ರಾಯಚೂರು: ವಿಜಯ ಸಂಕಲ್ಪ ಯಾತ್ರೆಗೆ ದೊಡ್ಡ ಪ್ರಮಾಣದಲ್ಲಿ ಸ್ಪಂದನೆ: ಜಗದೀಶ ಶೆಟ್ಟರ್
ರಾಜ್ಯದ ನಾಲ್ಕು ಕಡೆಗಳಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್(Jagadish shettar) ಶುಕ್ರವಾರ ತಿಳಿಸಿದರು.
ರಾಯಚೂರು (ಮಾ.11) : ರಾಜ್ಯದ ನಾಲ್ಕು ಕಡೆಗಳಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್(Jagadish shettar) ಶುಕ್ರವಾರ ತಿಳಿಸಿದರು.
ನಗರದಲ್ಲಿ ನಡೆದ ಯಾತ್ರೆಗೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ(Kalyana karnataka) ಜಿಲ್ಲೆಗಳಲ್ಲಿ ನಮ್ಮ ತಂಡದ ನೇತೃತ್ವದಲ್ಲಿ ಯಾತ್ರೆ ಸಾಗಿದ್ದು, ರಾಯಚೂರು(Raichur) ಜಿಲ್ಲೆಯಲ್ಲಿ ಭಾರೀ ಬೆಂಬಲ ಸಿಗುತ್ತಿದೆ. ಇದು ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವನ್ನು ಇನ್ನಷ್ಟುಹೆಚ್ಚಿಸಿದೆ. ದೇಶ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್(Congress) ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.
ರಾಯಚೂರು ವಿಧಾನಸಭಾ ಚುನಾವಣೆ : ಎಸ್ ಎಸ್ ರಾಜಮೌಳಿ ಚುನಾವಣಾ ಐಕಾನ್!
ಪ್ರಧಾನಮಂತ್ರಿ(PM Narendra Modi) ಯಶಸ್ವಿಯಾಗಿ ಕೋವಿಡ್(Corona virus) ನಿರ್ವಹಣೆ ಮಾಡಿದ್ದನ್ನು ಎಲ್ಲರೂ ನೋಡಿದ್ದಾರೆ. ಭ್ರಷ್ಟಾಚಾರ ರಹಿತವಾದ ಎಂಟು ವರ್ಷಗಳ ಆಡಳಿತ ನೀಡಿದ್ದಾರೆ. ದೇಶ ಆರ್ಥಿಕವಾಗಿ ಚೇತರಿಸಿಕೊಳ್ಳಲು ಮೋದಿ ಕಾರಣರಾಗಿದ್ದಾರೆ. ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಟನ್ ದೇಶವನ್ನು ಭಾರತ ಹಿಂದಿಕ್ಕಿದೆ. ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ಇದ್ದಾರೆ. ಡಬಲ್ ಎಂಜಿನ್ ಸರ್ಕಾರ ಇರುವುದರಿಂದ ಸಾಕಷ್ಟುಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಹೇಳಿದರು.
ರಾಯಚೂರಿನಲ್ಲಿ ವಿಮಾನ ನಿಲ್ದಾಣ(Airport), ಏತ ನೀರಾವರಿ(Lift irrigation) ವರ್ತುಲ ರಸ್ತೆ, ಭಾರತಮಾಲಾ ಯೋಜನೆ(Bharat mala project)ಯಡಿ ಆರು ಲೈನ್ ರಸ್ತೆ, ಜವಳಿ ಪಾರ್ಕ್, ಹೊಸ ಕೈಗಾರಿಕಾ ವಲಯ, ರಾಯಚೂರು ಮಹಾನಗರ ಪಾಲಿಕೆ ಆಗಲಿದೆ. ನಂಜುಂಡಪ್ಪ ವರದಿ ಜಾರಿಗಾಗಿ ಸಾವಿರಾರು ಕೋಟಿ ಅನುದಾನ ಕೊಡಲಾಗಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ಮಾತನಾಡಿ, ಸುಳ್ಳು ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾಂಗ್ರೆಸ್ ಅವಮಾನ, ಅಪಮಾನ ಹಾಗೂ ಅಪಪ್ರಚಾರದಲ್ಲಿ ಸಂಪೂರ್ಣವಾಗಿ ಮುಳುಗಿದ್ದು, ನಿರಂತರ ಸೋಲಿನಿಂದ ಕಂಗೆಟ್ಟಿದೆ ಎಂದರು.
ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್ಡಿಕೆಗೆ ನೇರ ಸವಾಲು ಹಾಕಿದ ಶಿವನಗೌಡ ನಾಯಕ
ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu), ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ರಘುನಾಥ್ ಮಲ್ಕಾಪುರೆ ಇದ್ದರು