Asianet Suvarna News Asianet Suvarna News

ಡಾ.ಪರಮೇಶ್ವರ ದ್ರಾಕ್ಷಿ ಗೋಡಂಬಿ ಹೋಮ್ ಮಿನಿಸ್ಟರ್: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್!

ಗೃಹ ಸಚಿವ ಪರಮೇಶ್ವರ್ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಇವರು ದ್ರಾಕ್ಷಿ ಗೋಡಂಬಿ ತಿನ್ನುವ ಹೋಮ್ ಮಿನಿಸ್ಟರ್ ಆಗಿದ್ದಾರೆ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬೆಂಗಳೂರು ಮಾಜಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆಗ್ರಹಿಸಿದ್ದಾರೆ.

Home Minister Dr Parameshwara resign demands Former Police Commissioner Bhaskar Rao sat
Author
First Published Sep 10, 2024, 12:51 PM IST | Last Updated Sep 10, 2024, 12:51 PM IST

ಬೆಂಗಳೂರು (ಸೆ.10): ರಾಜ್ಯದಲ್ಲಿ ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡುವುದಕ್ಕೆ ಪ್ರಯತ್ನ ಮಾಡಿರುವುದು ದೊಡ್ದ ವಿಚಾರವಾಗಿದ್ದರೂ ಇಲ್ಇ ಬೇಹುಗಾರಿಕೆ ದಳ ವಿಫಲತೆ ಕಂಡುಬರುತ್ತಿದೆ. ಇನ್ನು ರಾಜ್ಯದಲ್ಲಿ ವಾರ್ಷಿಕ 2 ಸಾವಿರ ಪೊಲೀಸರು ನಿವೃತ್ತಿ ಹೊಂದುತ್ತಿದ್ದರೂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಡಾ.ಜಿ. ಪರಮೇಶ್ವರ ದ್ರಾಕ್ಷಿ, ಗೋಡಂಬಿ ಹೋಮ್ ಮಿನಿಸ್ಟರ್ ಆಗಿದ್ದಾರೆ ಎಂದು ಬೆಂಗಳೂರು ಮಾಜಿ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅತಿ ದೊಡ್ದ ಬಾಂಬ್ ಬ್ಲಾಸ್ಟ್ ಪ್ರಕರಣ ನಡೆದಿದೆ. ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡುವ ಪ್ರಯತ್ನ ಮಾಡಿದ್ದರು. ಇದು ಅತ್ಯಂತ ದೊಡ್ಡ ವಿಚಾರವಾಗಿದ್ದು, ಇದರಲ್ಲಿ ಬೇಹುಗಾರಿಕೆ ವೈಫಲ್ಯ ಆಗಿರುವುದು ಕಂಡುಬಂದಿದೆ. ರಾಜ್ಯ ಪೊಲೀಸ್ ಇಲಾಖೆ ರಕ್ಷಣೆ ನೀಡುವಲ್ಲಿ ವಿಫಲ ಆಗಿದೆ. ಸಿಸಿಬಿ ಇಂದನೇ ಕ್ರೈಂ ಜಾಸ್ತಿ ಆಗುತ್ತಿದೆ. ಸಿಸಿಬಿ ಬಂದ್ ಮಾಡಿದ್ರೆ ಕ್ರೈಂ ಕಡಿಮೆ ಆಗುತ್ತದೆ. ಸಿಸಿಬಿಯೆ ವಸೂಲಿ ಮಾಡಿಕೊಂಡು ಬಾ ಎಂದು ಕಳಿಸಿಕೊಡುತ್ತದೆ. ಸಿಸಿಬಿಯಿಂದ ಏನು ಸಹಾಯ ಆಗಿದೆ ಹೇಳಿ.? ಎನ್ನುತ್ತಾ ಸಿಸಿಬಿ ಮೇಲೆ ಮಾಜಿ ಕಮೀಷನರ್ ಭಾಸ್ಕರ ರಾವ್ ಗಂಭೀರ ಆರೋಪ ಮಾಡಿದರು. 

ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಪ್ರತಿ ವರ್ಷ 1,500 ರಿಂದ 2,000 ಪೇದೆಗಳು ನಿವೃತ್ತಿ ಆಗುತ್ತಿದ್ದಾರೆ. ಆದರೆ, ಹೊಸದಾಗಿ ಭರ್ತಿ ಮಾಡ್ತಾ ಇಲ್ಲ. ಪರಿಣಾಮಕಾರಿಯಾಗಿ ಗೃಹ ಸಚಿವರು ಕೆಲಸ ಮಾಡ್ತಾ ಇಲ್ಲ. ಇವರು ದ್ರಾಕ್ಷಿ, ಗೋಡಂಬಿ ಹೋಮ್ ಮಿನಿಸ್ಟರ್ ಆಗಿದ್ದಾರೆ. ಪರಮೇಶ್ವರ ಹೋಮ್ ಮಿನಿಸ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರದಿಂದ ನಿರ್ಭಯ ಯೋಜನೆಯಡಿ ರಾಜ್ಯಕ್ಕೆ ಮತ್ತು ಬೆಂಗಳೂರಿಗೆ ಹಣ ಬಂದರೂ ಅದನ್ನು ಸರಿಯಾಗಿ ಖರ್ಚು ಮಾಡುತ್ತಿಲ್ಲ. ಹೆಣ್ಣು ಮಕ್ಕಳು ರಾತ್ರಿ ಒಬ್ಬರೆ ನಡೆದು ಹೋಗಬಹುದು ಎಂದು ಯಾರಾದರೂ ಅಭಯ ನೀಡ್ತಾರಾ? ಹೋಮ್ ಮಿನಿಸ್ಟರ್ ಸಂಪೂರ್ಣ ವಿಫಲ ಆಗಿದ್ದಾರೆ. ರಾಷ್ಟ್ರೀಯ ಪಕ್ಷದ ಕಚೇರಿಗೆ ಬಾಂಬ್ ಹಾಕೋಕೆ ಬರ್ತಾರೆ ಎಂದರೆ ಏನು ಅರ್ಥ? ಎಂದು ಪ್ರಶ್ನೆ ಮಾಡಿದರು. 

ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರನೇ ಮಾಸ್ಟರ್ ಮೈಂಡ್ ಮತ್ತು ಲೋಕಸಭೆ ಚುನಾವಣೆಗೆ ಹಣ ಬಳಕೆ!

ರಾಜ್ಯದಲ್ಲಿ ಕೋಟ್ಯಾಂತರ ಖರ್ಚು ಮಾಡಿ ಆಂತರಿಕ ಭದ್ರತಾ ಇಲಾಖೆ ಸ್ಥಾಪನೆ ಮಾಡಿದ್ದೇವೆ. ಭಯೋತ್ಪಾದಕ ಚಟುವಟಿಕೆ ತಡೆಯಲು ಇರುವ ಇಲಾಖೆ ಇದೆ. ಆದರೆ, ಈ ಸರ್ಕಾರ ಈ ಇಲಾಖೆ ಜೊತೆ ಒಂದು ರಿವ್ಯೂ ಮಿಟಿಂಗ್ ಮಾಡಿಲ್ಲ. ಅದಕ್ಕೆ ಎನ್‌ಐಎ ಬಂದು ಇಲ್ಲಿ ತನಿಖೆ ಮಾಡ್ತಾ ಇದೆ. ಅರೆಸ್ಟ್ ಮಾಡ್ತಾ ಇದೆ. ಬೆಂಗಳೂರು ಪೊಲೀಸ್ ಮಾಡುವ ವಸೂಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಿಸಿಬಿ ಮೂಲಕ ಮಾಡುತ್ತದೆ. ಭ್ರಷ್ಟಾಚಾರದಿಂದಾಗಿ ಜನರಿಗೆ ಭದ್ರತೆ ಸಿಗುತ್ತಿಲ್ಲವೆಂದು ಬೆಂಗಳೂರು ನಗರ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಗಂಭೀರ ಆರೋಪ ಮಾಡಿದರು.

Latest Videos
Follow Us:
Download App:
  • android
  • ios