna News Asianet Suvarna News

ಯಾರನ್ನೋ ಸೋಲಿಸಲು ನಾನು ಇಲ್ಲಿಗೆ ಪ್ರಚಾರಕ್ಕೆ ಬಂದಿಲ್ಲ; ಎಚ್‌ಡಿಕೆ

ಯಾರನ್ನು ಸೋಲಿಸಲು ನಾನು ಇಲ್ಲಿಗೆ ಪ್ರಚಾರಕ್ಕೆ ಬಂದಿಲ್ಲ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಮುಖ್ಯ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

I am not come here to campaign for beat anyone says HDK at t narasipur rav
Author
First Published Apr 26, 2023, 1:52 AM IST | Last Updated Apr 26, 2023, 1:52 AM IST

ಟಿ. ನರಸೀಪುರ (ಏ.26) : ಯಾರನ್ನು ಸೋಲಿಸಲು ನಾನು ಇಲ್ಲಿಗೆ ಪ್ರಚಾರಕ್ಕೆ ಬಂದಿಲ್ಲ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಮುಖ್ಯ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದ ಆವರಣದಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಅಹಿಂದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ರಾಜಕಾರಣ ವೇವ್‌ ಲೆಂತ್‌ಗೆ ಡಾ. ಭಾರತಿ ಶಂಕರ್‌ ಹೊಂದಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದುಡ್ಡು ಕೊಟ್ಟು ಹಳ್ಳಿಹಳ್ಳಿಗಳಿಂದ ಜನರನ್ನ ಕರೆತಂದಿಲ್ಲ. ಸಮಾವೇಶಕ್ಕೆ ಎಲ್ಲ ಸಮಾಜದ ಜನರು ಬಂದಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದಾರೆ, ಅಂಬೇಡ್ಕರ್‌ ಅವರು ಸಂವಿಧಾನದ ವ್ಯವಸ್ಥೆ ತಂದಿದ್ದಾರೆ, ಪ್ರತಿಯೊಬ್ಬರು ಸಮಾನತೆಯಿಂದ ಬದುಕಬೇಕು. ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ ಅಂಬೇಡ್ಕರ್‌ ಅವರ ಚಿಂತನೆ ಹಾಗೂ ಅವರು ಅನುಭವಿಸಿದ ನೋವಿನಿಂದ ದೇಶದಲ್ಲಿ ಸಂವಿಧಾನ ರಚನೆಯಾಗಿದೆ, ಆದ್ದರಿಂದ ಸಂವಿಧಾನದ ಆಶಯದಂತೆ ಪಂಚರತ್ನ ಕಾರ್ಯಕ್ರಮಗಳನ್ನು ಈಡೇರಿಸಲು ಈ ಬಾರಿ ನನಗೆ ಅವಕಾಶ ಕೊಡಿ ಎಂದು ಅವರು ಕೋರಿದರು.

ಮೈಸೂರು: ವರುಣದಲ್ಲಿ ಸಿದ್ದು ಹಣಿಯಲು ಅಹಿಂದ ಅಸ್ತ್ರ ಬಿಟ್ಟ ಕುಮಾರಸ್ವಾಮಿ

ವಿ. ಸೋಮಣ್ಣ(V Somanna) ವಸತಿ ಸಚಿವರಾಗಿ ನನ್ನ ಕ್ಷೇತ್ರಕ್ಕೆ ಮನೆ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು. ಒಂದು ಮನೆ ಕೊಡಲು ಸಾಧ್ಯವಾಗಲಿ, ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ದೇವೇಗೌಡರು ಶೇ. 4 ಮೀಸಲಾತಿ ಕೊಟ್ಟಿದ್ದರು. ಈಗಿನ ಬಿಜೆಪಿ ಸರ್ಕಾರ ನಾಲ್ಕು ಪರ್ಸೆಂಟ್‌ ಮೀಸಲಾತಿ ತೆಗೆದು ವೀರಶೈವ ಸಮಾಜಕ್ಕೆ ಹಾಗೂ ಒಕ್ಕಲಿಗರಿಗೆ ಕೊಟ್ಟಿದ್ದಾರೆ. ಈ ಆದೇಶಕ್ಕೆ ಸುಪ್ರೀಂಕೋರ್ಚ್‌ ತಡೆ ನೀಡಿದೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ(Siddaramaiah) ಲಿಂಗಾಯತ ಸಮಾಜದವರು(Lingayat community) ಭ್ರಷ್ಟಎಂದು ಹೇಳಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಜಾತಿ ಮುಖ್ಯವಲ್ಲ, ಬಡತನ ವೀರಶೈವ ಸಮುದಾಯದಲ್ಲಿ ಇಲ್ಲ, ಎಲ್ಲ ಸಮಾಜದಲ್ಲಿ ಬಡವರು ಶ್ರೀಮಂತರು ಇದ್ದಾರೆ.

