Asianet Suvarna News Asianet Suvarna News

ಯಾರ ಬಗ್ಗೆಯೂ ನನಗೆ ಹೆದರಿಕೆ ಇಲ್ಲ: ಸಚಿವ ಡಾ.ಕೆ.ಸುಧಾಕರ್‌

ಪಕ್ಷದ ಎಲ್ಲ ನಾಯಕರನ್ನು ಪ್ರೀತಿ, ವಿಶ್ವಾಸದಿಂದ ನಡೆಸಿಕೊಂಡಿದ್ದೇನೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌

I Am Not Afraid of Anyone Says Minister K Sudhakar grg
Author
First Published Feb 6, 2023, 2:00 AM IST

ಚಿಕ್ಕಬಳ್ಳಾಪುರ(ಫೆ.06): ಕ್ಷೇತ್ರದಲ್ಲಿ ಯಾರ ಬಗ್ಗೆಯೂ ನನಗೆ ಹೆದರಿಕೆ ಇಲ್ಲ. ವಿಶ್ವಾಸದಿಂದ ನಮ್ಮ ನಾಯಕರನ್ನು ನಡೆಸಿಕೊಳ್ಳುತ್ತೇನೆ, ಒಗ್ಗಟ್ಟಿನಲ್ಲಿ ಬಲವಿದೆ, ಎಲ್ಲರೂ ಸೇರಿ ಸಕ್ರಿಯವಾಗಿ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡೋಣ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಹೊರವಲಯದ ಸಿವಿವಿ ಕ್ಯಾಂಪಸ್‌ ನಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್‌ ನೀಡಿದ ಸನ್ಮಾನ ಸ್ಪೀಕರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಯುವ ನಾಯಕತ್ವ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ತಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಸಕ್ರಿಯವಾಗಿ ಕೆಲಸ ಮಾಡಿದಲ್ಲಿ ಭವಿಷ್ಯದ ನಾಯಕರಾಗುವುದರಲ್ಲಿ ಸಂದೇಹವಿಲ್ಲ .ಬಿಜೆಪಿ ಎಲ್ಲರಿಗೂ ಸಮಾನ ಅವಕಾಶ ನೀಡುವ ಪಕ್ಷ, ಪ್ರಣಾಳಿಕೆ ಸಮಿತಿಗೆ ತಮ್ಮನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿರುವುದೇ ಇದಕ್ಕೆ ಸಾಕ್ಷಿ. ಸಕ್ರಿಯವಾಗಿ ಕೆಲಸ ಮಾಡಿದರೆ ಅವಕಾಶ ಸಿಗಲಿದೆ ಎಂಬುದಕ್ಕೆ ಇದೇ ನಿದರ್ಶನ ಎಂದು ಕಿರಣ್‌ಕುಮಾರ್‌ಗೆ ಭರವಸೆ ನೀಡಿದರು.

ಸಿದ್ದರಾಮಯ್ಯನವರೇ ನಿಮ್ಮ ಕೊನೆಯ ಚುನಾವಣೆಯಲ್ಲಿ ನೀವು ಗೆಲ್ಲಿ: ಸುಧಾಕರ್

ಬಿಜೆಪಿಯಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ನಿರಂತರವಾಗಿರಲಿದೆ. ಒಬ್ಬ ನೈಜ ನಾಯಕನಾದವನು ಹೆಚ್ಚು ನಾಯಕರನ್ನು ಬೆಳೆಸಬೇಕೆ ಹೊರತು ಕಾರ್ಯಕರ್ತರು ಮತ್ತು ಹಿಂಬಾಲಕರನ್ನಲ್ಲ ಎಂಬ ತತ್ವದಡಿ ತಾವು ನಂಬಿಕೆ ಇಟ್ಟಿದ್ದು, ಅದೇ ಹಾದಿಯಲ್ಲಿ ಸಾಗುತ್ತಿದ್ದೇವೆ. ಈ ಕ್ಷೇತ್ರದಲ್ಲಿ ಮುಂದಿನ ಎರಡು ಮೂರು ದಶಕಗಳು ಅವರು ನಾಯಕರಾಗಿರಬೇಕು ಎಂಬ ಉದ್ಧೇಶ ಹೊಂದಿದ್ದು, ನವೀನ್‌ ಕಿರಣ್‌ ಅವರಲ್ಲಿ ನಿಷ್ಠೆ ಇದೆ, ರಾಜಕಾರಣದಲ್ಲಿ ನಂಬಿಕೆ ಮುಖ್ಯ, ಈಗ ಸಮಾಜ, ಜನ ಬದಲಾಗುತ್ತಿದ್ದಾರೆ. ಇಂತಹ ದಿನಮಾನಗಳಲ್ಲಿ ನಂಬಿಕೆ, ಸ್ನೇಹ ಮುಖ್ಯವಾದ ಗುಣಗಳು, ಇವನ್ನು ಅಳವಡಿಸಿಕೊಂಡವರು ನವೀನ್‌ ಕಿರಣ್‌ ಆಗಿದ್ದು, ಇದಕ್ಕೆ ಸಿವಿವಿ ರಕ್ತವೇ ಕಾರಣ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ನವೀನ್‌ ಕಿರಣ್‌ ಅವರು ಮತ್ತಷ್ಟುಸಕ್ರಿಯರಾಗಿ ಅವರದೇ ಆದ ಕೊಡುಗೆ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ನೀಡಲಿ. ತಮ್ಮ ಮೇಲೆ ನಂಬಿಕೆ ಇಟ್ಟು ಸಕ್ರಿಯವಾಗಿ ಕೆಲಸ ಮಾಡಿದರೆ ಭವಿಷ್ಯದ ನಾಯಕರಾಗಲಿದ್ದೀರಿ, ಮುಂದಿನ ದಿನಗಳಲ್ಲಿ ಅವಕಾಶಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಗುಡಿಬಂಡೆ, ಬಾಗೇಪಲ್ಲಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮುದಾಯ ಮತ್ತು ಯುವಕರ ಸಂಘಟನೆ ಮಾಡಲು ಮುಖ್ಯಮಂತ್ರಿಗಳು ಅವರಿಗೆ ಸೂಚಿಸಿದ್ದು, ಆ ನಿಟ್ಟಿನಲ್ಲಿ ಅವರು ಶ್ರಮಿಸುವಂತೆ ಕೆ.ವಿ.ನವೀನ್‌ ಕಿರಣ್‌ಗೆ ಸಚಿವ ಸುಧಾಕರ್‌ ಸಲಹೆ ನೀಡಿದರು.

Chikkaballapur: ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್‌: ಸಚಿವ ಸುಧಾಕರ್‌

ಈ ಸಂದರ್ಭದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ…, ಕೆವಿ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಬಿ. ಮುನಿಯಪ್ಪ, ನಗರಸಭಾ ಸದಸ್ಯೆ ನಿರ್ಮಲಾಪ್ರಭು, ಖಾದಿ ಮತ್ತು ಗ್ರಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ…, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಕಾಳೇಗೌಡ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

3 ಜಿಲ್ಲೆಗಳಲ್ಲಿ 8 ಕ್ಷೇತ್ರ ಗೆಲ್ಲುವ ಗುರಿ

ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಮೂರೂ ಜಿಲ್ಲೆಗಳಿಂದ ಕನಿಷ್ಠ 8 ಸ್ಥಾನ ಗೆಲ್ಲಬೇಕು. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್ಚು ಅಧಿಕಾರ ಪಡೆಯಲು ಸಾಧ್ಯವಾಗಲಿದೆ ಎಂದು ಸಚಿವ ಸುಧಾಕರ್‌ ತಿಳಿಸಿದರು.

Follow Us:
Download App:
  • android
  • ios