Asianet Suvarna News Asianet Suvarna News

ಕಾಂಗ್ರೆಸ್‌ಗೆ ಮತ್ತೊಂದು ಶಾಕ್, ಹಿಮಾಚಲ ಪ್ರದೇಶ ಚುನಾವಣೆ ಸಮೀಪದಲ್ಲೇ ಅಸಮಾಧಾನ ಸ್ಫೋಟ!

ಭಾರತ್ ಜೋಡೋ ಯಾತ್ರೆಯಲ್ಲಿರುವ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಚುನಾವಣೆಗೆ ಕೆಲ ದಿನಗಳಿರುವಾಗಲೇ ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ನೇರವಾಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ. 

Huge set back for Congress ahead of Himachal Pradesh Assembly election state president slams Rahul and Priyanak gandhi ckm
Author
First Published Sep 20, 2022, 7:47 PM IST

ನವದೆಹಲಿ(ಸೆ.20):  ಭಾರತ್ ಜೋಡೋ ಯಾತ್ರೆ ಹೊತ್ತಲ್ಲೇ ಕಾಂಗ್ರೆಸ್ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಹಿಮಾಚಲ ಪ್ರದೇಶ ಚುನಾವಣೆಗೆ ಕೆಲ ದಿನಗಳಿರುವಾಗಲೇ ಕಾಂಗ್ರೆಸ್‌ಗೆ ಹೊಸ ತಲೆನೋವು ಶುರುವಾಗಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪಕ್ಷದ ವಿರುದ್ಧವೇ ಸಿಡಿದೆದಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಕಡೆಗಣಿಸುತ್ತಿದ್ದಾರೆ. ಅವರಿಗೆ ಸಮಯ ನೀಡುತ್ತಿಲ್ಲ. ಹಿರಿಯರ ಮಾತು ಕೇಳುವ ಸೌಜನ್ಯವೂ ರಾಹುಲ್ ಹಾಗೂ ಪ್ರಿಯಾಂಕಾಗೆ ಇಲ್ಲ ಎಂದು ಹಿಮಾಚಲ ಪ್ರದೇಶ ಅಧ್ಯಕ್ಷೆ ಪ್ರತಿಭಾ ಸಿಂಗ್ ಹೇಳಿದ್ದಾರೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಈ ಧೋರಣೆಯಿಂದ ಕಾಂಗ್ರೆಸ್ ಪಕ್ಷದಿಂದ ಹಲವು ನಾಯಕರು ಹೊರಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬರೀದಾಗುತ್ತಿದೆ. ತಮ್ಮ ಮೂಗಿನ ನೇರಕ್ಕೆ ಮಾತನಾಡುವರನ್ನು, ಹೊಗಳಿಕೆ ಮಾತುಗಳನ್ನಾಡುವವರನ್ನು ಪಕ್ಷದಲ್ಲಿರಿಸಿಕೊಂಡರೆ ಗೆಲುವು ಕನಸಾಗಲಿದೆ ಎಂದು ಪ್ರತಿಭಾ ಸಿಂಗ್ ನೇರವಾಗಿ ಗಾಂಧಿ ನಾಯಕತ್ವದ ವಿರುದ್ಧ ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ(Rahul Gandhi) ರಾಜಕೀಯವಾಗಿ ಸಾಕಷ್ಟು ಕಲಿಯಬೇಕಿದೆ. ಪ್ರಮುಖವಾಗಿ ಯುವ ಹಾಗೂ ಹಿರಿಯ ನಾಯಕರ(Congress Leaders) ನಡುವಿನ ಜನರೇಶನ್ ಗ್ಯಾಪ್ ಪರಿಹರಿಸುವುದು ಹೇಗೆ ಎಂಬುದನ್ನು ಕಲಿಯಬೇಕಿದೆ. ಸತತವಾಗಿ ಹಿರಿಯ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಹಲವರು ಪಕ್ಷದಿಂದ ದೂರ ಉಳಿದಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿಲ್ಲ. ಸಮಸ್ಯೆ ಆಲಿಸಿ ಪರಿಹರಿಸುವ ಪ್ರಯತ್ನ ಮಾಡಿಲ್ಲ. ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗಲೇ ಪಕ್ಷ ಯಾವ ಅಧಪತನ ಕಂಡಿದೆ ಅನ್ನೋದು ಚುನಾವಣೆ ಫಲಿತಾಂಶ ಹೇಳುತ್ತಿದೆ ಎಂದು ಪ್ರತಿಭಾ ಸಿಂಗ್(Himachal Pradesh Congress President) ಹೇಳಿದ್ದಾರೆ.

 

ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ, Bharat Jodo Yatra ವಿರುದ್ಧ ಹೈಕೋರ್ಟ್‌ಗೆ ಅರ್ಜಿ!

ಕಳೆದ 30, 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಮೂಲೆಗುಂಪು ಮಾಡಲಾಗಿದೆ. ಸ್ಥಾನಮಾನ ಮಾತು ದೂರವಿರಲಿ, ಸೌಜನ್ಯದಿಂದ ಮಾತನಾಡಿಸುವ ಗೋಜಿಗೂ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ(Priyanaka Gandhi) ಹೋಗಿಲ್ಲ. ಇದು ಸಾಧ್ಯವಾಗದಿದ್ದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಸಮರ್ಥರಿಗೆ ನೀಡಿ ಸಂಘಟನೆಯಲ್ಲಿ ತೊಡಗಿಕೊಳ್ಳುವುದು ಉತ್ತಮ ಎಂದು ಪ್ರತಿಭಾ ಸಿಂಗ್(Pratibha Singh) ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಒಂದರ ಮೇಲೊಂದರಂತೆ ಹೊಡೆತ ಬೀಳುತ್ತಿದೆ. ಹಿಮಾಚಲ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಪ್ರಚಾರ ಸಮಿತಿಗೆ ಹಿರಿಯ ನಾಯಕ ಆನಂದ್ ಸಿಂಗ್ ರಾಜೀನಾಮೆ ನೀಡಿ ಹೊರಬಂದಿದ್ದರು. ಇತ್ತ ಭಾರತ್ ಜೋಡೋ ಯಾತ್ರೆ ಘೋಷಿಸಿದ ಬೆನ್ನಲ್ಲೇ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ 100ಕ್ಕೂ ಹೆಚ್ಚು ನಾಯಕರು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. 

Congress ಅಧ್ಯಕ್ಷ ಸ್ಥಾನಕ್ಕೆ ಮೂವರ ಸ್ಪರ್ಧೆ..? ಶಶಿ ತರೂರ್‌ ಸ್ಪರ್ಧೆಗೆ ಸೋನಿಯಾ ಸಮ್ಮತಿ..!

ನವೆಂಬರ್ ತಿಂಗಳಲ್ಲಿ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಜೊತೆಗೆ ಈ ಬಾರಿ ಆಮ್ ಆದ್ಮಿ ಪಾರ್ಟಿ ಕೂಡ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆಗಲಿವೆ.

Follow Us:
Download App:
  • android
  • ios