* ಸಣ್ಣಪುಟ್ಟ ವಿಷಯ ಮುಂದಿಟ್ಟು ಜಾತಿ ಹೆಸರು ಹೇಳುವುದು ಬಿಜೆಪಿ, ಆರೆಸ್ಸೆಸ್ ಮನಸ್ಥಿತಿ* ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಕುಂದಿಸಲು ಬಿಜೆಪಿ ಮಾಡುತ್ತಿರುವ ಪ್ರಯತ್ನ ಇದು* ರಾಹುಲ್ ಅವರಿಗೆ ಕಿರುಕುಳ ಕೊಡಬೇಕು ಎನ್ನುವುದು ಅವರ ಉದ್ದೇಶ
ನವದೆಹಲಿ(ಜೂ.15): ‘ನಾನು ದಲಿತನಾಯಕನಲ್ಲ, ಕಾಂಗ್ರೆಸ್ ನಾಯಕ. ನಾನು ದಲಿತ ಎಂದು ಸಚಿವನಾಗಿದ್ದಾ? ದಲಿತ ಎಂದು ವಿಪಕ್ಷ ನಾಯಕನಾಗಿದ್ದಾ? ನಾನು ಕಾಂಗ್ರೆಸ್ ಕಾರ್ಯಕರ್ತರ ಅನ್ನುವ ಕಾರಣಕ್ಕೆ ಆದೆ.’ ಇದು ದಲಿತ ನಾಯಕನ ವಿಚಾರಣೆಗೆ ಕರೆದಾಗ ಕಾಂಗ್ರೆಸ್ ಪ್ರತಿಭಟನೆ ಮಾಡಿಲ್ಲ ಎಂಬ ಬಿಜೆಪಿ ಮುಖಂಡರ ಟೀಕೆಗಳಿಗೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ ತಿರುಗೇಟು.
ಬಿಜೆಪಿಯವರು ಹುಚ್ಚರಿದ್ದಾರೆ. ಇದು ಬಿಜೆಪಿಯ ಇಬ್ಭಾಗ ಮಾಡುವ ನೀತಿ. ನಾನು ದಲಿತ ಅಂಥ ಸಚಿವನಾಗಿದ್ದಾ? ಇಂತಹ ಮಾತು ಅವರು ಮುಂದೆ ಆಡಬಾರದು. ಈ ರೀತಿ ಅವರು ತಿರುಚಿದರೆ ಏನೂ ಸಿಗುವುದಿಲ್ಲ. ಇಂತಹ ಸಣ್ಣಪುಟ್ಟವಿಷಯಗಳನ್ನು ಮುಂದಿಟ್ಟುಕೊಂಡು ಜಾತಿ ಹೆಸರು ಹೇಳುವುದು ಬಿಜೆಪಿ, ಆರ್‌ಎಸ್ಸೆಸ್ ಮನಸ್ಥಿತಿಯಾಗಿದ್ದು ಈ ಮನುವಾದಿಗಳ ಮಾತಿಗೆ ನಾನು ಸೊಪ್ಪು ಹಾಕುವುದಿಲ್ಲ ಎಂದು ಹೇಳಿದರು.
3 ದಿನದ ವಿಚಾರಣೆ ಬಳಿಕ ರಾಹುಲ್ ಗಾಂಧಿಗೆ ರೆಸ್ಟ್, ಜೂ.17ಕ್ಕೆ ಮತ್ತೆ ಹಾಜರಾಗಲು ಸಮನ್ಸ್!
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಕುಂದಿಸಲು ಬಿಜೆಪಿ ಮಾಡುತ್ತಿರುವ ಪ್ರಯತ್ನ ಇದು. ರಾಹುಲ್ ಅವರಿಗೆ ಕಿರುಕುಳ ಕೊಡಬೇಕು ಎನ್ನುವುದು ಅವರ ಉದ್ದೇಶ. ಹಾಗಾಗಿ ಪದೇ ಪದೇ ಇ.ಡಿ.ಯವರು ಕರೆಯುತ್ತಿದ್ದಾರೆ. ನೂರು ಪ್ರಶ್ನೆ ಕೇಳಿದರೂ ಅವರು ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
