Asianet Suvarna News Asianet Suvarna News

ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ, Bharat Jodo Yatra ವಿರುದ್ಧ ಹೈಕೋರ್ಟ್‌ಗೆ ಅರ್ಜಿ!

ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಕೇರಳದಲ್ಲಿ ಸಾಗುತ್ತಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಈ ಯಾತ್ರೆ ಅತೀ ಹೆಚ್ಚು ದಿನ ಕೇರಳದಲ್ಲಿ ಸಂಚರಿಸುತ್ತಿದೆ. ಕೇರಳದಲ್ಲಿ ಭಾರಿ ಬೆಂಬಲಿಗರೊಂದಿಗೆ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿಗೆ ಸಂಕಷ್ಟ ಎದುರಾಗಿದೆ. ಭಾರತ್ ಜೋಡೋ ಯಾತ್ರೆ ವಿರುದ್ಧ ಹೈಕೋರ್ಟ್‌ಗೆ ಮನವಿಯೊಂದು ಸಲ್ಲಿಕೆಯಾಗಿದೆ.

Petition filed against congress leader Rahul Gandhi Bharat Jodo Yatra for blocking of vehicular movement in Public road ckm
Author
First Published Sep 20, 2022, 5:36 PM IST

ಕೇರಳ(ಸೆ.20): ಭಾರತ್ ಜೋಡೋ ಯಾತ್ರೆ ಕೇರಳದಲ್ಲಿ ಭಾರಿ ಜನ ಬೆಂಬಲದೊಂದಿಗೆ ಸಂಚರಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸದ್ಯ ಅತೀ ಹೆಚ್ಚು ಬೆಂಬಲಿಗರಿರುವ ರಾಜ್ಯ ಕೇರಳ. ಇಷ್ಟೇ ಅಲ್ಲ ಕೇರಳದ ವಯನಾಡಿನ ಸಂಸದನಾಗಿರುವ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆ ಅತೀ ಹೆಚ್ಚು ದಿನ ಕೇರಳದಲ್ಲಿ ಸಂಚರಿಸುತ್ತಿದೆ. ಈ ಯಾತ್ರೆ ಘೋಷಿಸಿದ ದಿನದಿಂದ ಒಂದಲ್ಲ ಒಂದು ಸಮಸ್ಯೆ, ವಿಘ್ನ ಎದುರಾಗುತ್ತಿದೆ. ಇದೀಗ ಕೇರಳದಲ್ಲಿ ಭಾರತ್ ಜೋಡೋ ಯಾತ್ರೆ ವಿರುದ್ಧ ವಕೀಲ ಕೆ ವಿಜಯನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರಾಹುಲ್ ಗಾಂಧಿ ಹಾಗೂ ಭಾರತ್ ಜೋಡೋ ಯಾತ್ರೆಯಿಂದ ಇಡೀ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಜನರು ಗಂಟೆ ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇದರಿಂದ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಕೆ ವಿಜಯನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ರಾಹುಲ್ ಗಾಂಧಿಯ(Rahul Gandhi) ಭಾರತ್ ಜೋಡೋ ಯಾತ್ರೆ(Bharat Jodo Yatra) ಸಾಗುವ ದಾರಿಯಲ್ಲಿ ಶಿಸ್ತು ಪಾಲಿಸುವುದು ಅಗತ್ಯ. ಭಾರತ್ ಜೋಡೋ ಯಾತ್ರೆ ಸಂಪೂರ್ಣ ದಾರಿಯನ್ನು ಆವರಿಸಿಕೊಂಡು ಸಾಗುತ್ತಿದೆ. ಇದರಿಂದ ಟ್ರಾಫಿಕ್ ಜಾಮ್(Traffic Jam) ಸಂಭವಿಸುತ್ತಿದೆ. ಇದರ ಬದಲು ಕನಿಷ್ಠ ಒಂದು ಪಥದಲ್ಲಿ ಯಾತ್ರೆ ಸಂಚರಿಸಿದರೆ ಇನ್ನೊಂದು ಪಥದಲ್ಲಿ ವಾಹನ ಸಂಚಾರ ಮಾಡಲು ಸಾಧ್ಯವಾಗಲಿದೆ. ಆದರೆ ರಾಹುಲ್ ಗಾಂಧಿ ಹಾಗೂ ಭಾರತ್ ಜೋಡೋ ಯಾತ್ರೆ(Congress) ಬೆಂಬಲಿಗರು ಇದ್ಯಾವುದನ್ನು ಗಮನಿಸಿದ ಯಾತ್ರೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ತೀವ್ರ ಸಮಸ್ಯೆ ತಂದಿಟ್ಟಿದ್ದಾರೆ. ಹೈಕೋರ್ಟ್ ತಕ್ಷಣವೇ ಈ ಕುರಿತು ನಿರ್ದೇಶನ ನೀಡಬೇಕು ಎಂದು ಕೆ ವಿಜಿಯನ್ ಕೇರಳ ಹೈಕೋರ್ಟ್‌ಗೆ(Kerala High Court) ಅರ್ಜಿ ಸಲ್ಲಿಸಿದ್ದಾರೆ.

ಬರೀ ಐನೂರಾ, 2 ಸಾವಿರ ಕೊಡು..! ಭಾರತ್‌ ಜೋಡೋ ನಿಧಿ ಸಂಗ್ರಹದ ವೇಳೆ ಕೈ ಕಾರ್ಯಕರ್ತರ ಆವಾಜ್‌!

ಆಲಪ್ಪುಳಕ್ಕೆ ಭಾರತ್‌ ಜೋಡೋ: ಯುವಕರ ಜತೆ ರಾಹುಲ್‌ ಸಂವಾದ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಾರಂಭಿಸಿರುವ ಭಾರತ ಜೋಡೋ ಯಾತ್ರೆ 10 ದಿನ ಕೇರಳದ ಆಲಪ್ಪುಳ ಜಿಲ್ಲೆ ತಲುಪಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನವನ್ನು ಭಾರತೀಯ ಯೂತ್‌ ಕಾಂಗ್ರೆಸ್‌ ‘ನಿರುದ್ಯೋಗ’ ದಿನ ಎಂದು ಆಚರಿಸುತ್ತಿರುವ ಹಿನ್ನಲೆಯಲ್ಲಿ ರಾಹುಲ್‌ ಗಾಂಧಿ ಯುವಕರನ್ನು ಭೇಟಿಯಾಗಿ ನಿರುದ್ಯೋಗದ ಬಗ್ಗೆ ಚರ್ಚೆ ನಡೆಸಿದರು.

ಭಾರತ್‌ ಜೋಡೋ ಯಾತ್ರೆ- ಮೈಸೂರು ಲೋಕಸಭಾ ಕ್ಷೇತ್ರದ ಸಮಿತಿ ರಚನೆ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮೈಸೂರು ಲೋಕಸಭಾ ಕ್ಷೇತ್ರದ ಸಮಿತಿ ರಚಿಸಿ, ಸಮಿತಿಗೆ ಸ್ಥಳೀಯ ನಾಯಕರನ್ನು ನೇಮಿಸಿದ್ದಾರೆ. ಈ ಸಮಿತಿಗೆ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಸದಸ್ಯರಾಗಿ ಶಾಸಕರಾದ ತನ್ವೀರ್‌ ಸೇಠ್‌, ಎಚ್‌.ಪಿ. ಮಂಜುನಾಥ್‌, ಮಾಜಿ ಸಚಿವರಾದ ಜೀವಿಜಯ, ಎಂ.ಸಿ. ನಾಣಯ್ಯ, ಸುಮಾ ವಸಂತ್‌, ಎಂಎಲ್ಸಿ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ಕೆ. ವೆಂಕಟೇಶ್‌, ವಾಸು, ವೀಣಾ ಅಚ್ಚಯ್ಯ, ಅರುಣ್‌ ಮಾಚಯ್ಯ, ಆರ್‌. ಧರ್ಮಸೇನ, ಎಂ.ಕೆ. ಸೋಮಶೇಖರ್‌, ಕೃಷ್ಣಪ್ಪ, ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ ಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಪೊನ್ನಪ್ಪ, ಡಾ. ಮಂತರ್‌ ಗೌಡ, ಚಂದ್ರಮೌಳಿ, ಮಾಜಿ ಮೇಯರ್‌ಗಳು, ಜಿಪಂ ಮಾಜಿ ಅಧ್ಯಕ್ಷರು, ಎಲ್ಲಾ ಮಾಜಿ ಅಧ್ಯಕ್ಷರು, ಜಿಲ್ಲೆ. ಎಲ್ಲಾ ಪದಾಧಿಕಾರಿಗಳು ಮತ್ತು ಸಂಯೋಜಕರನ್ನು ನೇಮಿಸಲಾಗಿದೆ.

Bharat Jodo Yatra ಮಕ್ಕಳ ದುರ್ಬಳಕೆ, ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಮಕ್ಕಳ ಆಯೋಗ !

Follow Us:
Download App:
  • android
  • ios