ಚುನಾವಣೆಗಳಿಂದ ನಾನು ದೂರ ಇದ್ದೇನೆ: ನಿಖಿಲ್ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ
ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದರಿಂದ ಚುನಾವಣಾ ರಾಜಕಾರಣದಿಂದ ಕೆಲ ಸಮಯ ದೂರ ಉಳಿಯುವ ತೀರ್ಮಾನ ಮಾಡಿದ್ದೇನೆ ಎಂದು ಜೆಡಿಎಸ್ ಯುವ ನಾಯಕ, ಚಿತ್ರನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೀದರ್ (ಸೆ.19): ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದರಿಂದ ಚುನಾವಣಾ ರಾಜಕಾರಣದಿಂದ ಕೆಲ ಸಮಯ ದೂರ ಉಳಿಯುವ ತೀರ್ಮಾನ ಮಾಡಿದ್ದೇನೆ ಎಂದು ಜೆಡಿಎಸ್ ಯುವ ನಾಯಕ, ಚಿತ್ರನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಸದ್ಯಕ್ಕೆ ಚಲನಚಿತ್ರವೊಂದರ ಶೂಟಿಂಗ್ ಆರಂಭವಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಲಿ, ಚುನಾವಣಾ ರಾಜಕಾರಣಕ್ಕೆ ಇಳಿಯುವುದಾಗಲಿ ಕಷ್ಟದ ಕೆಲಸ ಎಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿರ್ಧಾರ ಕೈಗೊಂಡು ಶೀಘ್ರ ಎಲ್ಲರ ಕುತೂಹಲಕ್ಕೆ ತೆರೆ ಎಳೆಯುತ್ತಾರೆ ಎಂದರು.
ಸರ್ಕಾರ ಜನರನ್ನು ಯಾಮಾರಿ, ಡಬಲ್ ಗೇಮ್ ಆಡುತ್ತಿದೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಡದಿಂದಲೇ ರಾಮನಗರದ ಮೆಡಿಕಲ್ ಕಾಲೇಜ್ ಅನ್ನು ಕನಕಪುರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಒತ್ತಡದಿಂದಲೇ ರಾಮನಗರ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದಾಗಿ ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರೇ ಹೇಳಿದ್ದರು. ಹಾಗಾದರೆ, ಈ ಸರ್ಕಾರ ಯಾರನ್ನು ಯಾಮಾರಿಸಲು ಹೊರಟಿದೆ.
ನಿಖಿಲ್ ಕುಮಾರಸ್ವಾಮಿ ಸಿನಿಮಾ ಸೆಟ್‌ನಲ್ಲಿ ಶಿವಣ್ಣ: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ?
ಡಬಲ್ ಗೇಮ್ ಆಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಸುಖಾ ಸುಮ್ಮನೆ ಗೊಂದಲ ಏಕೆಂದು ಪ್ರಶ್ನಿಸಿದ್ದಾರೆ. ಮೆಡಿಕಲ್ ಕಾಲೇಜು ರಾಮನಗರ ಜಿಲ್ಲೆಯ ಜನತೆಯ ಹಕ್ಕು. ಅದಕ್ಕಾಗಿ ಹೋರಾಟ ಮಾಡುವ ಹಕ್ಕೂ ಅವರಿಗಿದೆ. ಹೀಗಾಗಿ ಪಕ್ಷಾತೀತವಾಗಿ ನಡೆಯುತ್ತಿರುವ ರಾಮನಗರ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. ನೇರವಾಗಿ ಭಾಗವಹಿಸಿ ರಾಜಕೀಯ ಬೆರೆಸುವುದು ನನಗೆ ಇಷ್ಟವಿಲ್ಲ. ಮೆಡಿಕಲ್ ಕಾಲೇಜು ಬೇಕೆನ್ನುವ ರಾಮನಗರ ಜನರ ಒತ್ತಾಯಕ್ಕೆ ನನ್ನ ಸಹಮತ ಇದೆ ಎಂದು ಹೇಳಿದ್ದಾರೆ. 2006-07ರಲ್ಲೇ 310 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಸೇರಿ ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿ ಸಮುಚ್ಚಯ ಸ್ಥಾಪನೆಗೆ ಅಂದಿನ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಆಡಳಿತಾತ್ಮಕ ಮಂಜೂರಾತಿ ನೀಡಿದ್ದರು.
ವಿದ್ಯಾರ್ಥಿನಿಯರು ಕೈ ಕುಯ್ದುಕೊಂಡ ಪ್ರಕರಣ: ಕೌನ್ಸಿಲಿಂಗ್‌ಗೆ ಮುಂದಾದ ಜಿಲ್ಲಾಡಳಿತ, ಶಿಕ್ಷಣ ಇಲಾಖೆ!
ಮತ್ತೆ 25-3-2-19ರಂದು ಸಿಎಂ ಆಗಿದ್ದ ಕುಮಾರಣ್ಣ ಅವರು ಆ ಯೋಜನೆಯ ವೆಚ್ಚವನ್ನು 540 ಕೋಟಿಗೆ ಹೆಚ್ಚಿಸಿದ್ದರು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಮೈತ್ರಿ ಸರ್ಕಾರದ ಅವಯಲ್ಲಿ ಕನಕಪುರಕ್ಕೂ ಪ್ರತ್ಯೇಕ ಮೆಡಿಕಲ್ ಕಾಲೇಜು ಬೇಕು ಎಂದು ಅಂದು ಡಿ.ಕೆ. ಶಿವಕುಮಾರ್ ಅವರೇ ಒತ್ತಡ ಹೇರಿದ್ದರು. 2018ರ ಡಿಸೆಂಬರ್ 13ರಂದು 450 ಕೋಟಿ ವೆಚ್ಚದ ಮೆಡಿಕಲ್ ಕಾಲೇಜನ್ನು ಕುಮಾರಣ್ಣ ಅವರು ಕನಕಪುರಕ್ಕೂ ಮಂಜೂರು ಮಾಡಿದ್ದರು. ಬಳಿಕ ಬಿಜೆಪಿ ಸರ್ಕಾರ ರಾಮನಗರ ಮೆಡಿಕಲ್ ಕಾಲೇಜು ಹಾಗೂ ರಾಜೀವ್ ಗಾಂಧಿ ವಿವಿ ಸಮುಚ್ಚಯ ನಿರ್ಮಾಣಕ್ಕೆ 610 ಕೋಟಿ ವೆಚ್ಚದಲ್ಲಿ ಗುದ್ದಲಿಪೂಜೆ ನೆರವೇರಿಸಿತ್ತು. ಈಗಷ್ಟೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಹೈಜಾಕ್ ಮಾಡುವ ಮೂಲಕ ರಾಮನಗರ ಜನತೆಗೆ ದ್ರೋಹ ಎಸಗಿದೆ ಎಂದು ನಿಖಿಲ್ ಕಿಡಿಕಾರಿದ್ದಾರೆ.