ಆರೋಪದ ಬಗ್ಗೆ ನಮಗೆ ಗೊತ್ತಿಲ್ಲ. ಯಾವ ಬಿಲ್‌ ವಿಚಾರವೂ ನನಗೆ ಗೊತ್ತಿಲ್ಲ. ಯಾವ ಗುತ್ತಿಗೆದಾರನ ಬಳಿಯೂ ನಾನು ಮಾತನಾಡಿಲ್ಲ. ನಾನು ಯಾರಿಗೂ ಪ್ರಮಾಣ ಮಾಡುವ ಅಗತ್ಯವಿಲ್ಲ. ಉತ್ತರ ಕೊಡಬೇಕಾಗಿಲ್ಲ. ಕಾನೂನು ಉತ್ತರ ಕೊಡುತ್ತದೆ. ಕೆಲಸ ಮಾಡಿದರೆ ಬಿಲ್‌ ಕೊಡುತ್ತೇವೆ. ಇಲ್ಲವಾದರೆ ಕೊಡಲ್ಲ ಎಂದ ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಆ.09): 'ಗುತ್ತಿಗೆದಾರರು ರಾಜ್ಯಪಾಲರಿಗಾದರೂ ದೂರು ಕೊಡಲಿ, ಪ್ರಧಾನಿಗಾದರೂ ಕೊಡಲಿ. ಬಿಲ್‌ ಪಾವತಿ ಬಾಕಿ ಕುರಿತಾಗಿ ಯಾವುದೇ ಬ್ಲ್ಯಾಕ್‌ ಮೇಲ್‌ ಅಥವಾ ಬೆದರಿಕೆಗೆ ನಾನು ಹೆದರುವುದಿಲ್ಲ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗುತ್ತಿಗೆದಾರರಿಗೆ ತಿರುಗೇಟು ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀವು ಬಾಕಿ ಬಿಲ್‌ ಬಿಡುಗಡೆಗೆ ಕಮಿಶನ್‌ ಕೇಳಿಲ್ಲ ಎನ್ನುವುದಾದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಿ’ ಎಂದು ತಮಗೆ ಗುತ್ತಿಗೆದಾರರು ಸವಾಲು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಆರೋಪದ ಬಗ್ಗೆ ನಮಗೆ ಗೊತ್ತಿಲ್ಲ. ಯಾವ ಬಿಲ್‌ ವಿಚಾರವೂ ನನಗೆ ಗೊತ್ತಿಲ್ಲ. ಯಾವ ಗುತ್ತಿಗೆದಾರನ ಬಳಿಯೂ ನಾನು ಮಾತನಾಡಿಲ್ಲ. ನಾನು ಯಾರಿಗೂ ಪ್ರಮಾಣ ಮಾಡುವ ಅಗತ್ಯವಿಲ್ಲ. ಉತ್ತರ ಕೊಡಬೇಕಾಗಿಲ್ಲ. ಕಾನೂನು ಉತ್ತರ ಕೊಡುತ್ತದೆ. ಕೆಲಸ ಮಾಡಿದರೆ ಬಿಲ್‌ ಕೊಡುತ್ತೇವೆ. ಇಲ್ಲವಾದರೆ ಕೊಡಲ್ಲ’ ಎಂದರು.

ಲೋಕಸಭೆಯಲ್ಲಿ 20 ಸೀಟು, BBMPಯಲ್ಲಿ ನಮ್ಗೆ ಓಟು, ಹೈಕಮಾಂಡ್‌ಗೆ ಭರವಸೆ ನೀಡಿದ ಕರ್ನಾಟಕ ಕಾಂಗ್ರೆಸ್!

‘ಅವರು ಏನು ಬೇಕಾದರು ಮಾಡಲಿ, ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ಬ್ಲ್ಯಾಕ್‌ಮೇಲ್‌, ಬೆದರಿಕೆ, ರಾಜ್ಯಪಾಲರು, ಪ್ರಧಾನಿಗೆ ದೂರು ಕೊಡುವುದು ಏನು ಬೇಕಾದರೂ ಮಾಡಲಿ. ಒಂದೇ ತಿಂಗಳಲ್ಲಿ ಒಂದು ಸಾವಿರ ಕೋಟಿ ರು. ಮೊತ್ತದ ಕೆಲಸ ಆಗುತ್ತಾ? ಅದರ ಬಗ್ಗೆ ಪರಿಶೀಲಿಸಲು ಸೂಚನೆ ನೀಡಿದ್ದೇನೆ. ಕೆಲಸ ಮಾಡಲಾಗಿದೆಯಾ ಎಂಬ ಬಗ್ಗೆ ದೃಢೀಕರಿಸಿದರೆ ಬಿಲ್‌ ಪಾವತಿ ಮಾಡುತ್ತಾರೆ’ ಎಂದು ಹೇಳಿದರು.

‘ಕುಮಾರಸ್ವಾಮಿಯವರನ್ನು ಗುತ್ತಿಗೆದಾರರು ಭೇಟಿ ಮಾಡಿರುವುದು ಸ್ವಾಭಾವಿಕ. ನಾವು ಪ್ರತಿಪಕ್ಷದಲ್ಲಿದ್ದಾಗಲೂ ಗುತ್ತಿಗೆದಾರರು ಭೇಟಿಯಾಗಿದ್ದರು. ಪ್ರತಿಪಕ್ಷಗಳ ಬಳಿ ಬರುವುದೇ ಇಂತಹ ವಿಚಾರದ ಬಗ್ಗೆ ದನಿ ಎತ್ತಲು. ಯಾರನ್ನೋ ಹೆದರಿಸಿದಂತೆ ನನ್ನನ್ನು ಹೆದರಿಸಲು ಆಗುತ್ತಾ? ನನಗೆ ಬೆದರಿಕೆ ಹಾಕಲು ಆಗುತ್ತಾ? ಹಾಕಲಿ ಬಿಡಿ. ನಾವು ಹಿಂದಿನ ಸರ್ಕಾರದ ವಿರುದ್ಧ ಕಮಿಷನ್‌ ಆರೋಪ ಮಾಡಿದ್ದು ಸತ್ಯ. ನಾವು ಅದರ ಬಗ್ಗೆ ತನಿಖೆಯನ್ನೂ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಕೆಲಸ ಮಾಡಿದರೆ ಬಿಲ್‌, ಇಲ್ಲವಾದರೆ ಕೊಡಲ್ಲ

ಯಾವ ಬಿಲ್‌ ವಿಚಾರವೂ ನನಗೆ ಗೊತ್ತಿಲ್ಲ. ಯಾವ ಗುತ್ತಿಗೆದಾರನ ಬಳಿಯೂ ನಾನು ಮಾತನಾಡಿಲ್ಲ. ನಾನು ಯಾರಿಗೂ ಪ್ರಮಾಣ ಮಾಡುವ ಅಗತ್ಯವಿಲ್ಲ. ಎಲ್ಲದಕ್ಕೂ ಕಾನೂನು ಉತ್ತರ ಕೊಡುತ್ತದೆ. ಕೆಲಸ ಮಾಡಿದರೆ ಬಿಲ್‌ ಕೊಡುತ್ತೇವೆ. ಇಲ್ಲವಾದರೆ ಕೊಡಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.