Asianet Suvarna News Asianet Suvarna News

10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸಿಂಹ ಸ್ವಪ್ನವಾಗಿದ್ದ ಶ್ವಾನ ಟಿಪ್ಪುವಿಗೆ ಭಾವನಾತ್ಮಕ ಬೀಳ್ಕೊಡುಗೆ!

ಕಳೆದ 10 ವರ್ಷಗಳಿಂದ ಪೋಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದ ಚಿಕ್ಕಮಗಳೂರು ಜಿಲ್ಲೆಯ ಶ್ವಾನದಳದ ಶ್ವಾನ ಟಿಪ್ಪುವಿಗೆ ಇಂದು ಭಾವನಾತ್ಮಕ ಬೀಳ್ಕೊಡುಗೆ ನೀಡಲಾಯಿತು. 

police dog named tippu retired after ten years of service in chikkamagaluru gvd
Author
First Published Oct 23, 2023, 10:03 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.23): ಕಳೆದ 10 ವರ್ಷಗಳಿಂದ ಪೋಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದ ಚಿಕ್ಕಮಗಳೂರು ಜಿಲ್ಲೆಯ ಶ್ವಾನದಳದ ಶ್ವಾನ ಟಿಪ್ಪುವಿಗೆ ಇಂದು ಭಾವನಾತ್ಮಕ ಬೀಳ್ಕೊಡುಗೆ ನೀಡಲಾಯಿತು. ಚಿಕ್ಕಮಗಳೂರು ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ರಾಮನಹಳ್ಳಿ, ಹುತಾತ್ಮರ ಸ್ಮಾರಕದ ಆವರಣದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ಮೀನಾನಾಗರಾಜ್ ಶ್ವಾನ ಟಿಪ್ಪು ಕರ್ತವ್ಯದಿಂದ ನಿವೃತ್ತಗೊಂಡ ಹಿನ್ನೆಲೆಯಲ್ಲಿ ಶಾಲು ಹೊದಿಸಿ ಮಣಿಹಾರ ಹಾಕಿ ಬೀಳ್ಕೊಡುಗೆ ನೀಡಲಾಯಿತು. 

ಟಿಪ್ಪು ನಿವೃತ್ತ ಜೀವನ ಸುಖಕರವಾಗಿರಲಿ: ಕಳೆದ 10 ವರ್ಷಗಳಿಂದ ದುಡಿದ ಶ್ವಾನ ಟಿಪ್ಪು ನಿವೃತ್ತ ಜೀವನ ಸುಖಕರವಾಗಿರಲೆಂದು ಪೋಲೀಸ್ ವರಿಷ್ಠಾಧಿಕಾರಿ ವಿಕ್ರಮಅಮಟೆ, ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಹಾರೈಸಿದರು.ನಿವೃತ್ತಗೊಂಡು ಟಿಪ್ಪು ಶ್ವಾನವು 2013ರಲ್ಲಿ ಜಿಲ್ಲಾ ಪೋಲೀಸ್ ಇಲಾಖೆಯ ಶ್ವಾನದಳಕ್ಕೆ ಅಪರಾಧ ಪತ್ತೆ ಶ್ವಾನವಾಗಿ ಸೇರ್ಪಡೆಯಾಗಿತ್ತು.ಆ ಶ್ವಾನವನ್ನು ಇಲಾಖೆಯ ತರಬೇತುದಾರರಾದ ಮಂಜುನಾಥ್ರವರು ಮಧ್ಯ ಪ್ರದೇಶದ ಟೇಕನ್ಪುರದಲ್ಲಿರುವ ಬಿಎಸ್ಎಸ್ ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು. 

ಕಲಾವಿದರಿಂದಲೇ ರಂಗ ಚಳುವಳಿ ಬೆಳೆಸುವ ಕೆಲಸವಾಗಬೇಕು: ನಟ ಮಂಡ್ಯ ರಮೇಶ್

ನಂತರದ ದಿನಗಳಲ್ಲಿ ಇಲಾಖೆಯ ಸಹಾಯಕ ನಿರ್ವಾಹಕರಾದ ಕುಮಾರ್ರವರೊಂದಿಗೆ ಸೇವೆ ಆರಂಭಿಸಿದ ಶ್ವಾನ ಟಿಪ್ಪು ತನ್ನ ಸೇವಾವಧಿಯಲ್ಲಿ ಜಿಲ್ಲೆಯ ವಿವಿಧ ಪೋಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಕಳ್ಳತನ, ದರೋಡೆ, ಕೊಲೆ ಇತ್ಯಾದಿ 35 ಪ್ರಕರಣಗಳಲ್ಲಿ ಸುಳಿವು ನೀಡಿ 9 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕರಿಸಿತ್ತು.2016 ,2019ಮತ್ತು 2020ನೇ ಸಾಲಿನಲ್ಲಿ ವಲಯ ಮಟ್ಟದ ಪೋಲೀಸ್ ಕರ್ತವ್ಯ ಕೂಟದಲ್ಲಿ ಬೆಳ್ಳಿ ಪದಕಕ್ಕೆ ಭಾಜನವಾಗಿತ್ತು.2019ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪೋಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇತ್ತೀಚೆಗೆ ಜಿಲ್ಲಾಡಳಿತದಿಂದ ನಡೆದ ಜಿಲ್ಲಾ ಉತ್ಸವದ ಡಾಗ್ ಶೋನಲ್ಲಿ ಭಾಗವಹಿಸಿತ್ತು.ಇದೇ ಸಂದರ್ಭದಲ್ಲಿ ಟಿಪ್ಪು ಶ್ವಾನದ ನಿರ್ವಾಹಕರಾದ ಮಂಜುನಾಥ್ರವರಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಜಿ.ಪಂ. ಸಿಇಓ ಗೋಪಾಲಕೃಷ್ಣ ಇದ್ದರು.

Follow Us:
Download App:
  • android
  • ios