Asianet Suvarna News Asianet Suvarna News

ವಿಜಯನಗರ ಬಿಜೆಪಿ ಬಂಡಾಯ ಅಭ್ಯರ್ಥಿಗೆ 101 ಲೀ. ಕ್ಷೀರಾಭಿಷೇಕ!

ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಗಳು| ಅಭ್ಯರ್ಥಿಗಳ ಪರ ಬೆಂಬಲಿಗರ ಭರ್ಜರಿ ಪ್ರಚಾರ| ವಿಜಯನಗರ ಬಿಜೆಪಿ ಬಂಡಾಯ ಅಭ್ಯರ್ಥಿಗೆ 101 ಲೀ. ಕ್ಷೀರಾಭಿಷೇಕ

Hospet Fans Pour 101 Liter Milk On BJP Rebel Candidate Kaviraj Urs
Author
Bangalore, First Published Nov 19, 2019, 8:29 AM IST
  • Facebook
  • Twitter
  • Whatsapp

ಹೊಸ​ಪೇ​ಟೆ[ನ.19]: ವಿಜಯನಗರದಲ್ಲಿ ಅನರ್ಹ ಶಾಸಕ ಆನಂದ​ಸಿಂಗ್‌ ಬಿಜೆಪಿ ಟಿಕೆಟ್‌ ನೀಡಿ​ರುವುದಕ್ಕೆ ಮುನಿ​ಸಿ​ಕೊಂಡು ಪಕ್ಷೇ​ತರ ಅಭ್ಯ​ರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕವಿ​ರಾಜ್‌ ಅರಸ್‌ ಅವರಿಗೆ ಅವರ ಬೆಂಬಲಿಗರು 101 ಲೀಟರ್‌ ಹಾಲಿನ ಅಭಿಷೇಕ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಕವಿರಾಜ್‌ ಇಲ್ಲಿನ ಮೃತ್ಯುಂಜಯ ನಗ​ರ​ದ​ ಬಾಲಾಂಜ​ನೇಯ ದೇವ​ಸ್ಥಾ​ನಕ್ಕೆ ತೆರ​ಳಿ, ಆಂಜ​ನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿ​ಸಿದ ಬಳಿಕ ಕಾಲ್ನ​ಡಿ​ಗೆ​ಯಿಂದ ಉಪ​ವಿ​ಭಾ​ಗಾ​ಧಿ​ಕಾರಿ ಕಚೇ​ರಿಗೆ ತೆರಳಿ ಚುನಾ​ವ​ಣಾ​ಧಿ​ಕಾರಿ ಶೇಖ್‌ ತನ್ವೀರ್‌ ಆಸೀಫ್‌ ಅವ​ರಿಗೆ ನಾಮಪತ್ರ ಸಲ್ಲಿ​ಸಿ​ದ​ರು.

ಕವಿರಾಜ್‌ ನಾಮ​ಪತ್ರ ಸಲ್ಲಿಸಿ ಹೊರಬರುತ್ತದ್ದಂತೆಯೇ ಅವರ ಬೆಂಬಲಿಗರು 101 ಲೀಟರ್‌ ಹಾಲಿನ ಅಭಿ​ಷೇಕ ಮಾಡುವ ಮೂಲಕ ಅಭಿ​ಮಾನ ಮೆರೆ​ದ​ರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios