ಬಿಜೆಪಿ-ಜೆಡಿಎಸ್‌ ಮೈತ್ರಿಗೆ ನಮ್ಮ ತಕರಾರು ಇಲ್ಲ: ಸಚಿವ ಪರಮೇಶ್ವರ್‌

ತಾಲೂಕಿನಲ್ಲಿ ₹147 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ನಾವು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಅಂತ ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. 

Home Minister Dr G Parameshwar Reaction On BJP JDS Alliance gvd

ಪಾವಗಡ (ಸೆ.10): ತಾಲೂಕಿನಲ್ಲಿ ₹147 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ನಾವು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಅಂತ ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಅದಕ್ಕೆ ವಿರುದ್ಧವಾಗಿ ಇವತ್ತು ನಾವು ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದೇವೆ. ಯಾವುದೇ ಕಾಮಗಾರಿ ನಿಂತಿಲ್ಲ. ಸ್ವಲ್ಪ ವಿಳಂಬ ಆಗಿರಬಹುದು. ಹಿಂದಿನ ಸಿಎಂ ಒಂದು ಬಜೆಟ್ ಮಂಡನೆ ಮಾಡಿದ್ರು. ಆ ಬಜೆಟ್ ನಲ್ಲಿ ನಮ್ಮ ಐದು ಗ್ಯಾರಂಟಿಗಳು ಇರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಹೊಸ ಬಜೆಟ್ ಕೊಡಬೇಕಾಗಿ ಬಂತು ಎಂದರು.

ಜೆಡಿಎಸ್ ಜತೆ ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪರಮೇಶ್ವರ್‌ ಪ್ರತಿಕ್ರಿಯಿಸಿ ಅವರು ಮೈತ್ರಿ ಮಾಡಿಕೊಳ್ಳುವುದರಲ್ಲಿ ನಮ್ಮದೇನು ತಕರಾರು ಇಲ್ಲ. ನಾವು ಕಳೆದ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ವಿ. ಅವರ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಏನು ಫಲಿತಾಂಶ ಬಂತು ಅಂತ ಇಡೀ ರಾಜ್ಯದ ಜನ ಗಮನಿಸಿದೆ. ಮೈತ್ರಿಯಿಂದ ಬಿಜೆಪಿಗೆ ಏನ್ ಫಲ ಸಿಗುತ್ತೆ ಅನ್ನೋದನ್ನ ಕಾದುನೋಡೋಣಾ. ಅವರು ಮೈತ್ರಿ ಮಾಡಿಕೊಂಡರಲ್ಲ ಅಂತ ನಮಗೆ ಕಹಿ ಇಲ್ಲ. ಇಂಡಿಯಾ ಅಂತ ಹೇಳಿ ಅನೇಕ ಪಕ್ಷಗಳು ಸೇರಿ ಒಕ್ಕೂಟ ಮಾಡಿಕೊಂಡಿದ್ದೀವಿ. ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತ ಬಯಸಿದ್ದೇವೆ. 

ಮಹಿಷ ದಸರಾ ಅದ್ಹೇಗೆ ಮಾಡ್ತಾರೋ ಮಾಡಲಿ ನೋಡ್ತೀನಿ: ರಾಜ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ಸವಾಲು

ಸ್ವಾಭಾವಿಕವಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿ, ಸರ್ಕಾರ ಜನಮನ್ನಣೆ ಪಡೆದಿರೋದ್ರಿಂದ ಬಿಜೆಪಿ, ಜೆಡಿಎಸ್ ಅವರಿಗೆ ಭಯ ಉಂಟಾಗಿರಬಹುದು ಎಂದರು. ಪರಮೇಶ್ವರ್ ಸಿಎಂ ಆಗಬೇಕು ಎಂಬ ಬಿ.ಕೆ ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ, ನಾನು ಬಿ.ಕೆ ಹರಿಪ್ರಸಾದ್ ಗೆ ಅಭಿನಂದನೆ ಸಲ್ಲಿಸ್ತೀನಿ. ನನ್ನ ಮೇಲೆ ಅಭಿಮಾನ ಇಟ್ಟುಕೊಂಡು ಹೇಳಿದ್ದಾರೆ. ಬಹಳ ಜನ ಬಹಳ ಮಾತು ಹೇಳ್ತಾರೆ. ಅದು ಅವರ ಅಭಿಮಾನ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡುತ್ತೆ. ನಮ್ಮ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದೆ. ಡಿ.ಕೆ.ಶಿವಕುಮಾರ್ ಅವರನ್ನ ಡಿಸಿಎಂ ಮಾಡಿದೆ. ಕೊರಟಗೆರೆಗೂ 200 ಕೋಟಿ ಅನುದಾನ ಬರುತ್ತೆ, ಅಭಿವೃದ್ಧಿಗೆ ಬದ್ಧರಾಗಿರುವುದಾಗಿ ಹೇಳಿದರು.

Latest Videos
Follow Us:
Download App:
  • android
  • ios