ನಮ್ಮದು ಬಡವರ ಪರವಾದ ಸರ್ಕಾರ: ಗೃಹ ಸಚಿವ ಪರಮೇಶ್ವರ್
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರವಾಗಿದ್ದು ಗ್ಯಾರಂಟಿಗಳ ಈಡೇರಿಕೆಗೆ ತಿಂಗಳಿಗೆ ಸುಮಾರು 42000 ಕೋಟಿ ಖರ್ಚು ಮಾಡುತ್ತಿದ್ದು ನಮ್ಮದು ಬಡವರ ಪರವಾದ ಸರ್ಕಾರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ (ಅ.23): ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರವಾಗಿದ್ದು ಗ್ಯಾರಂಟಿಗಳ ಈಡೇರಿಕೆಗೆ ತಿಂಗಳಿಗೆ ಸುಮಾರು 42000 ಕೋಟಿ ಖರ್ಚು ಮಾಡುತ್ತಿದ್ದು ನಮ್ಮದು ಬಡವರ ಪರವಾದ ಸರ್ಕಾರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಪಟ್ಟಣದ ಮಾರುತಿ ಕಲ್ಯಾಣಮಂಟಪದಲ್ಲಿ ಆರ್ಡಿಪಿಅರ್, ತಾಲೂಕು ಅಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಫಲಾನುಭವಿಗಳಿಗೆ 70 ಕೋಟಿ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ವಿಧಾನಸಭಾ ಚುನಾವಣ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಬಡರಿಗಾಗಿ ಐದು ಗ್ಯಾರಂಟಿಗಳನ್ನು ನೀಡಿತ್ತು, ಆಗ ವಿರೋಧ ಪಕ್ಷದವರು ನಮ್ಮನ್ನು ಅಡಿಕೊಂಡರು ಚುನಾವಣೆ ನಂತರ ನಮ್ಮ ಸರ್ಕಾರ ಬಂದ ಮೇಲೆ ಅವುಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಯಿತು. ಈಗ ಟೀಕಿಸುತ್ತಿದ್ದಾರೆ. ಆದರೆ ಈ ಸವಲತ್ತುಗಳನ್ನು ಬಡವರಿಗಾಗಿ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಶ್ರೀಮಂತರ ಪರ ಇರದೆ ಬಡವರ ಪರ ಸದಾ ಇರುತ್ತದೆ. ಯಾವುದೇ ಕಾರಣಕ್ಕೂ ಈ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದರು.
ಮಾಧ್ಯಮಗಳ ಮುಂದೆ ಶಾಸಕರ ಹೇಳಿಕೆ ಬಗ್ಗೆ ಡಿಕೆಶಿ ಕೇಳಿ: ಸಚಿವ ಚಲುವರಾಯಸ್ವಾಮಿ
ರಾಜ್ಯದಲ್ಲಿ ಶೇ. 80 ರಷ್ಟು ಬರಗಾಲವಿದ್ದು 226 ತಾಲೂಕುಗಳಲ್ಲೂ 200 ತಾಲೂಕುಗಳು ಬರಪೀಡಿತ ತಾಲೂಕುಗಳಾಗಿದ್ದಾವೆ. ಬರನಿರ್ವಹಣೆಗೆ ಸರ್ಕಾರ ಎಲ್ಲಾ ರೀತಿಯ ತಯಾರಿಮಾಡಿಕೊಂಡಿದೆ. ತುಮಕೂರು ಜಿಲ್ಲೆಯಲ್ಲಿ ಬಡವರಿಗೆ ಮನೆಕಟ್ಟಿಕೊಳ್ಳಲು 2000 ಕೋಟಿ ಅನುದಾನ ನೀಡಿದ್ದು ಅದೇ ರೀತಿ ನರೇಗಾದಲ್ಲಿ ದುಡಿದವರಿಗೆ 750 ಕೋಟಿ ಮಂಜೂರು ಮಾಡಲಾಗಿದೆ. ಇಂದು ಕೊರಟಗೆರೆ ತಾಲೂಕಿನಲ್ಲಿ 40930 ಸಾವಿರ ಮಹಿಳೆಯರು ಗೃಹಲಕ್ಷೀ ಭಾಗ್ಯವನ್ನು 16,36,0800 ಕೋಟಿ ರು.ಗಳನ್ನು ಪಡೆಯತ್ತಿದ್ದಾರೆ, ಅದೇ ರೀತಿ 2.25 ಕೋಟಿ ಮಹಿಳೆಯರು ಉಚಿತ ಬಸ್ ನಲ್ಲಿ ಪ್ರಯಾಣಿಸಿದ್ದಾರೆ.
10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸಿಂಹ ಸ್ವಪ್ನವಾಗಿದ್ದ ಶ್ವಾನ ಟಿಪ್ಪುವಿಗೆ ಭಾವನಾತ್ಮಕ ಬೀಳ್ಕೊಡುಗೆ!
ಅದರ ಮೊತ್ತ 16 ಕೋಟಿಯಾಗಿದೆ, ಅನ್ನಬಾಗ್ಯಕ್ಕೆ 64 ಕೋಟಿ ಖರ್ಚು ಮಾಡಲಾಗುತ್ತಿದೆ. ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಹೆಣ್ಣು ಮಕ್ಕಳಿಗೆ 1,75 ಕೋಟಿ ನೀಡುತ್ತಿದ್ದು, ಇಂದು ತಾಲೂಕಿನ ವಿವಿಧ ಫಲಾನುಭಾವಿಗಳಿಗೆ 70 ಕೋಟಿ ಸವಲತ್ತು ನೀಡುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀನಿವಾಸ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು, ಜಿಲ್ಲಾ ಪೋಲೀಸ್ ವರಿಷ್ಠಾ ಧಿಕಾರಿ, ಅಶೋಕ್ ಕೆ.ವಿ. ತಾಲೂಕು ಮಟ್ಟದ ಅಧಿಕಾರಿಗಳಾದ ದೀಪಶ್ರೀ, ರಂಜೀತ್, ದೊಡ್ಡಸಿದ್ದಯ್ಯ, ಅನಿಲ್, ನಾಗರಾಜು, ಅಂಬಿಕಾ ಸೇರಿದಂತೆ ಇತರರು ಹಾಜರಿದ್ದರು.