ನಾನು ಸಿಎಂ ಆದ್ರೆ ಒಕ್ಕಲಿಗರು ಮನೆಯಲ್ಲಿ ಕುಳಿತು ಊಟ ಮಾಡಲು ಸಾಧ್ಯವೇ. ಅವರ ಸಂಪಾದನೆ ಅವರೇ ಮಾಡಬೇಕು ಎಂದರು.

ಚುನಾವಣೆ ನಡೆಯುತ್ತಿರುವುದು ಸಿದ್ದರಾಮಯ್ಯ ವರ್ಸಸ್‌ ಭಾರತಿ ಶಂಕರ್‌ ನಡುವೆ, ವೈದ್ಯನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇವತ್ತು ಕುತಂತ್ರದ ರಾಜಕಾರಣ ನಡೆತಾ ಇದೆ ಸ್ವಲ್ಪ ಕುತಂತ್ರ ರಾಜಕಾರಣ ಸಹ ಮಾಡಬೇಕು ಇಲ್ಲ ಅಂದ್ರೆ ಮತ ಬರುವುದಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌ನವರ ಯಾವ ಗ್ಯಾರೆಂಟಿಗಳನ್ನು ನಂಬಬೇಡಿ ಎಂದರು. ಸರ್ಕಾರ ಮಾಡುವ ಸಾಲ ಆರುವರೆ ಕೋಟಿ ಜನರೇ ತೀರಿಸಬೇಕು, ರಸ್ತೆ ಮಾಡುವ ಕೆಲಸದಲ್ಲಿ ಶೇ. 40 ಕಮಿಷನ್‌ ತೆಗೆದುಕೊಳ್ಳುತ್ತಾರೆ ಎಂದು ಟೀಕಿಸಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣಗೆ ಬೆಂಬಲಿಸಿದ್ದು, ಹೀಗಾಗಿ ನಂಜನಗೂಡಿನಲ್ಲಿ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂದರು.

ಜೆಡಿಎಸ್‌ ಅಭ್ಯರ್ಥಿ ಡಾ. ಭಾರತೀ ಶಂಕರ್‌ ಮಾತನಾಡಿ, ಚಿಕ್ಕಯ್ಯನ ಛತ್ರ, ವರುಣ, ಟಿ. ನರಸೀಪುರ ಕಸಬ ನನ್ನ ಹಳೆಯ ಕ್ಷೇತ್ರದ ಭಾಗ ಅಹಿಂದ ನಾಯಕ ಎನ್ನುವವರು ಹತ್ತು ವರ್ಷಗಳ ಬಳಿಕ ಬಂದಿದ್ದಾರೆ, ಬಿಜೆಪಿಗೆ ಇಲ್ಲಿ ಮೂರನೇ ಸ್ಥಾನ ಅಂತಿದ್ದಾರೆ. ಬಿಜೆಪಿಗೆ ವರುಣದಲ್ಲಿ ಸೋಲು ಕಟ್ಟಿಟ್ಟಬುತ್ತಿ ನಾನು ಗೊಡ್ಡು ಹಸುವಲ್ಲ, ಹಾಲು ಕೊಡುವ ಹಸು ನೀವು ಎಷ್ಟುಚೆನ್ನಾಗಿ ಮೇವು ಹಾಕ್ತೀರ ಅಷ್ಟೇ ಹಾಲು ಕೊಡ್ತೀನಿ, ಅಭಿವೃದ್ಧಿ ಕನಸು ಹೊತ್ತು ಜೆಡಿಎಸ್‌ ಸೇರಿದ್ದೇನೆ ಎಂದರು.

Karnataka election 2023: ಜೆಡಿಎಸ್‌ಗೆ ಬಂದಷ್ಟು ಜನ ಅಮಿತ್ ಶಾ Rallyಗೆ ಬಂದಿಲ್ಲ: ಎಚ್‌ಡಿಕೆ

ಟೌನ್‌ ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್‌ ಕಾಂಗ್ರೆಸ್‌ ತೊರೆದು ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.

ರಾಜ್ಯ ಉಪಾಧ್ಯಕ್ಷ ಎಸ್‌.ಎನ್‌. ಸಿದ್ದಾರ್ಥ, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿ ಪುಟ್ಟಸ್ವಾಮಿ, ಮಾಜಿ ಶಾಸಕ ಚಿಕ್ಕಣ್ಣ, ಕ್ಷೇತ್ರ ಅಧ್ಯಕ್ಷ ಬಾಲಕೃಷ್ಣ, ಉಸ್ತುವಾರಿ ಚೆನ್ನಪ್ಪ ಗೌಡ ಇದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios