ಸಚಿವ ಆನಂದ ಸಿಂಗ್ ಹಲವು ಬೇಡಿಕೆ ಪಟ್ಟಿಗಳನ್ನು ಮುಂದಿರುವ ಮೂಲಕ ರಾಜಕೀಯದಲ್ಲಿ ಆನಂದ ಸಿಂಗ್ ನನಗೆ ಹಾರ್ಟ್ ಅ್ಯಟಾಕ್ ಅಗೋ ಹಾಗೆ ಮಾಡ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ವಿಜಯನಗರ (ಏ.16): ಸಚಿವ ಆನಂದ ಸಿಂಗ್ ಗುಡ್ಡಕ್ಕೆ ಹಗ್ಗ ಕಟ್ಟಿ ಎಳೆಯುತ್ತಾರೆ. ಅವರು ಯಾವಾಗಲೂ ದೊಡ್ಡ ದೊಡ್ಡ ಕೆಲಸಗಳನ್ನು, ಅಸಾಧ್ಯ ಎನ್ನುವುದನ್ನು ಸಾದ್ಯ ಮಾಡ್ತಾರೆ. ಜೊತೆಗೆ, ಹಲವು ಬೇಡಿಕೆ ಪಟ್ಟಿಗಳನ್ನು ಮುಂದಿರುವ ಮೂಲಕ ರಾಜಕೀಯದಲ್ಲಿ ಆನಂದ ಸಿಂಗ್ ನನಗೆ ಹಾರ್ಟ್ ಅ್ಯಟಾಕ್ ಅಗೋ ಹಾಗೆ ಮಾಡ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹೊಸಪೇಟೆಯಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ಸಮಾನ ಮನಸ್ಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಅವರನ್ನು ಹರಸಿ ಬೆಂಬಲಿಸಬೇಕು. ಎಲ್ಲ ಸವಾಲುಗಳನ್ನು ಎದುರಿಸೋ ಗುಣವಿರೋ ಆನಂದ ಸಿಂಗ್, ಗುಡ್ಡಕ್ಕೆ ಹಗ್ಗ ಕಟ್ಟುತ್ತಾರೆ ಎಳೆಯುತ್ತಾರೆ. ದೊಡ್ಡ ಕೆಲಸ ಮಾಡ್ತಾರೆ ಅಸಾಧ್ಯ ಎನ್ನುವುದನ್ನು ಸಾದ್ಯ ಮಾಡ್ತಾರೆ. ವಿಜಯನಗರ ಜಿಲ್ಲೆಗಾಗಿ 20 ವರ್ಷದಿಂದ ಬೇಡಿಕೆ ಇತ್ತು. ಆದರೆ ಒಂದೇ ವರ್ಷದಲ್ಲಿ ಆನಂದ ಸಿಂಗ್ ಜಿಲ್ಲೆಯ ಕನಸನ್ನು ನನಸು ಮಾಡಿದ್ದಾರೆ. ಜಿಲ್ಲೆ ಮಾಡೋದಕ್ಕಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋದರು. ಆದರೆ, ಸಮ್ಮಿಶ್ರ ಸರ್ಕಾರ ಬಂತು. ಅಲ್ಲಿಯೂ ಆಸೆ ನೆರವೇರದ ಕಾರಣ ಬಿಜೆಪಿಗೆ ಸೇರಿ ಸ್ವತಂತ್ರ ಅಧಿಕಾರಕ್ಕೆ ತಂದು ಜಿಲ್ಲೆಯ ಕನಸನ್ನು ನನಸು ಮಾಡಿದರು ಎಂದರು.
ಸವದಿ ಹೆಣವನ್ನು ಸ್ಮಶಾನಕ್ಕೆ ಕಳಿಸಿ, ಬಿಜೆಪಿ ಕಚೇರಿ ಮುಂದೆ ಯಾಕೆ ತರ್ತೀರಿ?: ಯತ್ನಾಳ್
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಜಿಲ್ಲೆಯಾಗುತ್ತದೆ ಎಂದು ಕಾಂಗ್ರೆಸ್ ಬಿಟ್ಟು ಪುನಃ ಬಿಜೆಪಿಗೆ ಬಂದರು. ನಂತರ, ಸರ್ಕಾರವೇ ಇಲ್ಲ ಜಿಲ್ಲೆ ಹೇಗೆ ಮಾಡೋಣ ಎಂದಾಗ ಸರ್ಕಾರ ರಚನೆ ಮಾಡಿ ಜಿಲ್ಲೆ ಮಾಡೋಣ ಎಂದು ನನಗೆ ಹೇಳಿದ್ದರು. ಬೇಡಿಕೆಗಳ ಪಟ್ಟಿ ಮೂಲಕ ರಾಜಕೀಯದಲ್ಲಿ ಆನಂದ ಸಿಂಗ್ ನನಗೆ ಹಾರ್ಟ್ ಅ್ಯಟಾಕ್ ಅಗೋ ಹಾಗೆ ಮಾಡ್ತಾರೆ. ಪವರ್ ಪೊಲಿಟಿಕ್ಸ್ ಬೇಡ ಪಿಪ್ಯೂಲ್ (ಮಕ್ಕಳ) ಪೊಲಿಟಿಕಲ್ ಬೇಕು ಎಂದು ಮಗನ್ನು ಕರೆದುಕೊಂಡು ಬಂದರು. ಸಾಮಾನ್ಯರಲ್ಲಿ ಸಾಮಾನ್ಯವಾದ ಸಿದ್ದಾರ್ಥ್ ಸಿಂಗ್ ಭಾಷಣ ಮೆಚ್ಚಿದ ಬೊಮ್ಮಾಯಿ, ತಂದೆ ಮಗನಿಗೆ ಸೇರು ಸವಾಸೇರು ಎಂದ ತಮಾಷೆ ಮಾಡಿದರು.
ಸಚಿವ ಆನಂದ್ ಸಿಂಗ್ ಮಾತನಾಡಿ, ಮುಖ್ಯಮಂತ್ರಿ ಅಂದರೆ ಚೀಫ್ ಮಿನಿಸ್ಟರ್ ಅಲ್ಲ. ಅದರ ಅರ್ಥ ಬದಲಾವಣೆ ಮಾಡಿದ ನಮ್ಮ ಸಿಎಂ ಕಾಮನ್ ಮ್ಯಾನ್ ಆಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಸಿಎಂ ಹೊಸ ಕನಸನ್ನು ಕಟ್ಟಿದ್ದಾರೆ. ಅವರ ಕೈ ಬಲಪಡಿಸಬೇಕಿದೆ. ಯುವ ನಾಯಕನಲ್ಲ ನನ್ನ ಮಗ ಯುವ ಸೇವಕ. ಯುವರಾಜ, ಯುವ ನಾಯಕ ಇದ್ಯಾವುದು ಅಲ್ಲ. ಸಿದ್ದಾರ್ಥ ಕೇವಲ ಸೇವಕ. ಮಗನ ಪರ ಮತವನ್ನು ಚಲಾಯಿಸಿ ಗೆಲ್ಲಿಸಿ. ಸಿದ್ದಾರ್ಥ ಕ್ಷೇತ್ರದ ಅಭಿವೃದ್ಧಿಗೆ ಹೊಸ ಕನಸನ್ನು ಕಟ್ಟಿಕೊಂಡಿದ್ದಾರೆ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ನಿಮಗೆಲ್ಲಾ ಮಾನ, ಮರ್ಯಾದೆ, ಸ್ವಾಭಿಮಾನ ಇದೆಯಾ? ಶೆಟ್ಟರ್, ಸವದಿ ವಿರುದ್ಧ ಯತ್ನಾಳ್ ಕೆಂಡ
ಆನಂದ್ ಸಿಂಗ್ ಗ್ಯಾರಂಟಿಗೆ ವಾರಂಟಿಯಾಗಿ ಕೆಲಸ ಮಾಡ್ತೇನೆ: ಹೊಸಪೇಟೆ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರೇ ಮತ್ತೊಮ್ಮೆ ಭವಿಷ್ಯದ ಮುಖ್ಯಮಂತ್ರಿ ಎಂದು ಹೇಳಿದರು. ಆನಂದ ಸಿಂಗ್ ಅವರ ಮೇಲಿರೋ ಭರವಸೆ, ಅಭಿವೃದ್ಧಿಯನ್ನು ಮುಂದುವರೆಸಲು ನನಗೆ ಬಿ-ಪಾರಂ ಕೊಟ್ಟಿದ್ದಾರೆ. 2008ರಲ್ಲಿ ಆನಂದ ಸಿಂಗ್ ಅವರನ್ನು ಹೇಗೆ ಮೊದಲ ಬಾರಿ ಗೆಲ್ಲಿಸಿದ್ರಿ. ಹಾಗೇ ನನಗೂ ಆಶೀರ್ವಾದ ಮಾಡಿ. 15 ವರ್ಷದಲ್ಲಿ ಆನಂದ ಸಿಂಗ್ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಅದನ್ನು ಮುಂದುವರೆಸುವೆ. ರಾಜ್ಯ ಕೇಂದ್ರದ ಮಾದರಿಯಲ್ಲಿ ಹೊಸಪೇಟೆಯಲ್ಲಿ ನಾನು ನಮ್ಮ ತಂದೆ ಡಬಲ್ ಎಂಜಿನ್ ಸರ್ಕಾರದ ಕೆಲಸ ಮಾಡ್ತಿದ್ದೇವೆ. ವಿದ್ಯಾವಂತ, ಯುವಕನಿದ್ದೇನೆ ಆನಂದ ಸಿಂಗ್ ಅವರಗಿಂತ ಹೆಚ್ಚು ಕೆಲಸ ಮಾಡ್ತೇನೆ. 1 ಲಕ್ಷ ಮತ ತೆಗೆದುಕೊಳ್ಳ ಬೇಕೆನ್ನು ಗುರಿಯಿಂದ ಚುನಾವಣೆಗೆ ಕಣದಲ್ಲಿ ಇದ್ದೇನೆ. ಆನಂದ ಸಿಂಗ್ ಅವರೇ ಗ್ಯಾರಂಟಿ ಅವರ ವಾರಿಂಟಿಯಾಗಿ ಕೆಲಸ ಮಾಡ್ತೇನೆ ಎಂದರು.
