Asianet Suvarna News Asianet Suvarna News

ಲೋಕಸಭಾ ಚುನಾವಣೆಗೆ ನಾನು ಅಭ್ಯರ್ಥಿಯಲ್ಲ: ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಪಷ್ಟನೆ

ಲೋಕಸಭಾ ಚುನಾವಣೆಗೆ ನಾನು ಯಾವುದೇ ಕಾರಣಕ್ಕೂ ಅಭ್ಯರ್ಥಿಯಲ್ಲ, ಮಾಜಿ ಸಚಿವ ಬಿ. ಶಿವರಾಂ ಈ ರೀತಿಯ ಹೇಳಿಕೆ ಅವರ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. 
 

I am not a candidate for Lok Sabha elections Says MLA KM ShivalingeGowda gvd
Author
First Published Jan 16, 2024, 4:23 AM IST

ಅರಸೀಕೆರೆ (ಜ.16): ಲೋಕಸಭಾ ಚುನಾವಣೆಗೆ ನಾನು ಯಾವುದೇ ಕಾರಣಕ್ಕೂ ಅಭ್ಯರ್ಥಿಯಲ್ಲ, ಮಾಜಿ ಸಚಿವ ಬಿ. ಶಿವರಾಂ ಈ ರೀತಿಯ ಹೇಳಿಕೆ ಅವರ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ನಗರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿ ಬಿ. ಶಿವರಾಂ ನನ್ನನ್ನು ಹಾಸನ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಲಿ ಎಂಬ ಹೇಳಿಕೆ ಸರಿಯಲ್ಲ. ಬಿ.ಶಿವರಾಂ ೪ ಬಾರಿ ಶಾಸಕರಾಗಿ, ಜಿಲ್ಲಾ ಮಂತ್ರಿಯಾಗಿ ಅಧಿಕಾರ ಮಾಡಿದ್ದಾರೆ. ಅದರ ಜತೆಯಲ್ಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾಗಿ ಸಂಘಟಿಸಿರುವ ಇವರು ನಿಲ್ಲಲಿ, ಅದನ್ನು ಬಿಟ್ಟು ಇನ್ನೊಬ್ಬರ ಹೆಸರನ್ನು ಹೇಳುವುದು ಸರಿಯಲ್ಲ’ ಎಂದರು.

‘ಶಾಸಕರಾಗುವ ನಿಟ್ಟಿನಲ್ಲಿ ಹಾಸನ, ಅರಸೀಕೆರೆ, ಬೇಲೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿರುವ ಅನುಭವ ಹೆಚ್ಚಿದೆ ಇವರಿಗೆ. ಈಗಾಗಲೇ ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಿ ಎಂದು ಹೇಳಿಕೊಳ್ಳುತ್ತಿರುವ ಬಿ. ಶಿವರಾಂಗೆ ನನ್ನ ಹೆಸರು ಹೇಳುವ ಅಧಿಕಾರವನ್ನು ನೀಡಿದವರು ಯಾರು? ಈ ಬೆಳವಣಿಗೆ ಉತ್ತಮವಲ್ಲ’ ಎಂದು ಕಿಡಿಕಾರಿದರು. ‘ರಾಜಕಾರಣದಲ್ಲಿ ದೇವರ ಆಶೀರ್ವಾದ ಮತ್ತು ಜನರ ಆಶೀರ್ವಾದದಿಂದ ನಾನು ೪ ಬಾರಿ ಶಾಸಕನಾಗಿದ್ದೇನೆ. 

ಆ್ಯಂಬುಲೆನ್ಸ್‌ ಸುಗಮ ಸಂಚಾರಕ್ಕೆ ವೈರ್‌ಲೆಸ್‌ ಸಂಪರ್ಕ ಬಳಕೆ: ಡಿ.ಕೆ.ಶಿವಕುಮಾರ್

ನಾನು ಜನರ ಸೇವೆಗಾಗಿ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಲು ಇಚ್ಛಿಸುತ್ತೇನೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಜತೆಯಲ್ಲಿ ಹೈಕಮಾಂಡ್ ಜಿಲ್ಲೆಯ ಉಸ್ತುವಾರಿ ನೀಡಿದರೆ ಜಿಲ್ಲೆಯ ಅಭಿವೃದ್ದಿ ದೃಷ್ಟಿಯಲ್ಲಿ ನನ್ನ ಹೋರಾಟವಿರುತ್ತದೆ’ ಎಂದರು. ‘ಬಿ. ಶಿವರಾಂ ಅವರು ಹೈಕಮಾಂಡ್‌ನ ಒಪ್ಪಿಸಿ ಟಿಕೆಟ್ ಪಡೆದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಮಾತುಗಳು ಬೇಡ. ಒಂದು ವೇಳೆ ಟಿಕೆಟ್ ತಂದರೆ ನಾನು ಇವರ ಪರವಾಗಿ ಹೋರಾಟ ಮಾಡಲಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಜನರಲ್ಲಿ ಗೊಂದಲ ಮೂಡಿಸುವುದು ಬೇಡ’ ಎಂದರು.

ಬಾಲಗಂಗಾಧರರು ಅಕ್ಷರ, ಅನ್ನ ದಾಸೋಹ ಸಂತ: ಮಾಜದ ಅತ್ಯಂತ ಬಡವ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನ್ನ ದಾಸೋಹದ ಜತೆಗೆ ಜ್ಞಾನ ದಾಸೋಹವನ್ನು ನೀಡಿದ ಮಹಾನ್ ಸಂತರು ಭೈರವೈಕ್ಯರಾದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಎಂದು ಶಾಸಕ ಕೆ,ಎಂ ಶಿವಲಿಂಗೇಗೌಡ ತಿಳಿಸಿದರು. ಬಡವ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನ್ನ ದಾಸೋಹದ ಜತೆಗೆ ಜ್ಞಾನ ದಾಸೋಹವನ್ನು ನೀಡಿದ ಮಹಾನ್ ಸಂತರು ಭೈರವೈಕ್ಯರಾದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಎಂದು ಶಾಸಕ ಕೆ,ಎಂ ಶಿವಲಿಂಗೇಗೌಡ ತಿಳಿಸಿದರು. ಅರಸೀಕೆರೆಯಲ್ಲಿ ಸ್ವಾಮೀಜಿಯ ಆರಾಧನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ: ಬಿ.ವೈ.ವಿಜಯೇಂದ್ರ

ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಯ 11ನೇ ವರ್ಷದ ಪುಣ್ಯಾರಾಧನೆಯನ್ನು ಭೈರವ ಯುವಕ ಸಂಘದ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ ಆರಾಧನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕೆಲಸ ಕಾರ್ಯಗಳ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಈ ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿಯನ್ನೇ ಉಂಟು ಮಾಡಿದರು. ಈಗ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರ ಅಗೋಚರ ಶಕ್ತಿ ನಮ್ಮನ್ನೆಲ್ಲಾ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ನಡೆಸಲು ಪ್ರೇರಕ ಶಕ್ತಿಯಾಗಿದೆ. ಇಂತಹ ಮಾಹನ್ ಸಂತರನ್ನು ಕಣ್ಣರೇ ಕಂಡ ನಮ್ಮ ಜೀವನವೇ ಸಾರ್ಥಕ’ ಎಂದು ನುಡಿದರು.

Follow Us:
Download App:
  • android
  • ios